Asianet Suvarna News Asianet Suvarna News

ಸಿಂಧನೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನ ನೇಣು ಬಿಗಿದು ಕೊಲೆ ಮಾಡಿದ ಪಾಪಿ ಗಂಡ..!

ಪ್ರತಿನಿತ್ಯ ದುಡಿಯದೆ, ಮದ್ಯ ಸೇವಿಸಿ ಬಂದು ಜಗಳ ಆಡುತ್ತಿದ್ದನು. ಶುಕ್ರವಾರ ರಾತ್ರಿ ಪತ್ನಿ ಭುವನೇಶ್ವರಿಗೆ ಹೊಡೆದಿದ್ದು, ಪ್ರಜ್ಞೆ ತಪ್ಪಿ ಬಿದ್ದಾಗ ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಭುವನೇಶ್ವರಿ ತಾಯಿ ಲಲಿತಮ್ಮ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. 

Husband Killed his Wife at Sindhanur in Raichur grg
Author
First Published Nov 19, 2023, 8:29 PM IST

ಸಿಂಧನೂರು(ನ.19):  ಪತಿಯೊಬ್ಬ ಪತ್ನಿಗೆ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ನಗರದ ನಟರಾಜ ಕಾಲೊನಿಯ ಭುವನೇಶ್ವರಿ (31) ಮೃತ ಮಹಿಳೆ. 

ತಾಲೂಕಿನ ಹೊಸಳ್ಳಿ ಇ.ಜೆ ಗ್ರಾಮದ ನಾಗರಾಜ ಹಾಗೂ ಭುವನೇಶ್ವರಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿ 14 ವರ್ಷಗಳಾಗಿದ್ದು, ಇವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಪ್ರತಿನಿತ್ಯ ಮದ್ಯ ಸೇವಿಸಿ ಹಿಂಸೆ ನೀಡುತ್ತಿದ್ದನು ಎಂದು ಹೇಳಲಾಗಿದೆ.

ಅವಳಿಗಾಗಿ ಬಂದವನು 4 ಹೆಣಗಳನ್ನ ಉರುಳಿಸಿದ್ದ..! ಎಸ್ಕೇಪ್ ಆಗಿದ್ದವನು ತಗ್ಲಾಕಿಕೊಂಡಿದ್ದೇಗೆ..?

ಹೊಸಳ್ಳಿ ಇ.ಜೆ ಗ್ರಾಮ ಬಿಟ್ಟು ಸಿಂಧನೂರು ನಗರದ ಪಟೇಲವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಲ್ಲಿಯೂ ಪ್ರತಿನಿತ್ಯ ದುಡಿಯದೆ, ಮದ್ಯ ಸೇವಿಸಿ ಬಂದು ಜಗಳ ಆಡುತ್ತಿದ್ದನು. ಶುಕ್ರವಾರ ರಾತ್ರಿ ಪತ್ನಿ ಭುವನೇಶ್ವರಿಗೆ ಹೊಡೆದಿದ್ದು, ಪ್ರಜ್ಞೆ ತಪ್ಪಿ ಬಿದ್ದಾಗ ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಭುವನೇಶ್ವರಿ ತಾಯಿ ಲಲಿತಮ್ಮ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪತಿ ನಾಗರಾಜನನ್ನು ಬಂಧಿಸಲಾಗಿದ್ದು, ಪೊಲೀಸ್ ಇನ್ಸ್‌ಪೆಕ್ಟರ್‌ ದುರುಗಪ್ಪ ಡೊಳ್ಳಿನ್ ತನಿಖೆ ಕೈಗೊಂಡಿದ್ದಾರೆ.

Follow Us:
Download App:
  • android
  • ios