ಪೆಟ್ರೋಲ್‌ ಹಾಕಿಸುತ್ತಿದ್ದ ಇಬ್ಬರು ಯುವತಿ ಕಿಡ್ನ್ಯಾಪ್; CCTV ಇದ್ರೂ ಉಪಯೋಗವಿಲ್ಲ!

ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದ ಇಬ್ಬರು ಯುವತಿರು ಕಿಡ್ನ್ಯಾಪ್‌. ಮಾಲೀಕನ ಸಹಾಯದಿಂದ  ದೂರು ದಾಖಲಾದರೂ  ಕುಟುಂಬದವರಿಗೆ ಸಿಕ್ಕಿಲ್ಲ. 

Hawaii island two young girls kidnapped at a local gas station

ಹವಾಯಿ ದ್ವೀಪವೂ ಒಂದು ಪ್ರವಾಸಿ ಸ್ಥಳ. ಇಲ್ಲಿ ವಾಸವಿರುದ ಹವಾಯಿಯರಿಗೆ ಹೊರ ದೇಶಗಳಿಂದ ಬರುವ ಪ್ರಯಾಣಿಕರು ಯಾರು , ಸ್ಥಳೀಯರು ಯಾರೆಂದು ತಿಳಿಯದಿರುವಷ್ಟು ಸಣ್ಣ ದ್ವೀಪ. ಅದರಲ್ಲೂ ಅತಿ ಕಡಿಮೆ ಕ್ರೈಂ ಪ್ರಕರಣಗಳ ನಡೆಯುವ ಸ್ಥಳವಿದು.

ತಾಯಿ ಕಣ್ಣೆದುರೇ 18 ವರ್ಷದ ಮಗಳ ಅಪಹರಣ, ಪತ್ತೆಯಾದಾಗ ಬಯಲಾಯ್ತು ಗುಟ್ಟು!

ಹವಾಯಿ ದ್ವೀಪದಲ್ಲಿ ವಾಸವಿರುವ ಜಂಟಿ ಕುಟುಂಬದ ಇಬ್ಬರು ಯುವತಿಯರು ಕಾಣೆಯಾಗಿದ್ದಾರೆಂದು ದೂರು ದಾಖಲಾಗಿದೆ. ಸೋಮವಾರ ಮೂವರು ಮಕ್ಕಳ ಜತೆ ಗ್ಯಾಸ್‌ ಸ್ಟೇಶನ್‌ಗೆ ತೆರಳಿದ ತಾಯಿ ಹಣ ಕಟ್ಟಲು ಮಾಲೀಕರ ಬಳಿ ತೆರಳುತ್ತಾರೆ. ಈ ಸಮಯದಲ್ಲಿ ಇಬ್ಬರು ದುಷ್ಕರ್ಮಿಗಳು ಕಾರಿನ ಬಳಿ ಆಗಮಿಸಿ ಕಾರಿನ ಬಾಗಿಲು ಒಡೆಯಲು ಪ್ರಯತ್ನಿಸಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಯುವತಿಯರನ್ನು ಸಮೀಪದಲ್ಲಿದ್ದ ಟ್ರಕ್‌ ನಲ್ಲಿ ಕರೆದೊಯ್ಯುತ್ತಾರೆ. ಕಾರಿನಲ್ಲಿದ್ದ ಪುಟ್ಟ ಹುಡುಗ ಅಮ್ಮನನ್ನು ಹುಡುಕಿಕೊಂಡು  ಅಂಗಡಿ ಒಳಗೆ ಪ್ರವೇಶ ಮಾಡುತ್ತಾರೆ.

Hawaii island two young girls kidnapped at a local gas station

ಪುಟ್ಟ ಹುಡುಗನಿಂದ ವಿಚಾರ ತಿಳಿದ ಕೂಡಲೇ ತಾಯಿ ಮಾಲೀಕರ ಸಹಾಯ ಪಡೆದುಕೊಂಡು ಹೊರ ಬರುವ ಮುನ್ನ ಟ್ರಕ್‌ ಅಲ್ಲಿಂದ ಮಾಯವಾಗುತ್ತದೆ. ಅಂಗಡಿಯಲ್ಲಿದ್ದ  ಸಿಸಿಟಿವಿ ಆಧಾರಗಳನ್ನು ಪಡೆದು ತಾಯಿ ಪೊಲೀಸಿರಿಗೆ ದೂರು ದಾಖಲಿಸುತ್ತಾರೆ. ವಿಡಿಯೋದಲ್ಲಿ ಇಬ್ಬರು ಹುಡುಗಿಯರನ್ನು ಅಪಹರಿಸಿದ ಯುವಕರ ಜೊತೆ ಟ್ರಕ್‌ನಲ್ಲೂ ಇಬ್ಬರು ಯುವರಿದ್ದರು.  ಈ ಘಟನೆಯೂ ಮಾಮಲಹೋವಾ ಹೆದ್ದಾರಿಯಲ್ಲಿರುವ 76 ಗ್ಯಾಸ್ ಸ್ಟೇಶನ್‌ನಲ್ಲಿ ನಡೆದಿದೆ.

ಹಾಡಹಗಲೇ ಸ್ವಂತ ಮಗನನ್ನು ಕಿಡ್ನ್ಯಾಪ್ ಮಾಡಿದ ತಂದೆ..!

'ಹವಾಯಿ ಸಣ್ಣ ಜಾಗ ಆಗಿದ್ದು ಇಲ್ಲಿರುವ ಜನರಿಗೆ ಎಲ್ಲರೂ ಗೊತ್ತಿರುವವರೆ. ಅದರಲ್ಲೂ ನಮ್ಮ ಕುಟುಂಬದಲ್ಲಿ ಮೂರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಹುಡುಗ ಇರುವುದು ಇಡೀ ಊರಿಗೆ ಗೊತ್ತಿದೆ. ಇಂಥ ದುರಂತ ಹಾಡು ಹಗಲಲ್ಲೇ ನಡೆದಿರುವುದು ದುರಂತ. ಹೈವೇ ರೂಡ್‌ ಆಗಿರುವುದರಿಂದ ಅನೇಕ ಗಾಡಿಗಳು ಸಂಚಾರ ಮಾಡುತ್ತಿದ್ದವು. ನಮ್ಮ ಮಗ ಹೇಳುವ ಪ್ರಕಾರ ಅವರು ಫಾರಿನ್‌ ಭಾಷೆಯಲ್ಲಿ (ಮತ್ತೊಂದು ದೇಶದ ಭಾಷೆ) ಮಾತನಾಡುತ್ತಿದ್ದರು' ಎಂದು ಯುವತಿಯರ ತಾಯಿ  Ka'u ಹೇಳಿದ್ದಾರೆ. 

ಸಿಸಿಟಿವಿ ವಿಡಿಯೋ ಆಧಾರದ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

 

Latest Videos
Follow Us:
Download App:
  • android
  • ios