ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಬಂದೂಕುಗಳನ್ನು ಕಳಿಸಲಾಗಿದೆಯೇ ಎಂದು ತನಿಖೆ ಆರಂಭಿಸಲಾಗಿದೆ. ಅವು ರಾಜಸ್ಥಾನ ಮೂಲಕ ಬಂದ ಶಂಕೆ ಇದ್ದು ಬಂದೂಕುಗಳ ಚಿತ್ರವನ್ನು ರಾಜಸ್ಥಾನ ಪೊಲೀಸರಿಗೂ ಕಳುಹಿಸಲಾಗಿದೆ. 

ಮುಂಬೈ(ಅ.26):  ಮಹಾರಾಷ್ಟ್ರದ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಹತ್ಯೆಗೆ ಬಳಸಿದ್ದು 3 ಅಲ್ಲ, 4 ಗನ್‌ಗಳು ಹಾಗೂ ಅವುಗಳನ್ನು ಪಾಕಿಸ್ತಾನದಿಂದ ಏರ್‌ಡ್ರಾಪ್‌ ಮಾಡಿದ ಶಂಕೆ ಇದೆ ಎಂದು ಎಂದು ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಬಂದೂಕುಗಳನ್ನು ಕಳಿಸಲಾಗಿದೆಯೇ ಎಂದು ತನಿಖೆ ಆರಂಭಿಸಲಾಗಿದೆ. ಅವು ರಾಜಸ್ಥಾನ ಮೂಲಕ ಬಂದ ಶಂಕೆ ಇದ್ದು ಬಂದೂಕುಗಳ ಚಿತ್ರವನ್ನು ರಾಜಸ್ಥಾನ ಪೊಲೀಸರಿಗೂ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದಾವೂದ್‌ ಜೊತೆ ಸಿದ್ದಿಕಿಗೆ ನಂಟಿತ್ತು: ಬಿಷ್ಣೋಯಿ ಬಂಟನ ಹೇಳಿಕೆ

ಸಿದ್ದಿಗಿ ಅವರನ್ನು ಅ.12ರಂದು ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಳಿಕ ಪಾತಕಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಶೂಟರ್‌ಗಳನ್ನು ಬಂಧಿಸಲಾಗಿತ್ತು.