*  ಹಿಂಸೆ ಆಗುತ್ತಿದೆ ಎಂದರೂ ಬಿಡದ ಪತಿ*  ಸಹಕರಿಸದಿದ್ದರೆ ಅವಾಚ್ಯವಾಗಿ ನಿಂದನೆ*  ಪತಿ ದೇವರಾಜ್‌ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲು 

ಬೆಂಗಳೂರು(ಡಿ.09): ಪತಿ ತನ್ನೊಂದಿಗೆ ಲೈಂಗಿಕ ಕ್ರಿಯೆ(Sex) ನಡೆಸುವಾಗ ವಿಚಿತ್ರ ಹಾಗೂ ಕ್ರೂರವಾಗಿ ವರ್ತಿಸುತ್ತಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕಾಡುಗೊಂಡನಹಳ್ಳಿ ಪೊಲೀಸ್‌ ಠಾಣೆಗೆ ದೂರು(Complaint) ನೀಡಿದ್ದಾರೆ. 21 ವರ್ಷದ ಮಹಿಳೆ(Woman) ನೀಡಿದ ದೂರಿನ ಮೇರೆಗೆ ಈಕೆಯ ಪತಿ ದೇವರಾಜ್‌ ಎಂಬಾತನ ವಿರುದ್ಧ ಪೊಲೀಸರು(Police) ಎಫ್‌ಐಆರ್‌(FIR) ದಾಖಲಿಸಿದ್ದಾರೆ.

ಮೂರು ತಿಂಗಳ ಹಿಂದೆಯಷ್ಟೇ ದೇವರಾಜ್‌ ಜತೆಗೆ ವಿವಾಹವಾಗಿದ್ದು, ಮೊದಲ ರಾತ್ರಿಯಿಂದಲೂ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ದೇವರಾಜ್‌ ವಿಚಿತ್ರ ಹಾಗೂ ಕ್ರೂರವಾಗಿ ವರ್ತಿಸುತ್ತಿದ್ದರು. ನನಗೆ ಹಿಂಸೆಯಾಗುತ್ತಿದೆ ಎಂದು ಹೇಳಿದರೂ ಆತ ಬಿಡುತ್ತಿರಲಿಲ್ಲ. ನನಗೆ ಅನಾರೋಗ್ಯದ ಸಂದರ್ಭದಲ್ಲಿಯೂ ಲೈಂಗಿಕ ಕ್ರಿಯೆಗೆ ಬಲವಂತ ಮಾಡುತ್ತಿದ್ದರು. ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಹೇಳಿದರೆ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ನಾನು ಹೇಳಿದ ಹಾಗೆ ಕೇಳಬೇಕು ಎಂದು ಹಲ್ಲೆ(Assault) ಮಾಡುತ್ತಿದ್ದರು ಎಂದು ಸಂತ್ರಸ್ತೆ(Victim) ದೂರಿನಲ್ಲಿ ಆರೋಪಿಸಿದ್ದಾರೆ.

Illicit Relationship: ಮಹಿಳೆಯ ರಾಸಲೀಲೆ ವಿಡಿಯೋ ಪತಿಗೆ ಕಳಿಸಿದ್ದವನಿಗೆ ಸಿಕ್ತು ಬೇಲ್‌

ಈ ವಿಚಾರವನ್ನು ತವರು ಮನೆ ಹಾಗೂ ಪತಿಯ ಮನೆಯವರ ಗಮನಕ್ಕೂ ತಂದಿದ್ದೆ. ಈ ವೇಳೆ ಎರಡೂ ಕಡೆಯವರು ಪತಿ ದೇವರಾಜ್‌ಗೆ ಬುದ್ಧಿವಾದ ಹೇಳಿದ್ದರು. ಇನ್ನು ಮುಂದೆ ಹಾಗೆ ವರ್ತಿಸುವುದಿಲ್ಲ ಎಂದು ದೇವರಾಜ್‌ ಭರವಸೆ ನೀಡಿದ್ದರು. ಇದೀಗ ಮತ್ತೆ ಕೆಲ ದಿನಗಳ ಹಿಂದೆ ವಿಚಿತ್ರವಾಗಿ ಲೈಂಗಿಕ ತೊಂದರೆ ಕೊಡಲು ಆರಂಭಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಪೋರ್ನ್‌ಗೆ ದಾಸನಾಗಿದ್ದ ಪತಿ ಮಾಡ್ತಿದ್ದ ಪಾಪದ ಕೆಲಸ.. ಪತ್ನಿಯ ಗೋಳು!

ಪೋರ್ನ್ ಸಿನಿಮಾಗಳಿಂದ ಪ್ರಭಾವಿತನಾಗಿ ಅಸಹಜ ಲೈಂಗಿಕ ಕ್ರಿಯೆಗೆ (unnatural sex ) ತನ್ನ ಪತಿ ಒತ್ತಾಯಿಸುತ್ತಿದ್ದಾನೆ ಅಂತ 45 ವರ್ಷದ ಮಹಿಳೆ (wife) ತನ್ನ 48 ವರ್ಷದ ಗಂಡನ (Husband) ವಿರುದ್ಧ ಪೊಲೀಸರಿಗೆ ದೂರು ನೀಡಿದ ಘಟನೆ ಗುಜರಾತ್‌ನ(Gujrat) ಅಹಮದಾಬಾದ್‌ದನಲ್ಲಿ ಅ.17ರಂದು ನಡೆದಿತ್ತು.

ಅಹಮದಾಬಾದ್‌ನ ನವರಂಗಪುರ ನಿವಾಸಿ ಮಹಿಳೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಪತಿ(IT) ಐಟಿ ಕಂಪನಿ ನಡೆಸುತ್ತಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ, ಮದುವೆಯಾದ(Marriage) ತಕ್ಷಣ, ತನ್ನ ಪತಿ ಕ್ಷುಲ್ಲಕ ವಿಚಾರಗಳಿಗಾಗಿ ತನ್ನ ಮೇಲೆ ಹಲ್ಲೆ ಮಾಡಲು ಆರಂಭಿಸಿದ. ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗುವಂತೆ ಒತ್ತಾಯಿಸಿದನು. ಒಪ್ಪದಿದ್ದಾಗ ಹಲ್ಲೆ ಮಾಡುತ್ತಲೇ ಇದ್ದನು ಎಂದು ಹೇಳಿದ್ದಾಳೆ. ಕೆಲ ತಿಂಗಳುಗಳ ನಂತರ ಒತ್ತಾಯಪೂರ್ವಕವಾಗಿ ನನ್ನನ್ನು ತವರು ಮನೆಗೆ ಕಳಿಸಿದ್ದಾನೆ. ಅಶ್ಲೀಲ ಚಲನಚಿತ್ರಗಳನ್ನು ನೋಡಿಕೊಂಡು ಇಂಥ ಕೆಲಸ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಳು.

ಸಣ್ಣಪುಟ್ಟ ವಿಷಯಗಳಿಗೂ ಮನಬಂದಂತೆ ಥಳಿಸುತ್ತಿದ್ದ. ಮಹಿಳೆಯ ಕುಟುಂಬದ ಸದಸ್ಯರು ಮತ್ತು ಗೆಳೆಯರು ಆಕೆ ಮತ್ತು ಆಕೆಯ ಪತಿ ಬೇರ್ಪಟ್ಟಾಗಲೆಲ್ಲಾ ರಾಜಿ ಮಾಡಿಸುವ ಯತ್ನ ಮಾಡುತ್ತಿದ್ದರು. ಪತಿಯ ವರ್ತನೆ ಇಷ್ಟು ವರ್ಷ ತಡೆದುಕೊಂಡ ಮಹಿಳೆ ಅಅಂತಿಮವಾಗಿ ದೂರು ನೀಡಿದ್ದಾರೆ ತನ್ನ ಪತಿ ಬಿಸಿನಸ್ ಮ್ಯಾನ್ ಆಗಿರುವುದರಿಂದ ಪ್ರಭಾವ ಬಳಸಬಹುದು ಎಂಬ ಆತಂಕವೂ ಆಕೆಗೆ ಇತ್ತು ಎಂದು ಪೊಲೀಸರೇ ಹೇಳಿದ್ದರು. ಮಹಿಳೆಯ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸಹಜ ಲೈಂಗಿಕತೆ) ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 

ವಯಸ್ಕ ಹುಡುಗಿಯೊಂದಿಗೆ ಸಮ್ಮತಿ ಲೈಂಗಿಕ ಕ್ರಿಯೆ ಅಪರಾಧವಲ್ಲ ಆದರೆ ಅನೈತಿಕ : ಅಲಹಾಬಾದ್ ಹೈಕೋರ್ಟ್!

ಮಡದಿ ಇಚ್ಛೆಗೆ ವಿರುದ್ಧ ನಡೆಸೋ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಹೈಕೋರ್ಟ್‌

ಭಾರತೀಯ ಕಾನೂನಿನ ಅನ್ವಯ ಮದುವೆ ಬಳಿಕದ ಲೈಂಗಿಕ ಕ್ರಿಯೆ ಒತ್ತಾಯಪೂರ್ವಕವಾಗಿದ್ದರೂ ಅಪರಾಧ(Crime) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿರುವ ಛತ್ತೀಸ್‌ಗಢ ಹೈಕೋರ್ಟ್‌(High Court Of Chhattisgarh) ವ್ಯಕ್ತಿಯೊಬ್ಬನನ್ನು ಬಿಡುಗಡೆಗೊಳಿಸಿದೆ.

ಪತ್ನಿಯೊಬ್ಬಳು ತನ್ನ ಗಂಡನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಜ| ಎನ್‌. ಕೆ. ಚಂದ್ರವಂಶಿ ಗಂಡನೊಬ್ಬ ತನ್ನ ಹೆಂಡತಿ ಜೊತೆಗೆ ನಡೆಸುವ ಲೈಂಗಿಕ ಕ್ರಿಯೆ ಅಥವಾ ಚಟುವಟಿಕೆಯನ್ನು ಅತ್ಯಾಚಾರ ಎನ್ನಲು ಸಾಧ್ಯವಿಲ್ಲ. ಇದು ಒತ್ತಾಯಪೂರ್ವಕ ಸೆಕ್ಸ್ ಆಗಿದ್ದರೂ ರೇಪ್(Rape) ಎಂದು ಹೇಳಲು ಆಗುವುದಿಲ್ಲ ಎಂದಿದೆ.