Bengaluru: ಬಾರ್‌ನಲ್ಲಿ ಗ್ರಾಹಕರಿಗೆ ಜಾಗ ಬಿಟ್ಟಿಲ್ಲ ಎಂದು ಕಿರಿಕ್: ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಬಾರ್ ಸಿಬ್ಬಂದಿಗಳು
ಬಾರ್‌ನಲ್ಲಿ ಗ್ರಾಹಕರಿಗೆ ಜಾಗ ಬಿಟ್ಟಿಲ್ಲ ಎಂದು ಬಾರ್ ಸಿಬ್ಬಂದಿಗಳು ಸಣ್ಣ ಕಿರಿಕ್ ತೆಗೆದಿದ್ದು, ವ್ಯಕ್ತಿಯು ಬಾರ್‌ನಿಂದ ಹೊರ ಬರುತ್ತಿದ್ದಂತೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ನಿನ್ನೆ (ಶನಿವಾರ) ರಾತ್ರಿ 1 ಗಂಟೆ ಸುಮಾರಿಗೆ ಮಂಜುನಾಥ್ ನಗರದ ವೆಂಕಟಗಿರಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.
ಬೆಂಗಳೂರು (ಜ.22): ಬಾರ್‌ನಲ್ಲಿ ಗ್ರಾಹಕರಿಗೆ ಜಾಗ ಬಿಟ್ಟಿಲ್ಲ ಎಂದು ಬಾರ್ ಸಿಬ್ಬಂದಿಗಳು ಸಣ್ಣ ಕಿರಿಕ್ ತೆಗೆದಿದ್ದು, ವ್ಯಕ್ತಿಯು ಬಾರ್‌ನಿಂದ ಹೊರ ಬರುತ್ತಿದ್ದಂತೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ನಿನ್ನೆ (ಶನಿವಾರ) ರಾತ್ರಿ 1 ಗಂಟೆ ಸುಮಾರಿಗೆ ಮಂಜುನಾಥ್ ನಗರದ ವೆಂಕಟಗಿರಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಪೆರುಮಾಳ್ (25) ಎಂಬಾತನ ಮೇಲೆ ಬಾರ್ ಸಿಬ್ಬಂದಿಗಳು ಹಲ್ಲೆ ಮಾಡಿದ್ದು, ಪೊಲೀಸರು ದೂರು ತೆಗೆದುಕೊಳ್ಳಲು ನಿರ್ಲಕ್ಷ್ಯ ಮಾಡಿದ್ದಾರೆ. ಪೀಣ್ಯದಲ್ಲಿ ಕಬ್ಬಿಣದ ಕೆಲಸ ಮಾಡ್ತಿದ್ದ ಪೆರುಮಾಳ್, ಮದ್ಯ ತೆಗೆದುಕೊಂಡು ಕೌಂಟರ್ ಬಳಿಯೇ ಕುಡಿಯುತ್ತ ನಿಂತಿದ್ದ.
ಈ ಹಿನ್ನಲೆ ಬಾರ್ ಸಿಬ್ಬಂದಿಗಳು ಹಾಗು ಪೆರುಮಾಳ್ ನಡುವೆ ಸಣ್ಣ ಕಿರಿಕ್ ಆಗಿದೆ. ಕಿರಿಕ್ ಆದ ಬಳಿಕ ಬಾರ್ ಸಿಬ್ಬಂದಿ ಸುಮ್ಮನಿದ್ದು, ಪೆರುಮಾಳ್ ಮದ್ಯ ಸೇವನೆ ಬಳಿಕ ಹೊರಗೆ ಕಾಲಿಡುತ್ತಿದ್ದಂತೆ ಬಾರ್ ಸಿಬ್ಬಂದಿಗಳು ಮುಖ ಮೂತಿ ನೋಡದೆ ಹಲ್ಲೆ ಮಾಡಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ಬಂದರೂ ಗಾಯಾಳುವನ್ನ ಆಸ್ಪತ್ರೆಗೆ ಸೇರಿಸೋ ಸೌಜನ್ಯ ತೋರಿಸಿಲ್ಲ. ಗಾಯಳು ಸತ್ತರೇ ಸಾಯಲಿ ಬಿಡು ಎಂದು ಹೇಳಿದ್ದಾರೆ ಎಂದು ಪೊಲೀಸರ ಮೇಲೆ ಪೆರುಮಾಳ್ ಆರೋಪ ಮಾಡಿದ್ದು, ಘಟನೆ ನಡೆದ ಬಳಿಕ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.
ಸಿಎಂ ಬೊಮ್ಮಾಯಿ ಮನೆ ಹಾಳಾಗ ಎಂದ ಸಿದ್ದುಗೆ ತಿರುಗೇಟು ನೀಡಿದ ಸಚಿವ ಸೋಮಣ್ಣ
ನಂತರ ಪೆರುಮಾಳ್‌ನನ್ನು ಆತನ ಸ್ನೇಹಿತ ಸುರೇಶ್ ಎಂಬಾತ ಆಸ್ಪತ್ರೆಗೆ ಸೇರಿಸಿದ್ದ. ಇನ್ನು ಘಟನೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೆರುಮಾಳ್ ಅಳಲು ತೊಡಿಕೊಂಡಿದ್ದು, ಬೆಳಗಿನ ಜಾವ 4 ಗಂಟೆಗಳವರೆಗೂ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಆಗಿದೆ ಎಂದು ಆರೋಪಿಸಿದ್ದಾನೆ. ಜೊತೆಗೆ ಬಾರ್ ಓಪನ್ ಆಗಿದ್ರೆ, ಪೊಲೀಸರು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ದೂರುದಾರನು ಪ್ರಶ್ನೆ ಮಾಡಿದ್ದಾನೆ. ಸದ್ಯ ಗಾಯಾಳು ಪೆರುಮಾಳರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.