Asianet Suvarna News Asianet Suvarna News

ಯಾದಗಿರಿ: ಶೀಲ ಶಂಕಿಸಿ ಪತ್ನಿಯ ಕುತ್ತಿಗೆ ಬಿಗಿದು ಕೊಲೆ

ಹನುಮಂತನ ವಿರುದ್ಧ ಸೂಕ್ತ ಕ್ರಮ ಕೊಳ್ಳಬೇಕು ಎಂದು ಮೃತಳ ತಂದೆ ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ನೀರು ನೀಡಿದ್ದಾರೆ. ಮಹಿಳೆ ಕೊಲೆಯಾದ ಸ್ಥಳಕ್ಕೆ ಪಿಎಸ್‌ಐ ಆನಂದ ವಾಗ್ಮೋಡೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.

Husband Killed His Wife at Surapura in Yadgir grg
Author
First Published Feb 24, 2024, 11:20 PM IST

ಸುರಪುರ(ಫೆ.24):  ಶೀಲಶಂಕಿಸಿ ಪತ್ನಿಯ ಕುತ್ತಿಗೆ ಬಿಗಿದು ಪತಿಯೇ ಕೊಲೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. 

ಎಂಟು ವರ್ಷಗಳ ಹಿಂದೆ ತಿಂಥಣಿ ಗ್ರಾಮದ ಹಣಮಂತನಿಗೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನವರಾದ ಅಯ್ಯಪ್ಪ ಕಲ್ಲಪ್ಪ ಅವರು ತಮ್ಮ ಕಿರಿಯ ಮಗಳನ್ನು ವಿವಾಹ ಮಾಡಿಕೊಟ್ಟಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಪರ ಪುರುಷನೊಂದಿಗೆ ಪತ್ನಿ ಅನೈತಿಕ ಸಂಬಂಧವಿದೆ ಎಂದು ಪತಿ ಹನುಮಂತ ಪತ್ನಿಗೆ ಮಾಲಾಶ್ರೀ (ಶ್ರೀದೇವಿ)ಗೆ ಕಿರುಕುಳ ನೀಡುತ್ತಿದ್ದನು. 

ಬೆಂಗಳೂರು: ಕುಡಿದ ಮತ್ತಿನಲ್ಲಿ ಜಗಳ; ಸ್ನೇಹಿತನನ್ನೇ ಕೊಂದ ಪಾಪಿಗಳು!

ಈ ವಿಚಾರವಾಗಿ ಹಿರಿಯ ಸಮ್ಮುಖದಲ್ಲಿ ರಾಜಿ-ಪಂಚಾಯಿತಿಗಳು ನಡೆದಿದ್ದವು. ಹನುಮಂತನ ವಿರುದ್ಧ ಸೂಕ್ತ ಕ್ರಮ ಕೊಳ್ಳಬೇಕು ಎಂದು ಮೃತಳ ತಂದೆ ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ನೀರು ನೀಡಿದ್ದಾರೆ. ಮಹಿಳೆ ಕೊಲೆಯಾದ ಸ್ಥಳಕ್ಕೆ ಪಿಎಸ್‌ಐ ಆನಂದ ವಾಗ್ಮೋಡೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.

ಸುರಪುರ ತಾಲೂಕಿನ ತಿಂಥಣಿಯಲ್ಲಿ ಮಹಿಳೆ ಕೊಲೆಯಾದ ಸ್ಥಳಕ್ಕೆ ಪಿಎಸ್‌ಐ ಆನಂದ ವಾಗ್ಮೋಡೆ ಭೇಟಿ ನೀಡಿ ಪರಿಶೀಲಿಸಿದರು.

Follow Us:
Download App:
  • android
  • ios