Asianet Suvarna News Asianet Suvarna News

ಗೃಹ ಸಚಿವರ ತವರಲ್ಲಿ 1ನೇ ತರಗತಿ ಬಾಲಕಿ ಎಳೆದೊಯ್ದು ಅತ್ಯಾಚಾರವೆಸಗಿದ ಕಾಮುಕ

ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ ತವರು ಕ್ಷೇತ್ರ ಕೊರಟಗೆರೆಯಲ್ಲಿಯೇ ಹಾಡುಹಗಲೇ 1ನೇ ತರಗತಿ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ದುರ್ಘಟನೆ ನಡೆದಿದೆ. 

Home minister native place Koratagere Alcoholic man raped 1st class School girl sat
Author
First Published Jan 30, 2024, 6:21 PM IST

ತುಮಕೂರು  (ಜ.30): ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ ತವರು ಕ್ಷೇತ್ರ ಕೊರಟಗೆರೆಯಲ್ಲಿಯೇ ಹಾಡುಹಗಲೇ 1ನೇ ತರಗತಿ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ದುರ್ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ಯುವಕ, ನಿರ್ಜನ ಪ್ರದೇಶದಲ್ಲಿ ಮನೆಯ ಮುಂದೆ ಕುಂಟೆಬಿಲ್ಲೆ ಆಟವಾಡುತ್ತಿದ್ದ 6 ವರ್ಷದ ಪುಟ್ಟ ಬಾಲಕಿಯನ್ನು ನೋಡಿ ಆಕೆಯನ್ನು ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಾಲಕಿ ತೀವ್ರ ನೋವಿನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಈ ದುರ್ಘಟನೆ ನಡೆದಿದೆ. ಶಾಲೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದಿದ್ದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಮನೆಮುಂದೆ ಗೆರೆಯನ್ನು ಎಳೆದು ಒಬ್ಬಳೇ ಕಜುಂಟೆಬಿಲ್ಲೆ ಆಡುತ್ತಿದ್ದಳು. ಈ ವೇಳೆ ಇದೇ ದಾರಿಯಲ್ಲಿ ಬಂದ ಯುವಕ ಒಬ್ಬಂಟಿ ಹುಡುಗಿ ಆಟವಾಡುವುದನ್ನು ಕೆಲಹೊತ್ತು ಗಮನಿಸಿದ್ದಾನೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದುಕೊಂಡು, ಬಾಲಕಿಯನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.

'ಎಚ್ಚರವಾದಾಗ ಆತ ರೇಪ್‌ ಮಾಡ್ತಿದ್ದ..' ಡ್ರಗ್‌ ನಶೆಯಲ್ಲಿದ್ದ ಯುವತಿ ಮೇಲೆ ಇನ್ಸ್‌ಟಾಗ್ರಾಮ್‌ ಸ್ನೇಹಿತನಿಂದ ಅತ್ಯಾಚಾರ!

ಇನ್ನು ಮನೆಯಲ್ಲಿ ಬಾಲಕಿ ಕಿರುಚೊದನ್ನ ಕಂಡು ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ನೋಡಿದಾಗ ಕಾಮುಕ ಅಟ್ಟಹಾಸಕ್ಕೆ ಬಾಲಕಿ ನಲುಗಿ ಹೋಗುವ ದೃಶ್ಯವನ್ನು ಕಂಡು ಕೂಡಲೇ ರಕ್ಷಣೆ ಮಾಡಿದ್ದಾರೆ. ಅಕ್ಕಪಕ್ಕದ ಮನೆಯವರು ಬರುತ್ತಿದ್ದಂತೆಯೇ ಎಲ್ಲರೂ ಬಾಲಕಿ ರಕ್ಷಣೆಗೆ ಗಮನ ಹರಿಸಿದರೆ ಇತ್ತ ಎಲ್ಲರಿಂದ ತಪ್ಪಿಸಿಕೊಂಡು ಓಡಿ ಹೋಗಲು ಮುಮದಾಗಿದ್ದನು. ಆಗ, ಗ್ರಾಮಸ್ಥರು ಈತ ಓಡುವುದನ್ನು ಗಮನಿಸಿ ಆತನನ್ನು ಹಿಡಿದಿದ್ದಾರೆ. ಆಗ, ಬಾಲಕಿ ರಕ್ಷಣೆ ಮಾಡಿದ ಜನರು ಯುವಕನನ್ನು ವಶಕ್ಕೆ ಪಡೆದು ಥಳಿಸಿದ್ದಾರೆ. ನಂತರ, ಪೊಲೀಸರಿಗೆ ಕರೆ ಮಾಡಿ ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಅತ್ಯಾಚಾರದ ಆರೋಪಿ ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಮೂಲದ ಪವನ್(23) ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ತಿಂಗಳಿಂದ ಕೊರಟಗೆರೆ ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದನು. ಇಂದು ರಜೆ ಪಡೆದು ಕಂಠಪೂರ್ತಿ ಮದ್ಯ ಸೇವಿಸಿ ಬೀದಿಗಳಲ್ಲಿ ನಡೆದುಕೊಂಡು ಹೋಗುವಾಗ ಇಂತಹ ಕೃತ್ಯವನ್ನೆಸಗಿದ್ದಾನೆ. ಈತ ಕೆಲವು ದಿನಗಳಿಂದ ಕೊರಟಗೆರೆ ಪಟ್ಟಣದಲ್ಲಿ ಅನುಮಾನದಿಂದ ಓಡಾಡುತ್ತಿದ್ದನು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಜನರನ್ನು ನಂಬಿಸಿ ₹160 ಕೋಟಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಸಂತ್ರಸ್ತ ಬಾಲಕಿಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಸಿಪಿಐ ಅನಿಲ್ ಮತ್ತು ಪಿಎಸ್ಐ ಚೇತನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಆಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್‌ ಠಾಣೆ ಎದುರು ಜನರು ಜಮಾಯಿಸಿದ್ದಾರೆ. ಆರೋಪಿಯನ್ನು ತಮ್ಮ ವಶಕ್ಕೆ ಕೊಡಿ, ನಾವೇ ಶಿಕ್ಷೆ ನೀಡುತ್ತೇವೆ ಎಂದು ಆಗ್ರಹಿಸಿದ್ದಾರೆ. ಜನರನ್ನು ಪೊಲೀಸರು ಮನವೊಲಿಕೆ ಮಾಡಿದ್ದು, ಕಾನೂನಿನಡಿ ಇರುವ ಕಠಿಣ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Follow Us:
Download App:
  • android
  • ios