ಕಲಬುರಗಿ (ಆ.28) : ನಗರದ ಗೋದುತಾಯಿ ಬಡಾವಣೆಯ ಶಿವಮಂದಿರದ ಬಳಿ ನಡೆದ ಘಟನೆಯಲ್ಲಿ ಅಪರಿಚಿತರಿಬ್ಬರು ಗುಂಡಿನ ದಾಳಿ ನಡೆಸಿ ಬ್ಯುಸಿನೆಸ್‌ ಮ್ಯಾನ್‌ ಸುನೀಲ್‌ ಎಸ್‌ ರಾಂಕಾ ಅವರನ್ನು ಹತ್ಯೆ ಮಾಡಿರುವ ಘಟನೆ ಗುರುವಾರ ನಡೆದಿದೆ. 

ಅಪರಚಿತ ಹಂತಕರು ಸ್ಕೂಟಿ ಮೇಲೆ ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಹತ್ಯೆಗೊಳಗಾದ ಸುನೀಲ್‌ (43) ಕಟ್ಟಡಗಳಿಗೆ ಟೈಲ್ಸ್‌ ಮತ್ತು ಪ್ಲಾಸ್ಟರ್‌ ಟೈಲ್ಸ್‌ ಅಲಂಕಾರ ಮಾಡುವ ಕೆಲಸದವರಾಗಿದ್ದರು.

1 ಕೋಟಿ ಮೌಲ್ಯದ ಗಾಂಜಾ ವಶ: ರಾಜಕಾರಣಿ ಸೇರಿ ಮೂವರ ಸೆರೆ

ಇವರು ರಾಜಸ್ಥಾನದ ಮೂಲದವರು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್‌ ಕಮಿಷನರ್‌ ಸತೀಶ್‌ ಕುಮಾರ್‌ ಭೇಟಿ ನೀಡಿದ್ದಾರೆ. ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ: ಗುಂಡಿಟ್ಟು ಯುವಕನ ಹತ್ಯೆ

 ಯುವಕನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಗ್ರಾಮದ ಬಳಿ ಗುರುವಾರ ನಡೆದಿರುವ ಬಗ್ಗೆ ವರದಿಯಾಗಿದೆ. ಹೊಸೂರು ಗ್ರಾಮದ ಪುನೀತ್‌(25) ಮೃತ ಯುವಕ. 

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ 1 ಕೋಟಿ ರುಪಾಯಿ ಮೌಲ್ಯದ ಗಾಂಜಾ ವಶ...

ರಾತ್ರಿ 9 ಗಂಟೆ ಸುಮಾರಿಗೆ ಬೇಡಿಗನಹಳ್ಳಿ ಕೆರೆ ಏರಿಯ ಮೇಲೆ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದೊಂದು ತಿಂಗಳಲ್ಲಿ ನಡೆದ 9ನೇ ಹತ್ಯೆ ಪ್ರಕರಣ ಇದಾಗಿದೆ.