ವಿಜಯಪುರ ನಗರದ ರಹೀಮ್‌ ನಗರ ಬಡಾವಣೆಯಲ್ಲಿ ನಡೆದ ಘಟನೆ| ಮನೆಯಲ್ಲಿ ಶವ ಪತ್ತೆ| ಮೃತಳ ಗಂಡನ ಬಂಧನ| ಗಾಂಧಿಚೌಕ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ ಘಟನೆ

ವಿಜಯಪುರ(ಮಾ.21): ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ವಿಜಯಪುರ ನಗರದ ರಹೀಮ್‌ ನಗರ ಬಡಾವಣೆಯಲ್ಲಿ ಭಾನುವಾರ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ರಹೀಮ್‌ ನಗರದ ಶೋಭಾ ಅಗಸರ ಮೃತಪಟ್ಟ ಗೃಹಿಣಿ. ಶೋಭಾ ಅಗಸರ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮೃತ ಶೋಭಾಳ ಪತಿ ಪ್ರಕಾಶ ಅಗಸರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬಿಡದಿಯಲ್ಲಿ ಬೆಂಗಳೂರು ಯುವಕನಿಗೆ ಚೂರಿಯಿಂದ ಇರಿದು ಹತ್ಯೆ

ಗಾಂಧಿಚೌಕ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತಡರಾತ್ರಿವರೆಗೂ ಪ್ರಕರಣ ದಾಖಲಾಗಿರಲಿಲ್ಲ ಎಂದು ತಿಳಿದು ಬಂದಿದೆ.