BSNL ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನ ಅಶೋಕ ರಸ್ತೆಯಲ್ಲಿರುವ  ಬಿಎಸ್‌ಎನ್ಎಲ್ ಕಚೇರಿ ಮುಂದೆ ನಡೆದಿದೆ. ಗುಬ್ಬಿ ಮೂಲದ ನಾಗರಾಜ್ ಹಾಗೂ ಪತ್ನಿ ನಾಗರತ್ನ ಆತ್ಮಹತ್ಯೆಗೆ ಯತ್ನಿಸಿದ ದಂಪತಿ.

ತುಮಕೂರು (ನ.24): BSNL ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನ ಅಶೋಕ ರಸ್ತೆಯಲ್ಲಿರುವ ಬಿಎಸ್‌ಎನ್ಎಲ್ ಕಚೇರಿ ಮುಂದೆ ನಡೆದಿದೆ. ಗುಬ್ಬಿ ಮೂಲದ ನಾಗರಾಜ್ ಹಾಗೂ ಪತ್ನಿ ನಾಗರತ್ನ ಆತ್ಮಹತ್ಯೆಗೆ ಯತ್ನಿಸಿದ ದಂಪತಿ.

ಗುಬ್ಬಿ ಹಾಗೂ ಕುಣಿಗಲ್ ತಾಲ್ಲೂಕಿನಲ್ಲಿ ಕಳೆದ 15 ವರ್ಷಗಳಿಂದ ಜಯಂತ್ ಕೇಬಲ್ ನೆಟ್ವರ್ಕ್ ಅಂಡ್ ಕಮ್ಯೂನಿಕೇಶನ್‌ ಎಂಬ ಹೆಸರಿನಲ್ಲಿ ಬಿಎಸ್‌ಎನ್‌ಎಲ್ ಏಜೆನ್ಸಿ ಪಡೆದು ಸಿಮ್ ಹಾಗೂ ಕರೆನ್ಸಿ ಮಾರಾಟ ಮಾಡ್ತಿದ್ದ ನಾಗರಾಜ್. ಕಳೆದ ನಾಲ್ಕು ವರ್ಷದಿಂದ 14 ಲಕ್ಷ ಹಣ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವ ಬಿಎಸ್‌ಎನ್ಎಲ್ ಕಚೇರಿ ಅಧಿಕಾರಿಗಳು. ಇದರಿಂದಾಗಿ 16 ಲಕ್ಷ ರೂ. ಸಾಲ ಮಾಡಿಕೊಂಡಿರುವ ನಾಗರಾಜ್. ಇತ್ತ ಅಧಿಕಾರಿಗಳು ಹಣ ಕೊಡದೇ ಕಿರುಕುಳ ಅತ್ತ ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ತೀವ್ರವಾಗಿ ನೊಂದಿದ್ದ ದಂಪತಿಗಳು.

ಪವರ್ ಕಟ್, ಲೋಡ್‌ ಶೆಡ್ಡಿಂಗ್ ನಡುವೇ ಗ್ರಾಹಕರಿಗೆ ಮತ್ತೊಂದು ಶಾಕ್; ಇಂದಿನಿಂದ 3 ದಿನ ಬೆಸ್ಕಾಂ ಆನ್‌ಲೈನ್ ಸೇವೆ ಬಂದ್!

ನಿನ್ನೆ ಸಂಜೆಯೂ ಕಚೇರಿಗೆ ಬಂದಿದ್ದಾರೆ. ಆಗಲೂ ಹಣ ಕೊಡದೇ ಮಾನಸಿಕ ಹಿಂಸೆ ನೀಡಿದ್ದ ಅಧಿಕಾರಿಗಳು. ಇದರಿಂದ ಬೇಸತ್ತಿದ್ದ ದಂಪತಿ ನಿನ್ನೆ ಸಂಜೆ ಕಚೇರಿ ಮಂಭಾಗವೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ದಂಪತಿ. ಸಾರ್ವಜನಿಕರ ಸಮಯ ಪ್ರಜ್ಙೆಯಿಂದ ತಪ್ಪಿದ ಅನಾಹುತ. 

ಬಿಎಸ್ ಎನ್ ಎಲ್ ಕಚೇರಿ ಅಧಿಕಾರಿಗಳ ವಿರುದ್ಧ ದೂರು ನೀಡಿದ ದಂಪತಿ. ಘಟನೆ ಸಂಬಂಧ ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಬೆಂಗಳೂರು ವಿದ್ಯುತ್‌ ತಂತಿ ತುಳಿದು ಸಾವು ಪ್ರಕರಣ: ಇಲಿ ಮೇಲೆ ಆರೋಪ ಹೊರಿಸಿದ ಬೆಸ್ಕಾಂ