Asianet Suvarna News Asianet Suvarna News

ಹಾಸನ ಜಿಲ್ಲಾಧಿಕಾರಿ ಕಚೇರಿ ಎಸ್‌ಡಿಸಿ ಸುಚಿತ್ರಾ ನೇಣುಬಿಗಿದು ಆತ್ಮಹತ್ಯೆ!

ಹಾಸನ ಜಿಲ್ಲಾಧಿಕಾರಿ ಕಚೇರಿ ಎಸ್‌ಡಿಸಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ ರಕ್ಷಣಾಪುರಂನಲ್ಲಿ ನಡೆದಿದೆ.

Hassan District Collectors Office SDC committed suicide at hassan rav
Author
First Published Nov 25, 2023, 2:45 PM IST

ಹಾಸನ (ನ.25) : ಹಾಸನ ಜಿಲ್ಲಾಧಿಕಾರಿ ಕಚೇರಿ ಎಸ್‌ಡಿಸಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ ರಕ್ಷಣಾಪುರಂನಲ್ಲಿ ನಡೆದಿದೆ.

ಸುಚಿತ್ರಾ (33) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಜಿಲ್ಲಾಧಿಕಾರಿ ಕಚೇರಿ ಗ್ರಾಮ ಒನ್ ಕೇಂದ್ರದಲ್ಲಿ ಎಸ್‌ಡಿಸಿ ಆಗಿ ಕೆಲಸ ಮಾಡುತ್ತಿದ್ದ ಸುಚಿತ್ರಾ, ರಕ್ಷಣಾಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.  ಈ ಹಿಂದೆ ವಿಎ ಆಗಿದ್ದ ಸುಚಿತ್ರಾ ಪತಿ ಕೃಷ್ಣಮೂರ್ತಿ. ಅಪಘಾತದಲ್ಲಿ ನಿಧನ ಹೊಂದಿದ್ದರಿಂದ ಪತ್ನಿ ಸುಚಿತ್ರಾಗೆ ಅನುಕಂಪದ ಆಧಾರದ ಮೇಲೆ ಎಸ್‌ಡಿಸಿ ಹುದ್ದೆ ನೀಡಲಾಗಿತ್ತು. ಆದರೆ ನಿನ್ನೆ ರಾತ್ರಿ ಹಾಸನ ನಗರದ ರಕ್ಷಣಾಪುರಂನಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

 

BSNL ಅಧಿಕಾರಿಗಳ ಕಳ್ಳಾಟಕ್ಕೆ ಬೇಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದಂಪತಿ!

ಶುಕ್ರವಾರದಂದು ಮಗಳು ಸ್ಕೂಲ್‌ನಿಂದ ವಾಪಸ್ ಬಂದು ಮನೆಯ ಬಾಗಿಲು ಬಡಿದಿದ್ದಾಳೆ. ಆದರೆ ಎಷ್ಟು ಹೊತ್ತು ಕಳೆದರೂ ಬಾಗಿಲು ತೆಗೆಯದಿದ್ದಕ್ಕೆ ಮಾವನಿಗೆ ಕರೆ ಮಾಡಿ ತಿಳಿಸಿದ್ದಾಳೆ. ಬಳಿಕ ಮನೆಗೆ ಬಂದು ಬಾಗಿಲು ತಟ್ಟಿದಾಗಲೂ ಬಾಗಿಲು ತೆಗೆದಿಲ್ಲ. ಕೊನೆಗೆ ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದಾಗ ಸುಚಿತ್ರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಾಗಿದೆ. 

ಹಾಸನ: 33 ವರ್ಷದ ಮಗಳಿಗೆ ಮೆದುಳು ಜ್ವರ ಚಿಕಿತ್ಸೆಗಾಗಿ ನೆರವು ಕೋರಿದ ತಾಯಿ

Follow Us:
Download App:
  • android
  • ios