ಪರಿಚಿತ ಮಹಿಳೆಯೊಬ್ಬಳು ತನ್ನ ವಿರುದ್ಧ ದೂರು ನೀಡಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಗುರುವಾರ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದ ಘಟನೆ ನಡೆದಿದೆ.
ಬೆಂಗಳೂರು (ಫೆ.10) : ಪರಿಚಿತ ಮಹಿಳೆಯೊಬ್ಬಳು ತನ್ನ ವಿರುದ್ಧ ದೂರು ನೀಡಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಗುರುವಾರ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದ ಘಟನೆ ನಡೆದಿದೆ.
ಚಂದ್ರಾಲೇಔಟ್ ನಿವಾಸಿ ಅನಿಲ್(30) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ವಿಷ ಕುಡಿದಿರುವ ವಿಚಾರ ಹೇಳುತ್ತಿದ್ದ ಪೊಲೀಸರು ಕೆಂಪೇಗೌಡ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು, ಅನಿಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಅನಿಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರಿಂದ ತಲೆಮರೆಸಿಕೊಂಡಿರುವ ನಟಿ ಅಭಿನಯ: ಲುಕ್‌ಔಟ್ ನೋಟಿಸ್ ಜಾರಿ
ಅನಿಲ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಕೆಲ ವರ್ಷಗಳಿಂದ 40 ವರ್ಷದ ಮಹಿಳೆ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದ ಆಕೆಯ ಪತಿ ಇತ್ತೀಚೆಗೆ ಮಹಿಳೆಯನ್ನು ಠಾಣೆಗೆ ಕರೆತಂದು ಅನಿಲ್ ವಿರುದ್ಧ ದೂರು ಕೊಡಿಸಿದ್ದ. ಈ ವೇಳೆ ಅನಿಲ್‌ನನ್ನು ಠಾಣೆಗೆ ಕರೆಸಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಈ ನಡುವೆ ಅನಿಲ್ ಮಹಿಳೆಗೆ ಅಕ್ರಮ ಸಂಬಂಧ ಮುಂದುವರೆಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಮಹಿಳೆ ಮತ್ತೆ ಅನಿಲ್ ವಿರುದ್ಧ ದೂರು ನೀಡಲು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಳು.
ಈ ವಿಚಾರ ತಿಳಿದ ಅನಿಲ್, ವಿಷ ಸೇವಿಸಿ ನೇರ ಪೊಲೀಸ್ ಠಾಣೆಗೆ ಬಂದು ಮಹಿಳೆ ನನಗೆ ಕಿರಕುಳ ನೀಡುತ್ತಿದ್ದಾಳೆ. ಪದೇ ಪದೇ ನನ್ನ ವಿರುದ್ಧ ಠಾಣೆಗೆ ದೂರು ನೀಡುತ್ತಿದ್ದಾಳೆ. ಹೀಗಾಗಿ ನಾನು ವಿಷ ಕುಡಿದು ಬಂದಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಪೊಲೀಸರು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಅನಿಲ್ ಚೇತರಿಸಿಕೊಂಡಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಡ ಹೆಂಡತಿ ನಡುವೆ ಅನೈತಿಕ ಸಂಬಂಧಕ್ಕೆ ಗಲಾಟೆ: ಮನೆ ಬಳಿ ಹೋಗಿ ಎರಡನೇ ಹೆಂಡತಿ ಸೀಮಂತ ವೇಳೆ ಹೊಡೆದಾಟ
