ಸಂತ್ರಸ್ತೆ, ವಾಟ್ಸಾಪ್‌ ಸಂದೇಶದ ಮುಖಾಂತರ ಅಪರಿಚಿತ ವ್ಯಕ್ತಿಯನ್ನು ಸಂಪರ್ಕಿಸಿದಾಗ, ಫೋನ್‌ ಪೇ ಮುಖಾಂತರ .200 ಹಣ ಹಾಕಿದರೆ, ಭಾವಚಿತ್ರವನ್ನು ಡಿಲೀಟ್‌ ಮಾಡುವುದಾಗಿ ಹೇಳಿದ್ದಾನೆ. ಅದರಂತೆ ಸಂತ್ರಸ್ತೆ ತನ್ನ ಸ್ನೇಹಿತನಿಂದ ಫೋನ್‌ ಪೇ ಮುಖಾಂತರ .200 ಹಾಕಿಸಿದ್ದಾರೆ. ಆದರೂ ದುಷ್ಕರ್ಮಿ ಸಂತ್ರಸ್ತೆಯ ಭಾವಚಿತ್ರ ಡಿಲೀಟ್‌ ಮಾಡದೆ ಮಾನಸಿಕ ಕಿರುಕುಳ ನೀಡಿದ ಕಿರಾತಕ. 

ಬೆಂಗಳೂರು(ಜು.25): ಯುವತಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದ ಭಾವಚಿತ್ರವನ್ನು ಬಳಸಿಕೊಂಡ ದುಷ್ಕರ್ಮಿಗಳು ‘ಎಸ್ಕಾರ್ಟ್‌ ಸರ್ವಿಸ್‌’(ಕಾಲ್‌ಗರ್ಲ್‌) ಎಂಬ ವಾಟ್ಸಾಪ್‌ ಗ್ರೂಪ್‌ಗೆ ಹಾಕಿ ಮಾನಸಿಕ ಕಿರುಕುಳ ನೀಡುತ್ತಿರುವ ಆರೋಪದಡಿ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾರತಹಳ್ಳಿಯ 31 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ದುಷ್ಕರ್ಮಿಯ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru: ಮಣಿಪುರ ಹಿಂಸಾಚಾರದ ಪ್ರತಿಭಟನೆ ಮುಗಿಸಿ ತೆರಳುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ!

ದೂರುದಾರ ಸಂತ್ರಸ್ತೆ ಸಾಮಾಜಿಕ ಜಾಲತಾಣ ಇನ್ಸ್‌ಸ್ಟಾಗ್ರಾಮ್‌ ಖಾತೆ ಹೊಂದಿದ್ದು, ಅದರಲ್ಲಿ ತಮ್ಮ ಭಾವಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ದುಷ್ಕರ್ಮಿಗಳು ಆ ಭಾವಚಿತ್ರಗಳನ್ನು ತೆಗೆದುಕೊಂಡು ಎಸ್ಕಾರ್ಚ್‌ ಸರ್ವಿಸ್‌(ಕಾಲ್‌ಗರ್ಲ್‌) ಎಂಬ ವಾಟ್ಸಾಪ್‌ ಗ್ರೂಪ್‌ನಲ್ಲಿ ಹಾಕಿದ್ದಾರೆ. ಈ ಗ್ರೂಪ್‌ನಲ್ಲಿ 27 ಯುವತಿಯರ ಭಾವಚಿತ್ರವಿದ್ದು, ಈ ಪೈಕಿ ಸಂತ್ರಸ್ತೆಯ ಭಾವಚಿತ್ರವೂ ಇರುವುದನ್ನು ಪರಿಚಿತರೊಬ್ಬರು ಗಮನಿಸಿ ಸಂತ್ರಸ್ತೆ ಗಮನಕ್ಕೆ ತಂದಿದ್ದಾರೆ.

ಈ ವೇಳೆ ಸಂತ್ರಸ್ತೆ, ವಾಟ್ಸಾಪ್‌ ಸಂದೇಶದ ಮುಖಾಂತರ ಅಪರಿಚಿತ ವ್ಯಕ್ತಿಯನ್ನು ಸಂಪರ್ಕಿಸಿದಾಗ, ಫೋನ್‌ ಪೇ ಮುಖಾಂತರ .200 ಹಣ ಹಾಕಿದರೆ, ಭಾವಚಿತ್ರವನ್ನು ಡಿಲೀಟ್‌ ಮಾಡುವುದಾಗಿ ಹೇಳಿದ್ದಾನೆ. ಅದರಂತೆ ಸಂತ್ರಸ್ತೆ ತನ್ನ ಸ್ನೇಹಿತನಿಂದ ಫೋನ್‌ ಪೇ ಮುಖಾಂತರ .200 ಹಾಕಿಸಿದ್ದಾರೆ. ಆದರೂ ದುಷ್ಕರ್ಮಿ ಸಂತ್ರಸ್ತೆಯ ಭಾವಚಿತ್ರ ಡಿಲೀಟ್‌ ಮಾಡದೆ ಮಾನಸಿಕ ಕಿರುಕುಳ ನೀಡಿದ್ದಾನೆ. ಹೀಗಾಗಿ ಸಂತ್ರಸ್ತೆ ಆ ದುಷ್ಕರ್ಮಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.