ನವದೆಹಲಿ(ಅ. 14)  ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು 17 ವರ್ಷದ ಬಾಲಕನನ್ನು ಬಂಧಿಸಿದ್ದಾರೆ.

ವಾಯುವ್ಯ ದೆಹಲಿಯ ಮಾಡೆಲ್ ಟೌನ್ ನ ಹಿಟ್ ಅಂಡ್ ರನ್ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. 8 ಮತ್ತು 5 ವರ್ಷ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ಕಾರು ಹರಿದಿತ್ತು.
ಪ್ರಕರಣದ ನಂತರ ಆರೋಪಿ ಪರಾರಿಯಾಗಿದ್ದು ಧ್ವಂಸಗೊಂಡಿದ್ದ ಕಾರಿನ ನಂಬರ್ ಪ್ಲೇಟ್ ಆಧಾರದಲ್ಲಿ ಆರೋಪಿಯ ಬಂಧನವಾಗಿದೆ.

ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಸಹೋದರಿಗೆ  ಗುಂಡಿಕ್ಕಿದ

ಘಟನೆ ನಡೆದ ದಿನ ಬಾಲಕಿಯರು ಚಿಕ್ಕಪ್ಪ ಮತ್ತು ಆರು ವರ್ಷದ ಸಹೋದರನೊಂದಿಗೆ ರಸ್ತೆ ದಾಟುತ್ತಿದ್ದರು. ಇದ್ದಕ್ಕಿದ್ದಂತೆ, ಬಿಳಿ ಬಣ್ಣದ ಹೋಂಡಾ ಸಿಟಿ ಕಾರು  ಅವರ ಮೇಲೆ ಹರಿದಿದೆ.  ಡಿಕ್ಕಿಯಾದ ರಭಸಕ್ಕೆ ಮಕ್ಕಳು ಗಾಳಿಯಲ್ಲಿ ಹಾರಿ ನೆಲಕ್ಕೆ ಅಪ್ಪಳಿಸಿದ್ದಾರೆ.

ಗುಂಜನ್ (8) ಮತ್ತು ಭೂಮಿ (5) ಇಬ್ಬರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.  ಸಹೋದರರ ಸ್ಥಿತಿ ಸಹ ಗಂಭೀರವಾಗಿದ್ದು ಏಮ್ಸ್ ಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.