ಬೆಂಗಳೂರು(ಜ. 01) ಹೊಸ ವರ್ಷದ ಆಚರಣೆ ವೇಳೆ ಯುವತಿಯರಿಗೆ ಕಿರುಕುಳ ಕೊಟ್ಟು ಚಪ್ಪಲಿ ಏಟು ತಿಂದಿದ್ದವರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹೊಸ ವರ್ಷ ಆಚರಣೆ ವೇಳೆ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿ  ಚಪ್ಪಲಿ ಏಟು ತಿಂದ ಅತಿಕ್ ಮತ್ತು ಶಿವಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿಯಿಂದ ಇಬ್ಬರು ಯುವಕರು ಸ್ನೇಹಿತರನ್ನು ನೋಡಲು ಬೆಂಗಳೂರಿಗೆ ಬಂದಿದ್ದರು.  

ಮುಂದಿನ ವರ್ಷದಿಂದ ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆ ಇಲ್ಲ!

ಎಂ ಜಿ ರೋಡ್ ಅಲ್ಲಿ ಮಸ್ತಿ ಜೊತೆಗೆ ಕಾಮದಾಟ ಆಡಲು ಹೋಗಿ ಚಪ್ಪಲಿ ಏಟು ತಿಂದಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.

ಮತ್ತೊಂದು ಪ್ರಕರಣದಲ್ಲೂ ಮತ್ತಿಬ್ಬರು ಕಾಮುಕರ ಬಂಧನವಾಗಿದೆ. ಅಶೋಕ್ ನಗರ ಪೊಲೀಸರಿರು ಆರೋಪಿಗಳನ್ನು ಬಂಧಿಸಿದ್ದು ತಲೆಮರೆಸಿಕೊಂಡಿರೋ ನಾಲ್ವರಿಗೆ  ಹುಡುಕಾಟ ನಡೆಸಿದ್ದಾರೆ.