Asianet Suvarna News Asianet Suvarna News

ಕಿರುಕುಳ ತಾಳದೇ ತವರುಮನೆ ಸೇರಿದ್ದ ಪತ್ನಿಯನ್ನ ಗುಂಡು ಹಾರಿಸಿ ಕೊಂದ ಪತಿ!

ಗಂಡನ ಕಿರುಕುಳ ತಾಳದೆ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಗುಂಡಿಕ್ಕಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಕೆ ಗ್ರಾಮದಲ್ಲಿ ನಡೆದಿದೆ.

husband shot and killed his wife in chittapur kalaburagi district rav
Author
First Published Sep 14, 2023, 5:44 PM IST

ಕಲಬುರಗಿ (ಸೆ.14): ಗಂಡನ ಕಿರುಕುಳ ತಾಳದೆ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಗುಂಡಿಕ್ಕಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಕೆ ಗ್ರಾಮದಲ್ಲಿ ನಡೆದಿದೆ.

ಹನುಮವ್ವ(35) ಕೊಲೆಯಾದ ದುರ್ದೈವಿ. ಹನುಮವ್ವಳ ಗಂಡ ಬಸವರಾಜ ಎಂಬಾತನೇ ಗುಂಡಿಟ್ಟು ಕೊಂದ ಆರೋಪಿ. ಕೊಲೆ ಮಾಡಿದ ಬಳಿಕ ನಾಪತ್ತೆಯಾಗಿರೋ ಪತಿ. ಇಬ್ಬರು ಒಲ್ಲದ ಮನಸಿನಿಂದ ಮದುವೆಯಾಗಿದ್ದರೇನೋ ಎಂಬಂತೆ ಮದುವೆಯಾದಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದರು. ಗಂಡ ನಿತ್ಯ ಸಣ್ಣಪುಟ್ಟ ವಿಚಾರಕ್ಕೆ ಜಗಳ ತೆಗೆದು ಪತ್ನಿಗೆ ಹಲ್ಲೆ ನಡೆಸುತ್ತಿದ್ದನೆಂದು ಹೇಳಲಾಗಿದೆ. ಹೀಗಾಗಿ ಪತಿಯ ಕಿರುಕುಳಕ್ಕೆ ಬೇಸತ್ತು ಹನುಮವ್ವ ಇತ್ತೀಚೆಗೆ ತವರು ಮನೆ ಸೇರಿದ್ದಳು. ಆದರೆ ಆರೋಪಿ ಬಸವರಾಜ ಇಂದು ಮತ್ತೆ ಆಕೆಯ ತವರು ಮನೆಗೆ ಹೋಗಿದ್ದಾನೆ. ಬಸವರಾಜ ಬಂದ ವೇಳೆ ಮನೆಯಲ್ಲಿದ್ದ ಹನುಮವ್ವ. ಪತ್ನಿಯನ್ನು ನೋಡಿದವನೇ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಜಗಳವಾಡಿ ಹೋಗಿದ್ದಕ್ಕೆ ಪತ್ನಿಯ ತವರು ಮನೆಗೇ ಮಾಟ ಮಾಡಿಸಿದ ಪತಿರಾಯ!

ಸದ್ಯ ಈ ಘಟನೆ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಹುಡುಕಾಟ ನಡೆಸಿದ್ದಾರೆ. 

ಇತ್ತೀಚೆಗೆ ಗಂಡನ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ತೆರಳಿದ್ದಕ್ಕೆ ಪತ್ನಿಯ ತವರು ಮನೆಗೆ ಗಂಡನೇ ಮಾಟ ಮಾಡಿಸಿದ್ದಲ್ಲದೆ ಕೊಲೆಯ ಬೆದರಿಕೆ ಹಾಕಿದ್ದ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಘಟನೆ ಮರುಕಳಿಸಿದೆ.

Follow Us:
Download App:
  • android
  • ios