Asianet Suvarna News Asianet Suvarna News

Road Accident: ಬಸ್ ಮತ್ತು ಸಿಲಿಂಡರ್ ಟ್ರಕ್ ನಡುವೆ ಡಿಕ್ಕಿ,  ಶವಗಳ ರಾಶಿ

* ಜಾರ್ಖಂಡ್  ನಲ್ಲಿ ಭೀಕರ ಅಪಘಾತ
* ಗ್ಯಾಸ್ ಟ್ಯಾಂಕರ್ ಮತ್ತು ಬಸ್ ನಡುವೆ ಡಿಕ್ಕಿ
* ಬಸ್ ನಲ್ಲಿದ್ದ ಪ್ರಯಾಣಿಕರ ದುರ್ಮರಣ 

Horrific road accident in Jharkhand 10 killed mah
Author
Bengaluru, First Published Jan 5, 2022, 5:17 PM IST

ಜಾರ್ಖಂಡ್(ಜ. 05)  ಗ್ಯಾಸ್ ಸಿಲಿಂಡರ್  ಟ್ರಕ್ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು  (Road Accident) ರ್ಘಟನೆಯಲ್ಲಿ  10ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.  ರಸ್ತೆಯ ತುಂಬಾ ಶವಗಳು (Dead Body) ಚೆಲ್ಲಾಪಿಲ್ಲಿಯಾಗಿ  ಬಿದ್ದ ದೃಶ್ಯ ಎಂಥವರ ಮನಸ್ಸನ್ನು ವಿಚಲಿತ ಮಾಡುವಂತೆ ಇತ್ತು.

ಪಾಕೂರಿನಿಂದ ದುಮ್ಕಾ ಕಡೆಗೆ ಹೋಗುತ್ತಿದ್ದ ಬಸ್ (Bus) ಲಿಟ್ಟಿಪಾಡ-ಅಮ್ಡಪಾರ ರಸ್ತೆಯ ಪಾಡೇರಕೋಳ ಬಳಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಟ್ರಕ್‌ಗೆ (Truck)ಡಿಕ್ಕಿ ಹೊಡೆದಿದೆ. 40ಕ್ಕೂ ಹೆಚ್ಚು ಮಂದಿ ಬಸ್‌  ನಲ್ಲಿದ್ದರು.  ಹತ್ತು ಜನ ಸಾವನ್ನಪ್ಪಿದರೆ 25 ಮಂದಿ ಗಾಯಗೊಂಡಿದ್ದಾರೆ

ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು  ನುಜ್ಜುಗುಜ್ಜಾಗಿವೆ.. ಬಸ್ಸಿನ  ಮೇಲ್ಬಾಗ  ಕತ್ತರಿಸಿ ಹೋಗಿದೆ.   ಅಪಘಾತದಲ್ಲಿ ಸಾವಿನ ಸಂಖ್ಯೆ  ಇನ್ನು ಹೆಚ್ಚಾಗುವ  ಸಂಭವ ಇದೆ ಎಂದು ಹೇಳಲಾಗಿದೆ. ಕೃಷ್ಣ ರಜತ್ ಬಸ್ ಮತ್ತು ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕ ರಭಸಕ್ಕೆ ಸಿಲಿಂಡರ್ ಟ್ಯಾಂಕರ್ ಸ್ಫೋಟಗೊಂಡಿದೆ. 

ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ದುರ್ಮರಣಕ್ಕೆ ಗುರಿಯಾದವರ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಮೊದಲು ಸ್ಥಳಕ್ಕೆ ಆಗಮಿಸಿದರು. ಆಡಳಿತ ಮತ್ತು ಪೊಲೀಸರು ಆಗಮಿಸುವ ಮೊದಲೇ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.#

Crime Round Up 2021 : ಅಪರಾಧ ಜಗತ್ತನ್ನೇ ಬೆಚ್ಚಿ ಬೀಳಿಸಿದ ಪ್ರಕರಣಗಳು.. ಸಿಡಿಯಿಂದ ಕಾಯಿನ್‌ವರೆಗೆ!

ಅಪಘಾತದ ನಂತರ ಜಿಲ್ಲಾಡಳಿತ ಮತ್ತು ಪೊಲೀಸ್ ಆಡಳಿತದ ಉನ್ನತ ಅಧಿಕಾರಿಗಳ ತಂಡ ಕೂಡ ಸ್ಥಳಕ್ಕೆ ತಲುಪಿದೆ. ಬೆಂಗಳೂರಿನಲ್ಲಿ  ಭೀಕರ ಅಪಘಾತ: ‌ ಡಿವೈಡರ್ ದಾಟಿ ಹಾರಿ ಬಂದ ಬಸ್ ಬೈಕ್ ಗೆ (Private Bus)ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನಪ್ಪಿದ್ದಾನೆ. ಯಲಹಂಕ ನಿವಾಸಿ ನಿಖಿಲ್ (22) ಮೃತ ಬೈಕ್ ಸವಾರ. ಏರ್ಪೋರ್ಟ್ ರಸ್ತೆಯ ಫ್ಲೈಓವರ್ ನಲ್ಲಿ‌ ಅಪಘಾತ ಸಂಭವಿಸಿತ್ತು.

ಟಿ ಜಿಟಿ ಮಳೆ (Rain) ನಡುವೆ ವೇಗವಾಗಿ ದೇವನಹಳ್ಳಿ ಕಡೆಯಿಂದ ಬರುತಿದ್ದ ಖಾಸಗಿ ಬಸ್  ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಬಳಿಕ ಡಿವೈಡರ್ ಹಾರಿ ಮುಂದೆ ಸಾಗುತಿದ್ದ ಬೈಕ್ ಗೆ ಡಿಕ್ಕಿಯಾಗಿದೆ.  

ಬೆಂಗಳೂರಿನಲ್ಲಿ ಘೋರ ಸರಣಿ ಅಪಘಾತಗಳು ಸಂಭವಿಸಿದ್ದವು.    ಆಡಿ ಕಾರು ಡಿಕ್ಕಿಯಾಗಿ ಶಾಸಕರ ಪುತ್ರ ಸೇರಿ ಐವರು ಮೃತಪಟ್ಟಿದ್ದರು. ಇದಾದ ಮೇಲೆ ಮೇಲೆ ಪೆಟ್ರೋಲ್ ಖಾಲಿಯಾಗಿದೆ ಎಂದು ಮೇಲ್ಸೇತುವೆ ಮೇಲೆ ನಿಂತಿದ್ದವರಿಗೆ  ಯಮರೂಪಿ ಕಾರು  ಗುದ್ದಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು.

Horrific road accident in Jharkhand 10 killed mah

ಭೀಕರ ಅಪಘಾತಗಳು:  ಗೋವಾ ಪ್ರವಾಸ ಹೋಗಲು ದಾವಣಗೆರೆಯಿಂದ ಹೊರಟಿದ್ದ ಸ್ನೇಹಿತೆಯರು ಸೆಲ್ಪೀ ತೆಗೆದು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಧಾರವಾಡದಲ್ಲಿರುವ ಸ್ನೇಹಿತೆಯ ಮನೆಗೆ ತೆರಳಬೇಕಿದ್ದವರು ತಲುಪಲು ಕೆಲವೇ ಕಿಲೋಮೀಟರ್ ಇರುವಾಗ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಉದ್ಯಮಿಯರು, ಗೃಹಿಣಿಯರು, ವೈದ್ಯರು ಈ ಘೋರ ಅವಘಡದಲ್ಲಿ ಮೃತರಾಗಿದ್ದರು

ರಾಜಧಾನಿ ಬೆಂಗಳೂರನ್ನು ಭೀಕರ ಅಪಘಾತಗಳು ಕಾಡಿದವು.   ಐಷಾರಾಮಿ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿತ್ತು.  ಕೋರಮಂಗಲದಲ್ಲಿ ಆಡಿ ಕ್ಯೂ 3 ಕಾರು ಅಪಘಾತದಲ್ಲಿ ಹೊಸೂರು ಶಾಸಕರ ಮಗ ಸೇರಿ 7 ಜನ ಸಾವನ್ನಪ್ಪಿದ್ದರು.  ಇದಾದ ಕೆಲವೇ ದಿನದಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂದು ವೈಟ್ ಫೀಲ್ಡ್  ಮೇತ್ಸೇತುವೆ ಮೇಲೆ ನಿಂತಿದ್ದ ಇಬ್ಬರನ್ನು ಕಾರು ಬಲಿಪಡೆದಿತ್ತು. ಇವು ಕಳೆದ ವರ್ಷದ ಕರಾಳ ಅಪಘಾಥಗಳು. 

Horrific road accident in Jharkhand 10 killed mah

 

Follow Us:
Download App:
  • android
  • ios