*  ಬೆಳಗಾವಿ ಜಿಲ್ಲೆಯ ಸಿಂದಿಕುರಬೇಟ ಗ್ರಾಮದಲ್ಲಿ ಯುವಕನ ಬಂಧನ*  ಮುಸ್ತಾಕ್ ಅಲಿ ಹೆಸರಿನಲ್ಲಿ ಹರ್ಷ ಕೊಲೆಗೆ ಪ್ರತೀಕಾರವಾಗಿ ಪೋಸ್ಟ್ ಹಾಕಿದ್ದ ಸಿದ್ದಾರೂಢ *  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಪೋಲಿಸರಿಂದಲೂ ತನಿಖೆ

ಬಾಗಲಕೋಟೆ(ಮಾ.24): ಸಾಮಾಜಿಕ ಜಾಲತಾಣದಲ್ಲಿ(Social Media) ಕೋಮು ದ್ವೇಷದ(Communal Hate) ಪೋಸ್ಟ್ ಮಾಡಿದ್ದ ಯುವಕನನನ್ನ ಪೊಲೀಸರು ಇಂದು(ಗುರುವಾರ) ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸಿಂದಿಕುರಬೇಟ ಗ್ರಾಮದಲ್ಲಿ ಬಾಗಲಕೋಟೆ(Bagalkot) ಪೊಲೀಸರು ಬಂಧಿಸಿದ್ದಾರೆ. ಸಿದ್ದಾರೂಢ ಎಂಬಾತನೇ ಬಂಧಿತ ಯುವಕನಾಗಿದ್ದಾನೆ. 

Add Asianetnews Kannada as a Preferred SourcegooglePreferred

ಮುಸ್ತಾಕ್ ಅಲಿ ಹೆಸರಿನಲ್ಲಿ ಹರ್ಷ ಕೊಲೆಗೆ(Harsha Murder) ಪ್ರತೀಕಾರವಾಗಿ ಸಿದ್ದಾರೂಢ ಪೋಸ್ಟ್ ಹಾಕಿದ್ದನು. ಶಿವಮೊಗ್ಗದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ ಅವರಿಗೂ ಸಹ ಸಿದ್ದಾರೂಢ ಪೋಸ್ಟ್ ಮಾಡಿದ್ದನು. 

ಮಲೆನಾಡಿನಲ್ಲಿ ಕಾಫಿ ಕಳ್ಳತನದ ಹಾದಿ ಹಿಡಿದಿರುವ ಕೆಲ ಯುವಕರು: ಓರ್ವನ ಬಂಧನ

ಈತನ ವಿರುದ್ಧ ಬಾಗಲಕೋಟೆ ಸಿಇಎನ್ ಪೋಲಿಸರಿಗೆ(Police) ದೂರು, ಅತ್ತ ಶಿವಮೊಗ್ಗದಲ್ಲೂ ಎಂಎಲ್ಸಿ ಅರುಣ ಅವರಿಂದ ದೂರು ದಾಖಲಾಗಿತ್ತು. ದೂರು ಆಧರಿಸಿ ಬಾಗಲಕೋಟೆ ಪೊಲೀಸರು ಯುವಕನನ್ನ ಬಂಧಿಸಿದ್ದಾರೆ. ಬಂಧಿತ ಯುವಕನನ್ನ ನ್ಯಾಯಾಂಗ ವಶಕ್ಕೆ ಕೊಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ(Shivamogga) ಪೊಲೀಸರೂ ಕೂಡ ಪ್ರತ್ಯೇಕ ತನಿಖೆಯನ್ನ ನಡೆಸುತ್ತಿದ್ದಾರೆ.