Illicit Relationship: ಮಹಿಳೆಯ ರಾಸಲೀಲೆ ವಿಡಿಯೋ ಪತಿಗೆ ಕಳಿಸಿದ್ದವನಿಗೆ ಸಿಕ್ತು ಬೇಲ್
* ಮಹಿಳೆ ಜತೆ ಲೈಂಗಿಕ ಕ್ರಿಯೆ ನಡೆಸಿದ್ದ ಆರೋಪಿ
* ನಸುಕಿನ ಜಾವ ಪತಿಯ ಮೊಬೈಲ್‌ನಲ್ಲಿ ಯುವಕನಿಗೆ ಖಾಸಗಿ ಭಾಗ ತೋರಿಸುತ್ತಿದ್ದ ಮಹಿಳೆ
* 15 ದಿನ ಸಿಗದ್ದಕ್ಕೆ ಆಕೆಯ ಪತಿಗೆ ಸ್ಕ್ರೀನ್ ಶಾಟ್ ಕಳಿಸಿದ್ದ ಆರೋಪಿ
ಬೆಂಗಳೂರು(ನ.26): ಮಹಿಳೆಯೇ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿದ ಹಾಗೂ ಮೊಬೈಲ್ ವಿಡಿಯೋ ಕಾಲ್‌ನಲ್ಲಿ ದೇಹದ ಖಾಸಗಿ ಭಾಗ ತೋರಿಸಿದ ಅಂಶ ಪರಿಗಣಿಸಿ ಅತ್ಯಾಚಾರ ಮತ್ತು ಅಶ್ಲೀಲ ಚಿತ್ರ ರವಾನಿಸಿದ ಪ್ರಕರಣ ಎದುರಿಸುತ್ತಿರುವ ಆರೋಪಿಗೆ ಹೈಕೋರ್ಟ್(Highcourt) ಜಾಮೀನು ನೀಡಿದೆ.
ವಿಡಿಯೋ ಕಾಲ್(Video Call) ವೇಳೆ ಸಂತ್ರಸ್ತೆಯ ಖಾಸಗಿ ಭಾಗ ತೋರಿಸಿದಾಗ ಸ್ಕ್ರೀನ್‌ಶಾಟ್(Screenshot) ತೆಗೆದು ಆಕೆಯ ಪತಿಗೇ ಕಳುಹಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಕೊಪ್ಪಳ(Koppal) ಜಿಲ್ಲೆಯ ನಿವಾಸಿ ಬಸನಗೌಡ ಸಲ್ಲಿಸಿದ್ದ ಜಾಮೀನು(Bail) ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರು, ಆರೋಪಿಗೆ(Accused) ಷರತ್ತು ಬದ್ಧ ಜಾಮೀನು(Conditional Bail) ನೀಡಿದ್ದಾರೆ.
ಗಂಡನನ್ನೆ ಕೊಂದ ಪತ್ನಿ, 2 ತಿಂಗ್ಳು ಬಳಿಕ ಗೊತ್ತಾಯ್ತು ಆಕೆಯ ಪಲ್ಲಂಗ ಪುರಾಣ
ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯು(Victim Women) ಮದುವೆ(Marriage) ಮುನ್ನ ಮತ್ತು ನಂತರವೂ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದು, ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಸಂತ್ರಸ್ತೆ ನಿರಂತರವಾಗಿ ಬೆಳಗ್ಗೆ 4-5 ಗಂಟೆ ನಡುವೆ ಪತಿಯ ಮೊಬೈಲ್ ಫೋನ್‌ನಿಂದ ಆರೋಪಿಗೆ ವಿಡಿಯೋ ಕಾಲ್ ಮಾಡಿ, ತನ್ನ ಖಾಸಗಿ ಭಾಗ ತೋರಿಸಿದ್ದಾರೆ. ಅಂದರೆ ಆರೋಪಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಮತ್ತು ತಮ್ಮ ದೇಹದ ಖಾಸಗಿ ಭಾಗ ತೋರಿಸಲು ಸಂತ್ರಸ್ತೆ ಒಪ್ಪಿಗೆ ನೀಡಿದ್ದರು ಎಂಬುದು ದೃಢಪಡಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಆರೋಪಿ ವಿರುದ್ಧ ಜೀವಾವಧಿ ಶಿಕ್ಷೆ(Life Imprisonment) ವಿಧಿಸಬಹುದಾದ ಆರೋಪವಿಲ್ಲ ಹಾಗೂ ಆತನಿಗೆ ಕ್ರಿಮಿನಲ್(Criminal) ಹಿನ್ನೆಲೆಯೂ ಇಲ್ಲ. ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಚಿತ್ರ ರವಾನಿಸಿದ ಆರೋಪ ಸಂಬಂಧ ಐಟಿ ಕಾಯ್ದೆ ಸೆಕ್ಷನ್ 67 ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ 3 ವರ್ಷ ಜೈಲು ಮತ್ತು .5 ಲಕ್ಷ ದಂಡ ವಿಧಿಸಬಹುದಾಗಿದೆ. ಇನ್ನು ಜಾಮೀನು ನೀಡಿದರೆ, ಮಹಿಳೆ ಜೀವಕ್ಕೆ ಅಪಾಯವಿದೆ ಎಂಬ ಬಗ್ಗೆ ಆಕ್ಷೇಪವಿದೆ. ಆರೋಪಿಯಿಂದ ಜೀವಕ್ಕೆ ಅಪಾಯವಿದೆಯೇ ಅಥವಾ ಇಲ್ಲವೇ ಎಂಬ ಅಂಶ ವಿಚಾರಣಾ ನ್ಯಾಯಾಲಯದಲ್ಲಿ(Court) ವಿಚಾರಣೆಯಲ್ಲಿಯೇ ನಿರ್ಣಯವಾಗಬೇಕಿದೆ. ಹಾಗಾಗಿ ಆರೋಪಿಗೆ ಕಠಿಣ ಷರತ್ತು ವಿಧಿಸಿ ಜಾಮೀನು ನೀಡಬಹುದಾಗಿದೆ ಎಂದು ತೀರ್ಮಾನಿಸಿತು.
ನಂತರ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ. ಸಾಕ್ಷ್ಯ ತಿರುಚುವುದಕ್ಕೆ ಯತ್ನಿಸಬಾರದು. ಪ್ರಕರಣ ಇತ್ಯರ್ಥವಾಗುವರೆಗೂ ಬಾಗಲಕೋಟೆಯ ಬಾದಾಮಿ ತಾಲೂಕಿನ ಗುಳೇದಗುಡ್ಡಕ್ಕೆ ಭೇಟಿ ನೀಡಬಾರದು ಎಂದು ಷರತ್ತು ವಿಧಿಸಿದ ಹೈಕೋರ್ಟ್ ಆರೋಪಿಗೆ ಜಾಮೀನು ನೀಡಿದೆ.
'ಕೊಲೆಮಾಡಿದ್ದೀವಿ ಸಾರ್ ಬಾಡಿ ಆಟೋದಲ್ಲಿದೆ' ಬೆಂಗ್ಳೂರಲ್ಲೊಂದು ಘೋರ ಹತ್ಯೆ!
ಮದುವೆ ಬಳಿಕವೂ ಲವ್
ಒಂದೇ ಗ್ರಾಮದ ನಿವಾಸಿ ಮತ್ತು ಸಂಬಂಧಿಕರಾದ ಬಸನಗೌಡ ಹಾಗೂ ಸಂತ್ರಸ್ತೆ ಮಹಿಳೆ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ತಿಳಿಸಿದ್ದ ಆರೋಪಿ, 2018ರ ಡಿ.3ರಂದು ಮತ್ತು ನಂತರದ ದಿನಗಳಲ್ಲಿ ಹಲವು ಬಾರಿ ಆಕೆ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ನಂತರ ಸಂತ್ರಸ್ತೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿತ್ತು. ಬಳಿಕವೂ ಆಕೆಯೊಂದಿಗೆ ಆರೋಪಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ನಿರಂತರವಾಗಿ ಮುಂಜಾನೆ 4 ಮತ್ತು 5 ಗಂಟೆಯ ನಡುವೆ ವಿಡಿಯೋ ಕಾಲ್ ಮಾಡಿ, ಖಾಸಗಿ ಭಾಗ ತೋರಿಸುವಂತೆ ಕೇಳುತ್ತಿದ್ದ. ಸಂತ್ರಸ್ತೆ ಖಾಸಗಿ ಭಾಗಗಳನ್ನು ತೋರಿಸಿದಾಗ ಸ್ಕ್ರೀನ್‌ಶಾಟ್ ಮಾಡಿಕೊಂಡಿದ್ದ.
ಇದಾದ ಬಳಿಕ ಸುಮಾರು 15 ದಿನ ಕಾಲ ಸಂತ್ರಸ್ತೆ ಕರೆ ಮಾಡದಕ್ಕೆ ಸ್ಕ್ರೀನ್‌ಶಾಟ್‌ಗಳನ್ನು ಆಕೆಯ ಪತಿಯ ಮೊಬೈಲ್‌ಗೆ 2021ರ ಏ.5ರಂದು ಆರೋಪಿ ಕಳುಹಿಸಿದ್ದ. ಇದರಿಂದ ಜಗಳ ನಡೆದು, ಪತ್ನಿಯನ್ನು ಪತಿಯು ತವರು ಮನೆಗೆ ಕಳುಹಿಸಿದ್ದ. ಮರು ದಿನವೇ ಸಂತ್ರಸ್ತೆ ದೂರು ಸಲ್ಲಿಸಿದ್ದರು. ಯಲಬುರ್ಗಾ ಠಾಣಾ ಪೊಲೀಸರು(Police) ಜೀವ ಬೆದರಿಕೆ, ಅತ್ಯಾಚಾರ(Rape), ಅವಮಾನ ಮಾಡಿದ, ಮಹಿಳೆಯ ಖಾಸಗಿ ಭಾಗ ಸೆರೆಹಿಡಿದ, ಮನೆ ಅತಿಕ್ರಮ ಪ್ರವೇಶ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಸೆಕ್ಷನ್ 67 ಅಡಿ ಪ್ರಕರಣ ದಾಖಲಿಸಿ 2021ರ ಏ.7ರಂದು ಆರೋಪಿಯನ್ನು ಬಂಧಿಸಿದ್ದರು(Arrest).