ಬೆಂಗಳೂರು(ಜ. 05) ಮನೆಗೆ ನುಗ್ಗಿದ್ದ ಮಾನಸಿಕ ಖಿನ್ನತೆಗೊಳಗಾದ ಯುವಕನನ್ನು ಮಾಲೀಕ ಆಸ್ಪತ್ರೆಗೆ ದಾಖಲಿಸಿದ್ದಾರೆ.ಜನವರಿ 1 ರಂದು ಬೆಳಗಿನ ಜಾವ ಹೆಚ್ಎಎಲ್ ನ‌ ವಿಭೂತಿಪುರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ವಸ್ತಿಕ್ ಎಂಬ ಮಾನಸಿಕ ಖಿನ್ನತೆಗೊಳಗಾದ ಯುವಕ ಅನಿರುದ್ಧ್ ಎಂಬುವರ ಮನೆಗೆ ನುಗ್ಗಿದ್ದಾನೆ.

ಹೊಸ ವರ್ಷದ ಬೆಳಗಿನ ಜಾವ ಸ್ವಸ್ತಿಕ್ ಮನೆಗೆ ಬಂದಿದ್ದ.  ವಿಷಯ ತಿಳಿಯದೆ ಮನೆಗೆ ಬೀಗ ಹಾಕಿ ಅನಿರುದ್ಧ್ ಕುಟುಂಬ ದೇವಾಲಯಕ್ಕೆ ತೆರಳಿತ್ತು.

ಬೀಗ ಹಾಕಿದ್ದಲ್ಲದೆ ಮನೆಯೊಳಗೆ ಮತ್ತೊಂದು ಅಟೋಮೆಟಿಕ್ ಲಾಕ್ ಅಳವಡಿಸಿದ್ದರಿಂದ ಒಳಗಡೆಯೇ ಸ್ವಸ್ತಿಕ್ ಲಾಕ್ ಆಗಿದ್ದ. ಇದ್ರಿಂದ ಭಯಭೀತನಾಗಿ ಹೊರ ಬರಲಾರದೆ ನೇಣು ಹಾಕಿಕೊಳ್ಳಲು ಸ್ವಸ್ತಿಕ್ ಪ್ರಯತ್ನ ಮಾಡಿದ್ದ. ರೂಮಿನಲ್ಲಿ ಫ್ಯಾನ್ ಗೆ ಶಾಲ್ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದ. ಗ್ಯಾಸ್ ಪೈಪ್ ತೆಗೆದು ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿದ್ದ. ಕೊನೆಗೆ ತಾನೇ ಬೆಂಕಿ ಹಚ್ಚಿಕೊಂಡು ಸಾಯಲು ಮುಂದಾಗಿದ್ದ.

ಎಂಜಿ ರಸ್ತೆಯಲ್ಲಿ ಚಪ್ಪಲಿ ಏಟು ತಿಂದ ಕಾಮಾಂಧರು ಸಿಕ್ಕಾಕ್ಕಂಡ್ರು! ನಮ್ಮೂರವರಲ್ಲ...

ಕುಟುಂಬಸ್ಥರು ದೇವಸ್ಥಾನದಿಂದ ವಾಪಾಸ್ ಬಂದಾಗ ಮನೆಗೆ ಬೆಂಕಿ ಬಿದ್ದಿದ್ದಿದ್ದು ಗೊತ್ತಾಗಿದೆ. ಬೆಂಕಿ ಆರಿಸಿ ಒಳಗೆ ಗಾಯಗೊಂಡು ಬಿದ್ದಿದ್ದ ಸ್ವಸ್ತಿಕ್ ನನ್ನು ಮನೆ ಮಾಲೀಕರು ಆಸ್ಪತ್ರೆಗೆ ದಾಖಲಿಸಿದ್ದು ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.