Asianet Suvarna News Asianet Suvarna News

Haveri: ಶಾಸಕ ನೆಹರೂ ಓಲೇಕಾರ್‌ ಅವರ ಇಬ್ಬರು ಮೊಮ್ಮಕ್ಕಳು ಆತ್ಮಹತ್ಯೆಗೆ ಶರಣು

*   ಬ್ಯಾಡಗಿಯಲ್ಲಿ ಹೃದಯ ವಿದ್ರಾವಕ ಘಟನೆ, ಅಕ್ಕ, ತಮ್ಮನ ಸಾವು
*   ಅಪ್ಪ ಬುದ್ದಿ ಹೇಳಿದ್ದಕ್ಕೆ ಮನನೊಂದು ಎಸ್ಸೆಸ್ಸೆಲ್ಸಿ ಮಗ ಆತ್ಮಹತ್ಯೆ
*   ಮಕ್ಕಳ ಶವದ ಎದುರು ಮುಗಿಲು ಮುಟ್ಟಿದ ತಂದೆ-ತಾಯಿ ಆಕ್ರಂದನ
 

Haveri BJP MLA Neharu Olekar Two Grandchildren Committed Suicide in Byadagi grg
Author
Bengaluru, First Published Nov 27, 2021, 11:43 AM IST

ಬ್ಯಾಡಗಿ(ನ.27): ಹಾವೇರಿ(Haveri) ವಿಧಾನಸಭಾ ಕ್ಷೇತ್ರದ ಬಿಜೆಪಿ(BJP) ಶಾಸಕ ನೆಹರೂ ಓಲೇಕಾರ್‌(Neharu Olekar) ಅವರ ಇಬ್ಬರು ಮೊಮ್ಮಕ್ಕಳು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಬ್ಯಾಡಗಿ(Byadagi) ಪಟ್ಟಣದ ವಿನಾಯಕ ನಗರದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತರನ್ನು ಪಟ್ಟಣದ ವಿನಾಯಕ ನಗರ ನಿವಾಸಿಗಳಾದ ನಾಗರಾಜ ಚಂದ್ರು ಛಲವಾದಿ (16) ಹಾಗೂ ಭಾಗ್ಯಲಕ್ಷ್ಮೀ ಚಂದ್ರು ಛಲವಾದಿ (18) ಆತ್ಯಹತ್ಯೆಗೆ ಶರಣಾದ ದುರ್ದೈವಿಗಳು.

ಸರಿಯಾಗಿ ಶಾಲೆಗೆ(School) ಹೋಗು ಅವರಿವರ ಜೊತೆ ತಿರುಗಾಡಬೇಡ ಎಂದು ಬುದ್ಧಿವಾದ ಹೇಳಿದ ತಂದೆ ಮಾತಿನಿಂದ ಕೋಪಗೊಂಡು ನಾಗರಾಜ ನೇಣಿಗೆ ಶರಣಾದ ಬೆನ್ನಲ್ಲೇ ತಮ್ಮನ ಸಾವಿನ ಸುದ್ದಿ ತಿಳಿದು ಅಕ್ಕ ಭಾಗ್ಯಲಕ್ಷ್ಮೀ ಸಹ ಅದೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

Youth Suicide | ನಿಶ್ಚಿತಾರ್ಥವಾಗಲಿದ್ದ ಯುವಕನ ಮನೆಗೆ ಬೇರೆ ಯುವತಿ ದಿಬ್ಬಣ : ಯುವಕ ಆತ್ಮಹತ್ಯೆ

ನಾಗರಾಜ ಛಲವಾದಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಸ್ಸೆಸ್ಸೆಲ್ಸಿಯಲ್ಲಿ(SSLC) ವಿಷಯ ಕಠಿಣವಿರುತ್ತದೆ. ಸರಿಯಾಗಿ ಶಾಲೆಗೆ ಹೋಗು ಅವರಿವರ ಜೊತೆ ತಿರುಗಾಡಬೇಡ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ತಂದೆ ಚಂದ್ರು ಬುದ್ಧಿವಾದ ಹೇಳಿದ್ದಾರೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ನಾಗರಾಜ ಬೆಳಗಿವ ಜಾವ ಸೀರೆ ಬಳಸಿಕೊಂಡು ನೇಣು ಹಾಕಿಕೊಂಡಿದ್ದಾನೆ. ಸುದ್ದಿ ತಿಳಿದು ಕೂಡಲೇ ತಾಲೂಕಾಸ್ಪತ್ರೆಗೆ ದಾಖಲಿಸಿದರೂ ನಾಗರಾಜನನ್ನು ಉಳಿಸಿಕೊಳ್ಳಲಾಗಲಿಲ್ಲ ಸಾವನ್ನಪ್ಪಿದ್ದಾನೆ.

ತಮ್ಮನ ಸಾವಿನ ಸುದ್ದಿ ತಿಳಿದು ಕಾಲೇಜಿನಿಂದ ತಾಲೂಕಾಸ್ಪತ್ರೆಗೆ ಓಡೋಡಿ ಬಂದ ಅಕ್ಕ ಭಾಗ್ಯಲಕ್ಷ್ಮೀ ಛಲವಾದಿ ತಮ್ಮನ ಮುಖ ನೋಡಿ ಜರ್ಝರಿತಳಾಗಿದ್ದಾಳೆ. ಸಾವಿನ ಶಾಕ್‌ನಿಂದ ಹೊರಬರಲಾರದೇ ಎಲ್ಲರೂ ಆಸ್ಪತ್ರೆಯಲ್ಲಿರುವ ಸಮಯದಲ್ಲಿಯೇ ಮನೆಗೆ ತೆರಳಿ ಅದೇ ಸೀರೆಗೆ ನೇಣು ಹಾಕಿಕೊಂಡಿದ್ದು ಅವಳು ಸಹ ಚಿಕಿತ್ಸೆ(Treatment) ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಮಕ್ಕಳ ಶವದೆದುರು(Deadbody) ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಒಂದೇ ದಿನ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಂದೆ, ತಾಯಿ ರೋದಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಈ ಕುರಿತು ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದ್ದು ತನಿಖೆ(Investigation) ಮುಂದುವರೆದಿದೆ.

ಅಕ್ಕ, ತಮ್ಮ ಇಬ್ಬರೂ ನೇಣಿಗೆ ಶರಣಾದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕ ವಿರೂಪಾಕ್ಷಪ್ಪ ಮೃತ ಮಕ್ಕಳ ಪಾಲಕರಿಗೆ ಸಾಂತ್ವನ ಹೇಳಿದರು. ಮಕ್ಕಳ ಆತ್ಮಹತ್ಯೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದು, ಆತುರದ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದಿದ್ದಾರೆ.

ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುವ ತಂದೆ, ತಾಯಿಗೆ ಬುದ್ಧಿ ಹೇಳುವ ಹಕ್ಕಿದೆ. ತಂದೆ, ತಾಯಿಯ ಮಾತನ್ನೇ ವೇದವಾಕ್ಯ ಎಂದು ಪಾಲಿಸಿದಂತಹ ಮಹನೀಯರ ದೇಶವಿದು. ಅಂತಹುದರಲ್ಲಿ ಕೇವಲ ತಂದೆ ಬೈದರು ಎಂಬ ಕಾರಣಕ್ಕೆ ಮಕ್ಕಳು ನೇಣು ಹಾಕಿಕೊಂಡಿದ್ದು ದುರುದೃಷ್ಟಕರ ಸಂಗತಿ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ತಿಳಿಸಿದ್ದಾರೆ  

Uttara Kannada| ಅಕಾಲಿಕ ಮಳೆಯಿಂದ ಬೆಳೆ ನಷ್ಟ: ರೈತ ಆತ್ಮಹತ್ಯೆ

ಅಕಾಲಿಕ ಮಳೆಗೆ ಬೆಳೆನಾಶ; ರೈತ ಆತ್ಮಹತ್ಯೆ

ಕುರುಗೋಡು: ಅಕಾಲಿಕವಾಗಿ ಸುರಿದ ಮಳೆಗೆ(Rain) ಬೆಳೆನಾಶಗೊಂಡಿದ್ದರಿಂದ(Crop Damage) ಕಂಗಾಲಾದ ರೈತರೊಬ್ಬರು(Farmer) ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗಾದಿಲಿಂಗಪ್ಪ (31) ವಿಷ ಸೇವಿಸಿ ಆತ್ಮಹತ್ಯೆಮಾಡಿಕೊಂಡ ರೈತ. ಅವರಿಗೆ ತಾಯಿ, ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ.

ಗಾದಿಲಿಂಗಪ್ಪ ಅವರು ಸ್ವಂತ ಜಮೀನು ಇಲ್ಲದೆ ಬೇರೆಯವರ ಐದು ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಮೆಣಸಿನಕಾಯಿ ಬೆಳೆದಿದ್ದರು. ಕ್ರಿಮಿನಾಶಕ, ರಸಗೊಬ್ಬರ, ಬೆಳೆ ನಿರ್ವಹಣೆಗೆಂದು ಖಾಸಗಿಯಾಗಿ .5 ಲಕ್ಷ ಸಾಲ ಮಾಡಿದ್ದರು. ಕಳೆದ ಏಳೆಂಟು ದಿನಗಳ ಹಿಂದೆ ಸುರಿದ ಮಳೆಗೆ ಮೆಣಸಿನಕಾಯಿ ಬೆಳೆ ಭಾಗಶಃ ಹಾನಿಯಾಗಿತ್ತು. ಇದರಿಂದ ಗಾದಿಲಿಂಗಪ್ಪ ಸಾಲದ ಭೀತಿಯಲ್ಲಿದ್ದರು. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಕ್ರಿಮಿನಾಶಕ ಸೇವಿಸಿದ್ದರು. ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗುರುವಾರ ರಾತ್ರಿ ವೇಳೆಗೆ ಮೃತಪಟ್ಟಿದ್ದಾರೆ. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಮೃತ ಗಾದಿಲಿಂಗಪ್ಪನ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios