ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಅಭಿನಯ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಅಭಿನಯ ಹಾಗೂ ಅವರ ಕುಟುಂಬಕ್ಕೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.
ಬೆಂಗಳೂರು (ಫೆ.09): ವರದಕ್ಷಿಣೆ ಕಿರುಕುಳ ಹಿನ್ನೆಲೆ ಕೋರ್ಟ್ ಮೆಟ್ಟಿಲೇರಿದ್ದ ಅಭಿನಯ ಅತ್ತಿಗೆ ವರಲಕ್ಷ್ಮಿ ಅವರ ಪ್ರಕರಣವನ್ನು ವಿಚಾರಣೆ ಮಾಡಿದ ನ್ಯಾಯಾಲಯ ನಟಿ ಅಭಿನಯ ಕುಟುಂಬಕ್ಕೆ ಜೈಲು ಶಿಕ್ಷೆಯನ್ನು ನೀಡಿ ಆದೇಶ ಹೊರಡಿಸಿತ್ತು. ಆದರೆ, ಈವರೆಗೂ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡು ಓಡಾಡುತ್ತಿರುವ ನಟಿ ಅಭಿನಯಗೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.
ನಟಿ ಅಭಿನಯ ತಮ್ಮ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಅವರ ಅತ್ತಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಮನೆಯಲ್ಲಿ ವೇಶ್ಯಾವಾಟಿಕೆಯನ್ನೂ ನಡೆಸುತ್ತಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಆದರೆ, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆದಿತ್ತು. ಸೆಕ್ಷನ್ಸ್ ಕೋರ್ಟ್ ವಿಚಾರಣೆಯ ವೇಳೆ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಇದರ ನಂತರ ತಲೆಮರೆಸಿಕೊಂಡು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ನಟಿ ಅಭಿನಯ, ಸೋದರ ಹಾಗೂ ತಾಯಿ ಹೈಕೋರ್ಟ್ ಗೆ ಹೋಗಿದ್ದರು. ಆದರೆ, ಅಲ್ಲಿಯೂ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರು ಹೈಕೋರ್ಟ್ ಸಹ ಸೆಷನ್ಸ್ ಕೋರ್ಟ್ ಆದೇಶವನ್ನ ಎತ್ತಿ ಹಿಡಿದಿದ್ದರು.
ನಟಿ ಅಭಿನಯ ಮನೆಯಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದರು: ಲಕ್ಷ್ಮಿದೇವಿ ಆರೋಪ
ಬಂಧನಕ್ಕೆ ಕೈಗೆ ಸಿಗದ ಅಭಿನಯ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಟಿ ಅಭಿನಯ ಮತ್ತು ಅವರ ಕುಟುಂಬ ಸದಸ್ಯರಾದ ಆರೋಪಿಗಳನ್ನ ಬಂಧಿಸಿ ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಿಬೇಕಾಗಿದೆ. ಆದರೆ, ಈವರೆಗೆ ನಟಿ ಅಭಿನಯ ಹಾಗೂ ಕುಟುಂಬಸ್ಥರು ಪೊಲೀಸರ ಪತ್ತೆಗೆ ಸಿಗದೇ ತಲೆಮರಡಸಿಕೊಂಡಿದ್ದಾರೆ. ಹೀಗಾಗಿ,ನಟಿ ಅಭಿನಯ, ತಾಯಿ ಜಯಮ್ಮ ಹಾಗೂ ಸೋದರ ಚೆಲುವರಾಜು ಅವರ ಹುಡಕಾಟಕ್ಕೆ ಚಂದ್ರಾಲೇಔಟ್ ಪೊಲೀಸರು ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದಾರೆ. ಸಾರ್ವಜನಿಕರಿಗೆ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ನಟಿ ಅಭಿನಯಾ ಜೈಲು : ಅತ್ತಿಗೆಗೆ ವರದಕ್ಷಿಣಿ ಕಿರುಕುಳ ಕೊಟ್ಟ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿ ಅಭಿನಯಾ ಜೈಲು ಪಾಲಾಗಿದ್ದಾರೆ. ತನ್ನ ಅಣ್ಣ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀ ದೇವಿಗೆ ಕಿರುಕುಳ ಕೊಟ್ಟ ಆರೋಪದಡಿ ಶಿಕ್ಷೆ ಪ್ರಕಟವಾಗಿದೆ. ನಟಿ ಅಭಿನಯಾ ಅವರಿಗೆ ಹೈಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. 1998ರಲ್ಲಿ ಅಭಿನಯಾ ಅವರ ಅಣ್ಣ ಶ್ರೀನಿವಾಸ್ ಮತ್ತು ಲಕ್ಷ್ಮೀ ದೇವಿ ಅವರ ಮದುವೆಯಾಗಿತ್ತು. ಮದುವೆ ವೇಳೆ ವರದಕ್ಷಿಣೆ ವರದಕ್ಷಿಣೆ ಪಡೆದು ಪದೇ ಪದೇ ಹಣ ತರುವಂತೆ ಹಿಂಸೆ ಮಾಡುತ್ತಿದ್ದರು ಎಂದು 2002ರಲ್ಲಿ ಅತ್ತಿಗೆ ಲಕ್ಷ್ಮೀದೇವಿ ಅಭಿನಯಾ ಕುಟುಂಬದ ವಿರುದ್ಧ ದೂರು ನೀಡಿದ್ದರು. 2012ರಲ್ಲಿ ಮ್ಯಾಜಸ್ಟ್ರೇಟ್ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ನೀಡಿತ್ತು. ಬಳಿಕ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು ಶಿಕ್ಷೆ ವಿಧಿಸಿತ್ತು.
ಅತ್ತಿಗೆಗೆ ಕಿರುಕುಳ ನೀಡಿದ ಆರೋಪ; ನಟಿ ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ
