Asianet Suvarna News Asianet Suvarna News

ಬೀಫ್ ತಿನ್ನಿಸಿ ಪತ್ನಿ ಹಾಗೂ ಆಕೆಯ ಸೋದರನ ಕಿರುಕುಳ, ಪತಿ ಆತ್ಮಹತ್ಯೆ!

ಬೀಫ್ ತಿನ್ನದೆ ಇದ್ದರೆ ಸಾಯಿಸುತ್ತೇನೆ ಎಂದು ಬೆದರಿಕೆ, ಬೀಫ್ ತಿನ್ನಿಸಿ ವಿಕೃತಿ ಮೆರೆದ ಪತ್ನಿ ಹಾಗೂ ಆಕೆಯ ಸಹೋದರನ ಕಿರುಕುಳಕ್ಕೆ ಬೇಸತ್ತ ಹಿಂದೂ ಯವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಂದು ತಿಂಗಳ ಬಳಿಕ ಮುಚ್ಚಿಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ.
 

Hindu man Commit suicide after Muslim wife and brother in law forcefully feed beef in Gujarat ckm
Author
First Published Aug 29, 2022, 9:21 PM IST

ಸೂರತ್(ಆ.29):  ಮುಸ್ಲಿಮ್ ಯುವತಿಯ ಪ್ರೀತಿಸಿ ಮದುವೆಯಾದ ಹಿಂದೂ ಯುವಕ ರೋಹಿತ್ ರಜಪೂತ್ ಇದೀಗ ಆತ್ಮಹತ್ಯೆಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪತ್ನಿ ಸೋನಮ್ ಹಾಗೂ ಆಕೆಯ ಸಹೋದರ ಅಕ್ತರ್ ಆಲಿ ಬಲವಂತವಾಗಿ ರೋಹಿತ್ ರಜಪೂತ್‌ಗೆ ದನದ ಮಾಂಸ ತಿನ್ನಿಸಿದ್ದಾರೆ. ನಿರಾಕರಿಸಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ. ಬಳಿಕ ಪ್ರತಿ ದಿನ ಬೀಫ್ ತಿನ್ನುವಂತೆ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ರೋಹಿತ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈ ಪ್ರಕರಣ ಒಂದು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ತನಿಖೆ ಆರಂಭಿಸಿರುವ ಪೊಲೀಸರಿಗೆ ಹಿಂದೂ ಯುವಕ ರೋಹಿತ್ ರಜಪೂತ್ ಬರೆದ ಡೆತ್ ನೋಟ್ ಸಿಕ್ಕಿದೆ. ಈ ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿದೆ. ಇದೀಗ ಹಿಂದೂ ಯುವಕನ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ರೋಹಿತ್ ರಜಪೂತ್ ಹಾಗೂ ಸೋನಮ್ ಆಲಿ(Rohit Rajput and Sonam Ali) ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಇವರಿಬ್ಬರ ಪರಿಚಯ ಸ್ನೇಹವಾಗಿ ಬಳಿಕ ಪ್ರೀತಿಯಾಗಿ ತಿರುಗಿತ್ತು. ರೋಹಿತ್ ಪೋಷಕರು ಪರಿ ಪರಿಯಾಗಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕಾರಣ ಸೋನಮ್ ಆಲಿ ಕುಟುಂಬಸ್ಥರು ಬೆದರಿಕೆ ಹಾಕಿದ್ದರು. ಪೋಷಕರ ವಿರೋಧ, ಬೆದರಿಕೆ ನಡುವೆ ಸೋನಮ್ ವರಿಸಿದ ರೋಹಿತ್‌ಗೆ ನೆಮ್ಮದಿಯೇ ಇಲ್ಲದಾಯಿತು.

2 ವರ್ಷಗಳಿಂದ ಶಾರುಖ್‌ನ ಭಯದಲ್ಲೇ ಬದುಕಿದ್ದಳು ಅಂಕಿತಾ, ಶಿಕ್ಷೆಯ ಭಯವಿಲ್ಲದೆ ನಗುತ್ತಲೇ ಬಂದ ಆರೋಪಿ!

ಇತ್ತ ಪೊಷಕರಿಂದ ದೂರವಾದ ರೋಹಿತ್ ರಜಪೂತ್‌ಗೆ ಪತ್ನಿ ಸೋನಮ್ ಆಲಿ ಮನೆಯಿಂದ ಕಿರುಕುಳ ಆರಂಭಗೊಂಡಿತ್ತು. ಮುಸ್ಲಿಮ್ ಧರ್ಮಕ್ಕೆ ಮತಾಂತರದ ಯತ್ನ ಕೂಡ ನಡೆದಿತ್ತು ಅನ್ನೋ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ. ಇತ್ತ ರೋಹಿತ್ ರಜಪೂತನನ್ನು ಮುಸ್ಲಿಮನಾಗಿ ಮಾಡಲು ಪತ್ನಿ ಸೋನಮ್ ಆಲಿ ಹಾಗೂ ಆಕೆಯ ಸಹೋದರ ಅಕ್ತರ್ ಅಲಿ ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ. 

ಇದರ ಭಾಗವಾಗಿ ರೋಹಿತ್ ರಜಪೂತ್‌ಗೆ ಕೊಲೆ ಬೆದರಿಗೆ ಹಾಕಿ ದನದ ಮಾಂಸ(Beef) ತಿನ್ನಿಸಿದ್ದಾರೆ. ಇಷ್ಟೇ ಅಲ್ಲ ಪ್ರತಿ ದಿನ ದನದ ಮಾಂಸ ತಿನ್ನುವಂತೆ ಕಿರುಕುಳ ನೀಡಿದ್ದಾರೆ. ಹಿಂದೂ ಧರ್ಮದ ಆಚರಣೆಗಳನ್ನು ಕೈಬಿಡುವಂತೆ ಧಮ್ಕಿ ಹಾಕಿದ್ದಾರೆ. ಮುಸ್ಲಿಮ್ ಹಬ್ಬಗಳು, ಆಚರಣೆಗಳು ಮಾಡುವಂತೆ ತಾಕೀತು ಮಾಡಿದ್ದಾರೆ. ಕಿರುಕುಳ ತಾಳಲಾರದ ರೋಹಿತ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

8 ವರ್ಷದ ಪಾಕ್ ಹಿಂದೂ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಣ್ಣು ಕಿತ್ತ ದುರುಳರು!

ರೋಹಿತ್ ಸಾವಿನ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಸೋನಮ್ ಆಲಿ ಹಾಗೂ ಅಕ್ತರ್ ಆಲಿ ಯತ್ನಿಸಿದ್ದಾರೆ. ಆದರೆ ಮಗನ ಸುಳಿವೇ ಇಲ್ಲದ ಕಾರಣ ಪೋಷಕರು ದೂರು ನೀಡಿದ್ದಾರೆ. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈತನ ಬರೆದ ಡೆತ್ ನೋಟ್ ಪತ್ತೆಯಾಗಿದೆ. ನಾನು ಈ ಜಗತ್ತನ್ನು ತೊರೆಯುತ್ತಿದ್ದೇನೆ. ನನ್ನ ಸಾವಿಗೆ ಪತ್ನಿ ಸೋನಮ್ ಅಲಿ ಹಾಗೂ ಆಕಯ ಸಹೋದರ ಅಕ್ತರ್ ಅಲಿ ಕಾರಣ. ಕೊಲೆ ಬೆದರಿಗೆ ಹಾಕಿ ನನಗೆ ದನದ ಮಾಂಸ ತಿನ್ನಿಸಿದ್ದಾರೆ. ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಹತ್ಯೆ ಬೆದರಿಕೆ ಹಾಕಿದ್ದಾರೆ. ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾನೆ.

Follow Us:
Download App:
  • android
  • ios