Bengaluru: ರಕ್ಷಣೆ ನೀಡಲು 3 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟ ಮುಖ್ಯಪೇದೆ! ಹಣ ತೆಗೆದುಕೊಳ್ಳುವಾಗ ಲೋಕಾ ಬಲೆಗೆ
ನ್ಯಾಯಾಲಯದ ನಿರ್ಬಂಧಾಜ್ಞೆ ಆದೇಶವನ್ನು ಜಾರಿಗೊಳಿಸಲು .1.5 ಲಕ್ಷ ಲಂಚ ಸ್ವೀಕರಿಸುವಾಗ ಪೀಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್‌ವೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು (ಜು.2): ನ್ಯಾಯಾಲಯದ ನಿರ್ಬಂಧಾಜ್ಞೆ ಆದೇಶವನ್ನು ಜಾರಿಗೊಳಿಸಲು .1.5 ಲಕ್ಷ ಲಂಚ ಸ್ವೀಕರಿಸುವಾಗ ಪೀಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್‌ವೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಶುಕ್ರವಾರ ಬಿದ್ದಿದ್ದಾರೆ.
ಹೆಡ್ ಕಾನ್‌ಸ್ಟೇಬಲ್ ಎನ್.ಮಾರೇಗೌಡ ಬಂಧಿತರಾಗಿದ್ದು, ಕರಿಓಬನಹಳ್ಳಿ ಸಮೀಪದ ನಿವೇಶನದ ವಿಚಾರವಾಗಿ ನ್ಯಾಯಾಲಯದ ನಿರ್ಬಂಧಾಜ್ಞೆ ಆದೇಶದನ್ವಯ ರಕ್ಷಣೆ ನೀಡಲು ಗವಿರಾಜ್‌ಗೌಡ ಅವರಿಂದ. 3 ಲಕ್ಷಕ್ಕೆ ಮಾರೇಗೌಡ ಬೇಡಿಕೆ ಇಟ್ಟಿದ್ದ. ಅಂತೆಯೇ ಅದರಲ್ಲಿ 1.5 ಲಕ್ಷವನ್ನು ದೂರುದಾರರಿಂದ ಸ್ವೀಕರಿಸುವಾಗ ಹೆಡ್ ಕಾನ್‌ಸ್ಟೇಬಲ್‌ನನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ಆನ್ಲೈನ್ ಮೂಲಕವೇ ಗ್ರಾಮ ಲೆಕ್ಕಿಗನ ಲಂಚ ವ್ಯವಹಾರ, 66 ಸಾವಿರ ಪಡೆದು ಮಹಿಳೆಗೆ ಮೋಸ!
ಕರಿಓಬನಹಳ್ಳಿಯ 20/40 ನಿವೇಶವನ್ನು ಕೆ.ಎಲ್.ದಿನೇಶ್ ಅಲಿಯಾಸ್ ಅಭಿನವ್ ಅವರಿಗೆ ಗವಿರಾಜ್‌ಗೌಡ ಮಾರಾಟ ಮಾಡಿದ್ದರು. ಈ ನಿವೇಶನದಲ್ಲಿ ದಿನೇಶ್ ಮನೆ ನಿರ್ಮಿಸಲು ಮುಂದಾಗಿದ್ದರು. ಆದರೆ ಈ ನಿವೇಶನವು ತಮಗೆ ಸೇರಿದ್ದು ಎಂದು ಹೇಳಿ ದಿನೇಶ್ ಅವರಿಗೆ ಮನೆ ನಿರ್ಮಿಸದಂತೆ ಕಾಮಗಾರಿಗೆ ಕೋಕಿಲಾ ಹಾಗೂ ಲಕ್ಷ್ಮಣ್ ರೆಡ್ಡಿ ಅಡ್ಡಿ ಪಡಿಸಿದ್ದರು. ಆಗ ನ್ಯಾಯಾಲಯದಲ್ಲಿ ದಿನೇಶ್ ಪರವಾಗಿ ತಾತ್ಕಾಲಿಕ ನಿರ್ಬಂಧಾಜ್ಞೆಯನ್ನು ಗವಿರಾಜಗೌಡ ತಂದಿದ್ದರು.
Bengaluru : ಕುಡುಕ ಮಗನ ಕಾಟ ತಾಳಲಾರದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!
ಈ ಆದೇಶದ ಬಳಿಕವೂ ಮನೆಗೆ ಕಟ್ಟಲು ಕೋಕಿಲಾ ಕುಟುಂಬದವರು ತೊಂದರೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನ್ವಯ ತಮಗೆ ರಕ್ಷಣೆ ನೀಡುವಂತೆ ಪೀಣ್ಯ ಪೊಲೀಸ್ ಠಾಣೆಗೆ ಗವಿರಾಜ ಗೌಡ ಮನವಿ ಮಾಡಿದ್ದರು. ಆಗ ನ್ಯಾಯಾಲಯದ ನಿರ್ಬಂಧಾಜ್ಞೆ ಆದೇಶವನ್ನು ಜಾರಿಗೊಳಿಸಲು 3 ಲಕ್ಷಕ್ಕೆ ಹೆಡ್ ಕಾನ್‌ಸ್ಟೇಬಲ್ ಮಾರೇಗೌಡ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಗವಿರಾಜಗೌಡ ದೂರು ನೀಡಿದ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.