ಶಿವಮೊಗ್ಗದ ಶಿರಾಳಕೊಪ್ಪದ ಪೊಲೀ​ಸ​ರಿಂದ ಭರ್ಜರಿ ಬೇಟೆ. 16 ಬೈಕ್‌, ಕಾರು ವಶ ಮೂವರು ಖದೀಮರ ಬಂಧನ, ಇಬ್ಬರು ಪರಾರಿ. .12.22 ಲಕ್ಷ ಮೌಲ್ಯದ ವಾಹ​ನ​ಗಳು ವಶಕ್ಕೆ- 

ಶಿರಾಳಕೊಪ್ಪ (ಜು.28) : ಶಿಕಾರಿಪುರ ಉಪವಿಭಾಗ ಶಿರಾಳಕೊಪ ಪೊಲೀಸ್‌ ಠಾಣೆ ಸೇರಿದಂತೆ ಇತರ ಜಿಲ್ಲೆಯಲ್ಲಿಯೂ ಬೈಕ್‌ಗಳನ್ನು ಕದಿಯುತ್ತಿದ್ದ ಕಳ್ಳರನ್ನು ಸ್ಥಳೀಯ ಠಾಣೆ ಪೋಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಆರೋಪಿಗಳಿಂದ ಒಟ್ಟು 16 ಬೈಕ್‌ಗಳನ್ನು ವಶಕ್ಕೆ ಪಡೆ​ಯ​ಲಾ​ಗಿದೆ. ಶಿಕಾರಿಪುರ ತಾಲೂಕಿನ ಸಂಡ ಗ್ರಾಮದ ಸೈಯ್ಯದ್‌ ಇಸ್ರಾರ್‌, ಪುನೇದಹಳ್ಳಿಯ ರಾಕೇಶ್‌ ಹಾಗೂ ಶಿಕಾರಿಪುರ ಟೌನ್‌ ವಾಸಿ ಗೋಪಾಲ ಬಂಧಿತ ಆರೋ​ಪಿ​ಗ​ಳು. ತಾಲೂಕಿನ ಕೆಂಗಟ್ಟೆಗ್ರಾಮದಲ್ಲಿ ಇತ್ತೀಚೆಗೆ ಸಂಸದ ರಾಘವೇಂದ್ರ ಅವರ ತೋಟದಲ್ಲಿ ಆರೋಪಿಗಳು ಗಂಧದ ಮರವನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳಲ್ಲಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪುನೇದಹಳ್ಳಿಯ ಹಬೀಬುಲ್ಲಾ ಮತ್ತು ಚಿಕ್ಕಜಂಬೂರಿನ ಮುಸ್ಸು ಯಾನೇ ತನ್ವೀರ್‌ ತಪ್ಪಿಸಿಕೊಂಡಿದ್ದಾ​ರೆ.

ಘಟನೆಯ ವಿವರ:

ಕಳೆದ ತಿಂಗಳು 28ರಂದು ಹೊನ್ನಾಳಿ(Honnaali) ಪಟ್ಟಣ ಮೂಲದ ಷಡಾಕ್ಷರಿ(Shadakshari) ಎಂಬವರು ಹಾನಗಲ್‌ನಿಂದ ಹೊನ್ನಾಳಿಗೆ ಹೊರಟಿದ್ದರು. ಆಗ ಶಿರಾಳಕೊಪ್ಪ(Shiralakoppa) ಪಟ್ಟಣದ ಬಸ್‌ ನಿಲ್ದಾಣ(Bus Station)ದಲ್ಲಿ ಬೈಕ್‌ ನಿಲ್ಲಿಸಿ ಊಟಕ್ಕೆ ತೆರ​ಳಿದ್ದರು. ಊಟ ಮುಗಿಸಿ ವಾಪಸ್‌ ಬಂದು ನೋಡಿದಾಗ ಸ್ಥಳದಲ್ಲಿ ಬೈಕ್‌ ಕಳ​ವಾ​ಗಿದ್ದು ಗಮ​ನಕ್ಕೆ ಬಂದಿದೆ. ಬಳಿಕ ಶಿರಾಳಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದರು.

ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು!

ಅನಂತರ ಜಿಲ್ಲಾ ಪೊಲೀಸ್‌ ಅಧೀಕ್ಷಕ ಲಕ್ಷ್ಮೇಪ್ರಸಾದ್‌()SP Lakshmi Prasad ಮಾರ್ಗ​ದ​ರ್ಶ​ನ​ದಲ್ಲಿ ಶಿರಾಳಕೊಪ್ಪ ಎಸ್‌ಐ ರಮೇಶ್‌ ಮತ್ತು ಸಿಬ್ಬಂದಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿ​ದ್ದರು. ಅನುಮಾನಾಸ್ಪದ ರೀತಿಯಲ್ಲಿ ಬೈಕ್‌ನಲ್ಲಿ ಓಡಾಡುತ್ತಿದ್ದ ಆರೋಪಿಗಳನ್ನು ವಿಚಾ​ರಿ​ಸಿ​ದಾಗ ಕಳವು ಕೃತ್ಯ​ಗಳು ಬಯ​ಲಾ​ಗಿವೆ.

ಆರೋಪಿಗಳು ಶಿರಾಳಕೊಪ ಠಾಣೆ ವ್ಯಾಪ್ತಿಯಲ್ಲಿ 2, ಶಿಕಾರಿಪುರ ಟೌನ್‌ ವ್ಯಾಪ್ತಿಯಲ್ಲಿ 1, ರಾಣೇಬೆನ್ನೂರು 1, ಹೊನ್ನಾಳಿ 2, ತಿಪಟೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 9, ಕಡೂರು 1 ಬೈಕ್‌ ಕಳವು ಮಾಡಿ​ದ್ದಾರೆ. ಅಲ್ಲದೇ, ಸಂಸದ ಬಿ.ವೈ.​ರಾ​ಘ​ವೇಂದ್ರ ಅವರ ತೋಟದಲ್ಲಿಯೂ ಶ್ರೀಗಂಧ ಮರವನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀ​ಸರು ಮುಂದಿ​ನ ಕ್ರಮ ಕೈಗೊಂಡಿದ್ದಾರೆ.

ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ಕದ್ದು ಪರಾರಿಯಾದ ಖದೀಮರು!

ಕೃತ್ಯಕ್ಕೆ ಬಳಿಸಿದ 1 ಕಾರು, 16 ಬೈಕ್‌ಗಳನ್ನು ವಶಕ್ಕೆ ಪಡೆ​ದಿ​ದ್ದಾರೆ. ಒಟ್ಟು 18 ಪ್ರಕರಣಗಳನ್ನು ಪತ್ತೆ ಹಚ್ಚಿದÜು್ದ, ವಶಕ್ಕೆ ಪಡೆದ ವಾಹ​ನ​ಗಳ ಒಟ್ಟು ಮೌಲ್ಯ .12,22,632 ಎಂದು ತಿಳಿ​ಸ​ಲಾ​ಗಿದೆ. ಕಾರ್ಯಾಚರಣೆಯಲ್ಲಿ ಎಸ್‌ಪಿ ಲಕ್ಷ್ಮೇಪ್ರಸಾದ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ವಿಕ್ರಂ ಅಮಟೆ, ಶಿಕಾರಿಪುರ ಪೊಲೀಸ್‌ ಉಪ ಅಧೀಕ್ಷಕ ಶಿವಾನಂದ ಮದರ ಖಂಡಿ, ಪ್ರಭಾರ ಸಿಪಿಐ ಲಕ್ಷ್ಮಣ ನಗರ, ಎಸ್‌ಐ ರಮೇಶ್‌, ಎಎಸ್‌ಐ ವೀರೇಶ್‌, ಸಂತೋಷಕುಮಾರ್‌, ಅಶೋಕ ನಾಯಕ್‌ ಸಿ., ಮಂಜುನಾಥ ಆರ್‌.ಸಿ., ಕಾರ್ತೀಕ್‌, ಸಿದ್ದನಗೌಡ ಬಣಕಾರ್‌, ಮಹಾದೇವ್‌ ಗಾಮದ್‌, ಶಿವಾನಂದ ರೆಡ್ಡೇರ್‌, ಶಿವಮೂರ್ತಿ, ಗೋಣೇಶ್‌, ಬಸವಕುಮಾರ್‌, ಜಗದೀಶ್‌, ಚಂದ್ರಾನಾಯಕ್‌, ಚಂದ್ರಪ್ಪ ಉಪ್ಪಾರ್‌,ನಿರಂಜನ್‌, ಇಂದ್ರೇಶ್‌, ಗುರುರಾಜ್‌, ವಿಜಯ್‌ ಕುಮಾರ್‌ ಪಾಲ್ಗೊಂಡಿದ್ದರು.