ಚಂಡಿಘಡ(ಅ. 13) ಬೇರೆಯವರೊಡನೆ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ 19 ವರ್ಷದ ಯುವತಿಯನ್ನು ಸೋದರಸಂಬಂಧಿ  ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಪಂಜಾಬ್‌ನ ಪಟಿಯಾಲ ಜಿಲ್ಲೆಯ ಸನೌರ್ ಪೊಲೀಸ್ ಠಾಣೆ ವ್ಯಾಪ್ತಿಯ ಭಂಬುವಾನ್ ಗ್ರಾಮದಲ್ಲಿನ ಘಟನೆ ಬೆಚ್ಚಿ ಬೀಳಿಸಿದೆ.

ಘಟನೆಯ ನಂತರ  ಆರೋಪಿ ಪಿಎಸ್ ಸಿಂಗ್ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಆತನ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.  ಶಸ್ತ್ರಾಸ್ತ್ರ ಕಾಯ್ದೆಯಡಿಯೂ ಆರೋಪ ಸಿದ್ಧಮಾಡಿಕೊಳ್ಳಲಾಗಿದೆ.

ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ

ಸಂತ್ರಸ್ತೆಯ ತಾಯಿ ದೂರು  ನೀಡಿದ್ದು, ಸೋಮವಾರ ಮಧ್ಯಾಹ್ನ ತನ್ನ ಮಗಳು ಮತ್ತು ಆರೋಪಿಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಆಕೆ ಯಾರೊಂದಿಗಾದರೂ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಎಂದು ಆತ ಆರೋಪಿಸುತ್ತಿದ್ದ.  ನಂತರ ಸಿಟ್ಟಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.

ಆರೋಪಿಯು ಪಿಸ್ತೂಲ್ ತಂದು ಮೂರು ಸುತ್ತು ಗುಂಡು ಹಾರಿಸಿದ್ದಾನೆ, ಅದರಲ್ಲಿ ಎರಡು ಗುಂಡುಗಳು ಯುವತಿಗೆ ತಗುಲಿದರೆ ಒಂದು ಗುಂಡು ಮನೆಯ ಗೋಡೆಗೆ ಬಡಿದಿದೆ.