ಅತ್ತ ಸಿಎಂ ಹಳೇ ಮನೆ, ಇತ್ತ ಸ್ಟೇಷನ್, ಆದ್ರೂ ಮಟಮಟ ಮಧ್ಯಾಹ್ನವೇ ಮನೆಗೆ ನುಗ್ಗಿ ಕೆಜಿಗಟ್ಟಲೇ ಚಿನ್ನಾಭರಣ ಕದ್ದ ಕಳ್ಳ!
ಖತರ್ನಾಕ್ ಕಳ್ಳನೊಬ್ಬ ಪೊಲೀಸರಿಗೆ ಚಾಲೆಂಜ್ ಹಾಕುವ ರೀತಿ ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಶೇಷಾದ್ರಿಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಫೆ.8): ಖತರ್ನಾಕ್ ಕಳ್ಳನೊಬ್ಬ ಪೊಲೀಸರಿಗೆ ಚಾಲೆಂಜ್ ಹಾಕುವ ರೀತಿ ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಶೇಷಾದ್ರಿಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಮಂಜುಳಾ ದೇವಿ ಎಂಬುವವರಿಗೆ ಸೇರಿರುವ ಮನೆ. ಸಾಮಾನ್ಯ ಮನೆಯೇನಲ್ಲ. ಕಳ್ಳತನ ಮಾಡುವುದು ಸಹ ಸುಲಭವಲ್ಲ. ಏಕೆಂದರೆ ಮನೆಗೆ ಡಿಜಿಟಲ್ ಲಾಕ್ ಅಳವಡಿಸಲಾಗಿದೆ. ಹತ್ತೋಕೂ ಮೆಟ್ಟಿಲಿಲ್ಲ. ಬಾಗಿಲಂತೂ ಕಾಣೋದೆ ಇಲ್ಲ. ಆದ್ರೂ ಮಟಮಟ ಮಧ್ಯಾಹ್ನವೇ ಒಳಗೆ ನುಗ್ಗಿ ಚಿನ್ನಾಭರಣ ದೋಚಿರುವ ಖದೀಮ. ಬರೋಬ್ಬರಿ 0 ಲಕ್ಷದ 2ಕೆಜಿ 250 ಗ್ರಾಂ ಚಿನ್ನಾಭರಣ ಕಳುವು.
ಅನ್ಯೋನ್ಯವಾಗಿದ್ದ ಅಣ್ಣ ತಂಗಿಯ ಬದುಕು ಅಂತ್ಯ, ವ್ಯಾಟ್ಸ್ಆ್ಯಪ್ ಸ್ಟೇಟಸ್ ನೀಡಿತ್ತು ಸಾವಿನ ಸುಳಿವು!
ಆ ಕಡೆ ಸ್ಟೇಷನ್, ಈ ಕಡೆ ಸಿಎಂ ಮನೆ :
ಸಿಎಂ ಮನೆ ಇರೋ ಏರಿಯಾ ಎಷ್ಟು ಸುರಕ್ಷಿತವಾಗಿರುತ್ತೆ ಅಂತಾ ಬೇರೆ ಹೇಳಬೇಕಿಲ್ಲ. ಸುತ್ತಮುತ್ತ ಎಲ್ಲೆಡೆ ಸಿಸಿಟಿವಿ ಹಾಕಲಾಗಿರುತ್ತೆ ಪೊಲೀಸ್ ವಾಹನಗಳು ಗಸ್ತು ತಿರುಗುತ್ತಿರುತ್ತೆ. ಇಷ್ಟಾದಮೇಲೂ ಮನೆಯಲ್ಲೂ ಯಾರೂ ನುಗ್ಗದ ಹಾಗೆ ಭಾರೀ ಸೆಕ್ಯೂರಿಟಿ ಲಾಕರ್ ಅಳವಡಿಸಲಾಗಿದೆ. ಆದರೂ ಮಾಸ್ಕ್ ಧರಿಸಿರುವ ಖದೀಮ ಮಧ್ಯಾಹ್ನವೇ ಮನೆ ಸುತ್ತ ಒಂದು ರೌಂಡ್ ಹಾಕಿ ಪಕ್ಕದ ಮನೆ ಹತ್ತಿ ಜಂಪ್ ಮಾಡಿ ಎಂಟ್ರಿ ಕೊಟ್ಟು ಗ್ರಿಲ್ ಕಟ್ ಮಾಡಿ ಕಳ್ಳತನ ಮಾಡಿರೋ ಖತರ್ನಾಕ್.
ಬೇರೊಬ್ಬನೊಂದಿಗೆ ಓಡಿಹೋದ ಪತ್ನಿಗೆ ಸಹಾಯ ಮಾಡಿದನೆಂದು ಗೆಳೆಯನ ಕೊಲೆ; ಆರೋಪಿ ಬಂಧನ
ರಾಜಸ್ಥಾನದಿಂದ ವಾಪಸ್ ಬಂದ ಮಹಿಳೆಗೆ ಶಾಕ್:
ಕಳೆದ 4ನೇ ತಾರೀಕಿನಂದೇ ಮನೆಗೆ ನುಗ್ಗಿ ಕಳ್ಳತನ ಮಾಡಿರೋ ಖದೀಮ. ಕಳ್ಳತನಕ್ಕೂ ಮುಂಚೆ ಸತತ ಎರಡು ಮೂರು ದಿನ ಮನೆಯನ್ನ ವಾಚ್ ಮಾಡಿರೋ ಖದೀಮ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಪಕ್ಕದ ಮನೆ ಹತ್ತಿ ಜಂಪ್ ಮಾಡಿರುವ ಆರೋಪಿ. ಮನೆಯಲ್ಲಿದ್ದ 90 ಲಕ್ಷ ಮೌಲ್ಯದ 2 ಕೆ.ಜಿ 254 ಗ್ರಾಂ ಚಿನ್ನ, ಬೆಳ್ಳಿಯ ಲೋಟಗಳು, ಬೆಳ್ಳಿಯ ಹಸುವೊಂದನ್ನ ಕದ್ದು ಪರಾರಿಯಾಗಿರುವ ಕಳ್ಳ. ಇತ್ತ ರಾಜಸ್ಥಾನದಿಂದ ವಾಪಸ್ ಬಂದ ಮಹಿಳೆಗೆ ಶಾಕ್ ಆಗಿದೆ. ಮನೆಗೆ ಡಿಜಿಟಲ್ ಲಾಕರ್ ಇದ್ದರೂ ಕಳ್ಳತನವಾಗಿರುವುದು ಕಂಡ ಶಾಕ್ ಆಗಿರುವ ಮಹಿಳೆ. ಸದ್ಯ ಕಳ್ಳತನ ಸಂಬಂಧ ಶೇಷಾದ್ರಿಪುರಂ ಠಾಣೆಗೆ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.