ರಾಯಚೂರು: ವಾಟ್ಸಪ್‌ನಲ್ಲಿ ದೇಶದ್ರೋಹದ ಸಂದೇಶ, ಉರ್ದು ಶಾಲೆ ಶಿಕ್ಷಕಿ ಅಮಾನತು
ಪ್ರಧಾನಮಂತ್ರಿ , ರಕ್ಷಣಾ ಸಚಿವ ಹಾಗೂ ಸುಪ್ರೀಂ ಕೋರ್ಟ್ ಬಗ್ಗೆ ಹಗುರವಾದ ಹೇಳಿಕೆ| ಕರಪತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಶಿಕ್ಷಕಿ| ದೇಶದ್ರೋಹದ ಪ್ರಚಾರ, ಉರ್ದು ಭಾಷೆಯಲ್ಲಿ ಇಲ್ಲಸಲ್ಲದ ಧಾರ್ಮಿಕ ಅಪಪ್ರಚಾರ ನಡೆಸಿ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕಿಯಾಗಿದ್ದುಕೊಂಡು ಮತಾಂಧತೆಯನ್ನು ಬಿತ್ತಿತ್ತಿದ್ದಾರೆ ಎಂಬ ದೂರು|
ರಾಯಚೂರು(ಸೆ.02):ದೇಶದ್ರೋಹದ ಕುರಿತು ಉರ್ದು ಭಾಷೆಯಲ್ಲಿದ್ದ ಕರಪತ್ರಗಳ ಸಂದೇಶವನ್ನು ವಾಟ್ಸಪ್‌ನಲ್ಲಿ ಹರಿಬಿಟ್ಟ ಸ್ಥಳೀಯ ಅಂದ್ರೂನ್ ಕಿಲ್ಲಾ ಬಡಾವಣೆಯ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಶಿಕ್ಷಕಿ ಖಮರುನ್ನೀಸ್ಸಾ ಬೇಗಂ ಅವರನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶರು ಬಿ.ಎಚ್.ಗೋನಾಳ್ ಅಮಾನತುಗೊಳಿಸಿದ್ದಾರೆ.
ದೇಶದ ಪ್ರಧಾನಮಂತ್ರಿ , ರಕ್ಷಣಾ ಸಚಿವ ಹಾಗೂ ಸುಪ್ರೀಂ ಕೋರ್ಟ್ ಬಗ್ಗೆ ಹಗುರವಾದ ಹೇಳಿಕೆಗಳ ಕರಪತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಲ್ಲದೇ, ಶಿಕ್ಷಕರಿಯಾಗಿ ದೇಶದ್ರೋಹದ ಪ್ರಚಾರ, ಉರ್ದು ಭಾಷೆಯಲ್ಲಿ ಇಲ್ಲಸಲ್ಲದ ಧಾರ್ಮಿಕ ಅಪಪ್ರಚಾರ ನಡೆಸಿ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕಿಯಾಗಿದ್ದುಕೊಂಡು ಮತಾಂಧತೆಯನ್ನು ಬಿತ್ತಿತ್ತಿದ್ದಾರೆ ಎಂದು ಸಂತೋಷ್ ಎಂಬುವರು ದೂರು ನೀಡಿದ್ದರು.
ಮಾನ್ವಿ: ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾವು
ದೂರಿನ ಮೇರೆಗೆ ಡಿಡಿಪಿಐ ಶಿಕ್ಷಕಿಯನ್ನು ಅಮಾನತುಗೊಳಿಸಿ, ಅನುಮತಿಯಿಲ್ಲದೇ ಕೇಂದ್ರ ಸ್ಥಾನ ತೊರೆಯಬಾರದು ಎಂದು ಸೂಚನೆ ನೀಡಿದ್ದಾರೆ.