Asianet Suvarna News Asianet Suvarna News

ಬೆಂಗಳೂರಿನಲ್ಲಿ ಹೆಚ್ಚಾಗಿದೆ RX ಬೈಕ್ ಕಳ್ಳತನ: ಕಳ್ಳರಿಗೂ ಇಷ್ಟವಾಯ್ತು ಆರ್‌ ಎಕ್ಸ್ ಕ್ರೇಜ್!

ಆರ್​ ಎಕ್ಸ್​ ಬೈಕ್ ​ ಇಟ್ಕೊಂಡಿರೋರು ಈ ಸ್ಟೋರಿನಾ ನೋಡ್ಲೇ ಬೇಕು. RX ಬೈಕ್ ಗಳನ್ನೇ ಟಾರ್ಗೆಟ್ ಮಾಡುತ್ತಿದೆ ಕಳ್ಳರ ಗ್ಯಾಂಗ್ .

RX Bikes thief gang Active In Bengaluru rbj
Author
First Published Sep 13, 2022, 6:59 PM IST

ವರದಿ :ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು, (ಸೆಪ್ಟೆಂಬರ್.13) :
 ನಿಮ್ಮ ಮನೆಯಲ್ಲಿ ಆರ್​ ಎಕ್ಸ್​ ಬೈಕ್​ ಇದ್ರೆ ಅದನ್ನು ಜೋಪಾನವಾಗಿ ನೋಡ್ಕೊಳ್ಳಿ... ಕೊಂಚ ಯಾಮಾರಿದ್ರೂ ಮನೆಯ ಪಾರ್ಕಿಂಗ್‌ನಿಂದಲೇ ನಿಮ್ಮ ಬೈಕ್​ ಕಳ್ಳರ ಪಾಲಾಗುತ್ತೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರ್​ ಎಕ್ಸ್​ ಬೈಕ್‌ಗಳನ್ನೇ ಟಾರ್ಗೆಟ್​ ಮಾಡಿ ಕಳವು ಮಾಡುತ್ತಿರುವ ಕಳ್ಳರ ಗ್ಯಾಂಗ್​ ಈಗ ಆ್ಯಕ್ಟೀವ್​ ಆಗಿದೆ.

RX ಬೈಕ್ ಗಳನ್ನೇ ಟಾರ್ಗೆಟ್ ಮಾಡುತ್ತಿದೆ ಕಳ್ಳರ ಗ್ಯಾಂಗ್ 
ಬೈಕ್‌ಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬ್ಯ್ರಾಂಡ್‌ನ ಬೈಕ್​ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಆ ಲಿಸ್ಟ್‌ನಲ್ಲಿ ಆರ್​ ಎಕ್ಸ್​ ಬೈಕ್​ ಸಹ ಬರುತ್ತೆ. ಆರ್​ ಎಕ್ಸ್​ ಬೈಕ್​ ಎಷ್ಟು ಹಳೆಯದಾಗಿರುತ್ತೋ ಅಷ್ಟು ಬೆಲೆ ಜಾಸ್ತಿ. ಕಾರಣ ಇಷ್ಟೆ ಆರ್​ ಎಕ್ಸ್​ ಗೆ ಇರುವ ಕ್ರೇಜ್​. ಹೌದು, ಆರ್​ ಎಕ್ಸ್​ ಬೈಕ್‌ಗಳಿಗೆ ಇರುವ ಕ್ರೇಜ್​ ಈಗ ಬೈಕ್​ ಕಳ್ಳತನಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿನಲ್ಲಿ ಮನೆಗಳ ಪಾರ್ಕಿಂಗ್‌ನಲ್ಲಿ ನಿಲ್ಲಿಸಿರುವ ಆರ್​ ಎಕ್ಸ್​ ಬೈಕ್‌ಗಳನ್ನೇ ಟಾರ್ಗೆಟ್​ ಮಾಡಿ ಕಳ್ಳರು ಕಳವು ಮಾಡ್ತಿದ್ದಾರೆ. ಇಂತದೊಂದು ಗ್ಯಾಂಗ್​ ಈಗ ನಗರದಲ್ಲಿ ಆ್ಯಕ್ಟೀವ್​ ಆಗಿದೆ. ಸದ್ಯ ಜೆಜೆ ನಗರ ಠಾಣಾ ವ್ಯಾಪ್ತಿ ಮನೆ ಮುಂದೆ ನಿಲ್ಲಿಸಿದ್ದ ಆರ್ ಎಕ್ಸ್ ಬೈಕ್‌ ಹ್ಯಾಂಡಲ್ ಲಾಕ್ ಮುರಿದು ಬೈಕ್ ಕದ್ದು ಆರೋಪಿಯೊಬ್ಬ ಪರಾರಿಯಾಗಿದ್ದಾನೆ. ಬೈಕ್​ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೈಕ್‌ ಕಳ್ಳರ ಜಾಲ ಭೇದಿಸಿದ ರಾಯಚೂರು ಪೊಲೀಸ್ರು, ಖದೀಮರ ಖತರ್ನಾಕ್ ಐಡಿಯಾ ಕೇಳಿ ಪೊಲೀಸರೇ ಶಾಕ್

ಆರ್ ಎಕ್ಸ್ ಬೈಕ್‌ಗಳಿಗೆ ಇರುವ ಕ್ರೇಜ್‌ನಿಂದಲೇ ಕಳವಿಗೆ ಕಾರಣವಾಗ್ತಿದೆ. ಅದರಲ್ಲೂ ವೀಲಿಂಗ್​ ಮಾಡುವ ಚಟವಿರುವವರು ಹೆಚ್ಚಾಗಿ ಈ ಬೈಕ್​ ಕಳವು ಮಾಡೋಕೆ ಮುಂದಾಗ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಹಳೇ ಆರ್​ ಎಕ್ಸ್​ ಬೈಕ್‌ಗಳನ್ನು ಖರೀದಿಸಿ ಅದನ್ನು ಗ್ಯಾರೇಜ್‌ಗೆ ಬಿಟ್ಟು 20 ಸಾವಿರದಷ್ಟು ಖರ್ಚು ಮಾಡಿ, ಬೈಕ್​ ರೆಡಿ ಮಾಡಿಸಿದ್ರೆ, ಮಾರುಕಟ್ಟೆಯಲ್ಲಿ ಆ ಬೈಕ್​ ಬೆಲೆ 1 ಲಕ್ಷ ದಿಂದ 1.5 ಲಕ್ಷದವರೆಗೆ ಏರುತ್ತದೆ. ಅದರಲ್ಲೂ ಆರ್​ ಎಕ್ಸ್ 100 ಹಾಗೂ 135 ಸಿಸಿ ಬೈಕ್‌ಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿಯೇ ಈ ಬೈಕ್‌ಗಳನ್ನು ಕಳವು ಮಾಡುವ ಪುಂಡರು ಮೊದಲಿಗೆ ಅವುಗಳನ್ನು ವೀಲಿಂಗ್​ ಮಾಡಲು ಬಳಸಿಕೊಂಡು, ನಂತರ ಅದನ್ನು ಲಕ್ಷಾಂತರ ರೂಪಾಯಿಗೆ ಮಾರಿ ಬಿಡುತ್ತಾರೆ.

ಈ ಹಳೆಯ ಆರ್​ ಎಕ್ಸ್​ ಬೈಕ್‌ಗಳಿಗೆ  ದಾಖಲೆಗಳೇ ಇರೋದಿಲ್ಲ. ಹೀಗಾಗಿ ಈ ಬೈಕ್‌ಗಳನ್ನ ಕಳವು ಮಾಡಿದ್ರೆ ಮಾರಾಟವೂ ಸುಲಭ ಹಾಗೂ ದೂರು ಕೊಟ್ರೂ ಬೈಕ್‌ ಪತ್ತೆ ಮಾಡುವುದು ಪೊಲೀಸ್ರಿಗೆ ದೊಡ್ಡ ಸವಾಲಾಗಿದೆ.

Follow Us:
Download App:
  • android
  • ios