Asianet Suvarna News Asianet Suvarna News

ಚಿತ್ತಾಪುರ: ಪತ್ನಿಗೆ ಗುಂಡುಹಾರಿಸಿ ಸಾಯಿಸಿದ್ದ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ

ಬಸವರಾಜ ನಾರಾಯಣಿ ಹಾಗೂ ಅವರ ಪತ್ನಿ ಹಣಮವ್ವ ಇಬ್ಬರು ಮೃತಪಟ್ಟ ಕಾರಣ ಅವರ ನಾಲ್ಕು ಜನ ಸಣ್ಣ ಸಣ್ಣ ಮಕ್ಕಳ ಭವಿಷ್ಯ ಅತಂತ್ರವಾದಂತಾಗಿದೆ

Husband Committed Suicide After Killed His Wife at Chittapur in Kalaburagi grg
Author
First Published Sep 19, 2023, 10:45 PM IST

ಚಿತ್ತಾಪುರ(ಸೆ.19):  ಅಲ್ಲೂರ(ಬಿ) ಗ್ರಾಮದ ಬಸವರಾಜ ಹಂಪಯ್ಯ ನಾರಾಯಣಿ(40) ಎನ್ನುವವರು ತನ್ನ ಪತ್ನಿ ಹಣಮವ್ವ(35)ಗಳನ್ನು ಅಲ್ಲೂರ(ಕೆ) ಗ್ರಾಮದ ಅವರ ಮನೆಯಲ್ಲಿ ಗುಂಡು ಹಾರಿಸಿ ಸಾಯಿಸಿ ಪರಾರಿಯಾಗಿ ತಲೆಮರೆಸಿಕೊಂಡಿದ್ದವನು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತರಾಗಿರುವ ಘಟನೆ ನಡೆದಿದೆ.

ಗಂಡ ಹೆಂಡತಿಯ ಮಧ್ಯೆ ಇದ್ದ ಕೌಟುಂಬಿಕ ಜಗಳದ ಹಿನ್ನಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಸವರಾಜ ನಾರಾಯಣಿ ಅವರ ಹೆಂಡತಿ ಹಣಮವ್ವ ತವರು ಊರಾದ ಅಲ್ಲೂರ(ಕೆ) ಗ್ರಾಮದಲ್ಲಿ ಬಂದು ವಾಸವಾಗಿದ್ದಳು. ಗುರುವಾರ ಅಲ್ಲೂರ(ಕೆ) ಗ್ರಾಮದಲ್ಲಿ ಊರ ಹಬ್ಬವಾದ 101 ಎತ್ತುಗಳ ವಿಶೇಷ ಪೂಜೆಯ ದಿನದಂದು ಗ್ರಾಮಸ್ಥರು ಸಂಬ್ರಮದಲ್ಲಿರುವ ಸಂದರ್ಭದಲ್ಲಿ ಬಸವರಾಜ ಕುಡಿದು ಅಲ್ಲೂರ(ಕೆ) ಗ್ರಾಮದಲ್ಲಿದ್ದ ತನ್ನ ಹೆಂಡತಿಯ ಮನೆಗೆ ಬಂದು ಜಗಳ ತೆಗೆದು ಗುಂಡು ಹೊಡೆದು ಸಾಯಿಸಿ ಪರಾರೀಯಾಗಿದ್ದ. ಈ ಘಟನೆ ನಡೆದ ನಂತರ ಚಿತ್ತಾಪುರ ಪೊಲಿಸ್ ಠಾಣಿಯ ಪೊಲಿಸರು ಅವರ ಪತ್ತೆಗೆ ಶೋಧ ನಡೆಸುತ್ತಿದ್ದರು.

ಕಿರುಕುಳ ತಾಳದೇ ತವರುಮನೆ ಸೇರಿದ್ದ ಪತ್ನಿಯನ್ನ ಗುಂಡು ಹಾರಿಸಿ ಕೊಂದ ಪತಿ!

ಶನಿವಾರ ದಂದು ಅಲ್ಲೂರ(ಬಿ) ಗ್ರಾಮದ ಅವನ ಮನೆಯಲ್ಲಿ ದುರ್ವಾಸನೆ ಬರುತ್ತಿರುವ ಕುರಿತು ಗ್ರಾಮಸ್ಥರು ಪೊಲಿಸರಿಗೆ ಮಾಹಿತಿ ನೀಡಿದ ಪರಿಣಾಮ ಪೊಲಿಸರು ಮನೆಗೆ ಭೆಟ್ಟಿ ನೀಡಿ ಪರಿಶೀಲಿಸಿದಾಗ ನೇಣು ಬಿಗಿದುಕೊಂಡ ಪರಿಸ್ಥಿತಿಯಲ್ಲಿ ಅವನ ಶವ ಪತ್ತೆಯಾಗಿದೆ. ಬಸವರಾಜ ನಾರಾಯಣಿ ಹಾಗೂ ಅವರ ಪತ್ನಿ ಹಣಮವ್ವ ಇಬ್ಬರು ಮೃತಪಟ್ಟ ಕಾರಣ ಅವರ ನಾಲ್ಕು ಜನ ಸಣ್ಣ ಸಣ್ಣ ಮಕ್ಕಳ ಭವಿಷ್ಯ ಅತಂತ್ರವಾದಂತಾಗಿದೆ.

ಘಟನಾ ಸ್ಥಳಕ್ಕೆ ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಶ್ರೀಶೈಲ ಅಂಬಾಟಿ ಪರಿಶೀಲನೆ ನಡೆಸಿದ್ದಾರೆ, ಚಿತ್ತಾಪುರ ಪೊಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios