Crime News ತಾನೇ ಹಚ್ಚಿದ ಬೆಂಕಿಯಲ್ಲಿ ಬಿದ್ದು ರೈತ ಸಾವು

ವಿದ್ಯುತ್ ಪ್ರವಹಿಸಿ ತಂದೆ ಮಗ ಸಾವು
ತಾನೇ ಹಚ್ಚಿದ ಬೆಂಕಿಯಲ್ಲಿ ಬಿದ್ದು ಸತ್ತ ರೈತ
ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿ ಸಾವು

Haveri chamarajanagara and Bengaluru crime News Jan 19th rbj

ಬೆಂಗಳೂರು, (ಜ.19):   ಬೆಂಗಳೂರಿನಲ್ಲಿ(Bengaluru)  ವಿದ್ಯುತ್ ಪ್ರವಹಿಸಿ ತಂದೆ ಮಗ ಸಾವು(Death), ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ರೈತ9Farmer) ಹಾಗೂ ನೀರಿಗಿಳಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಾವು.. ಈ ಪ್ರತ್ಯೇಕವಾಗಿ ಸಂಭವಿಸಿದ ಘಟನೆಯ ವಿವರ ಈ ಕೆಳಗಿನಂತಿದೆ.

ವಿದ್ಯುತ್ ಪ್ರವಹಿಸಿ ತಂದೆ-ಮಗ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಆರ್​.ಟಿ. ನಗರದ ರಾಮಕೃಷ್ಣ ಅಪಾರ್ಟ್​ಮೆಂಟ್​​ನಲ್ಲಿ  ನಡೆದಿದೆ.

SBI Robbery: ಬ್ಯಾಂಕ್‌ ದರೋಡೆ ಮಾಡಿದವನ ಸಿನಿಮೀಯ ರೀತಿ ಬಂಧನ

ನೀರಿನ ಸಂಪ್ ಸ್ವಚ್ಛಗೊಳಿಸುವಾಗ  ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ರಾಜು ಹಾಗೂ ಈತನ 10 ವರ್ಷದ ಮಗ ಸಾಯಿ ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ

ಆರ್.​ಟಿ. ನಗರದ ಸುಲ್ತಾನ್ ಪಾಳ್ಯ ಬಳಿಯಿರುವ ರಾಮಕೃಷ್ಣ ಅಪಾರ್ಟ್​ಮೆಂಟ್​​ನಲ್ಲಿ ಇಂದು(ಬುಧವಾರ) ಸಂಪ್ ಕ್ಲೀನ್ ಮಾಡುವುದಕ್ಕೆ ಹೋಗಿದ್ದ ರಾಜು ಎಂಬುವರಿಗೆ ವಿದ್ಯುತ್ ತಗುಲಿದೆ. 
 
 ತಂದೆಯ ಚೀರಾಟ ಕಳಿ 10 ವರ್ಷದ ಮಗ ರಕ್ಷಿಸಲು ಹೋಗಿದ್ದಾನೆ. ಆಗ ಬಾಲಕನಿಗೂ ವಿದ್ಯುತ್​ ಶಾಕ್​ ತಗುಲಿ ಮೃತಪಟ್ಟಿದ್ದಾನೆ. ರಾಜು ಸಂಪ್ ಸ್ವಚ್ಛತಾ ಕೆಲಸಕ್ಕೆಂದು ಮಗನೊಂದಿಗೆ ಅಪಾರ್ಟ್​ಮೆಂಟ್​ಗೆ ಬಂದಿದ್ದ ಎಂದು ತಿಳಿದುಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಆರ್.ಟಿ.ನಗರ‌ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ‌.ಇನ್ನೂ, ಘಟನೆಗೆ ಅಪಾರ್ಟ್​​ಮೆಂಟ್ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಹಾವೇರಿ ಸುದ್ದಿ
 ರೈತನೊರ್ವ ಬೆಂಕಿ ಆರಿಸಲು ಹೋಗಿ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಗುತ್ತಲ ಸಮೀಪದ ಬೆಳವಗಿ ಗ್ರಾಮದಲ್ಲಿ ಸಂಭವಿಸಿದೆ.

ಮೃತ ರೈತನನ್ನು ನಿಂಗಪ್ಪ ಹಾದಿಮನಿ (75) ಎಂದು ತಿಳಿದು ಬಂದಿದ್ದು. ಮೃತ ರೈತನು ತನ್ನ ಸ್ವಂತ ಜಮೀನಿನಲ್ಲಿನ ಕಬ್ಬಿನ ಸೊಪ್ಪಿಗೆ ಬೆಂಕಿ ಹಚ್ಚಿ ಸುಡುತ್ತಿರುವಾಗ ನಿಯಂತ್ರಣಕ್ಕೆ ಬಾರದೇ ಪಕ್ಕದ ರೈತನ ಜಮೀನಿಗೆ ಬೆಂಕಿ ಹರಡುತ್ತಿರಲು, ಗಾಬರಿಯಿಂದ ಬೆಂಕಿ ನಂದಿಸಲು ಹೋಗಿದ್ದ ಸಂಧರ್ಭದಲ್ಲಿ ಆಕಸ್ಮಿಕವಾಗಿ ತಾನೇ ಹಚ್ಚಿದ ಬೆಂಕಿಯಲ್ಲಿ ಬಿದ್ದು ದೇಹದ ವಿವಿಧ ಭಾಗಗಳು ಸುಟ್ಟು ಹೋಗಿ ಮೃತಪಟ್ಟಿದ್ದಾರೆ ಎಂದು ಮೃತರ ಮಗ ಸಂತೋಷ ಪ್ರಕರಣ ದಾಖಲಿಸಿದ್ದಾರೆ.

ಗುತ್ತಲ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್. ಜಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿ ಸಾವು
ಚಾಮರಾಜನಗರ:  ನೀರಿಗಿಳಿದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಜಲಾಶಯದಲ್ಲಿ ಇಂದು ಮಧ್ಯಾಹ್ನ ನಡೆದಿದೆ. 

ಚಾಮರಾಜನಗರ ತಾಲೂಕಿನ ಚೆಂದುಕಟ್ಟೆಮೋಳೆ ಗ್ರಾಮದ ಕುಮಾರ್ ಎಂಬವರ ಪುತ್ರಿ ಸೌಂದರ್ಯ(15) ಮೃತ ದುರ್ದೈವಿ. ಮೃತ ಸೌಂದರ್ಯ ತನ್ನ ಸ್ನೇಹಿತೆಯೊಟ್ಟಿಗೆ ಇಂದು ಜಲಾಶಯ ನೋಡಲು ತೆರಳಿದ್ದ ವೇಳೆ ಈಜಲು ಬಾರದಿದ್ದರೂ ನೀರಿಗೆ ಇಳಿದಿದ್ದರಿಂದ ಈ ಅವಘಡ ಉಂಟಾಗಿದೆ ಎಂದು ಜೊತೆಗೆ ತೆರಳಿದ್ದ ಸ್ನೇಹಿತೆ ತಿಳಿಸಿದ್ದಾಳೆ. 

ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು ಈ ಸಂಬಂಧ
ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios