Asianet Suvarna News Asianet Suvarna News

ಕೋಲಾರ: ಮಾಲೂರಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಬರ್ಬರ ಕೊಲೆ..!

ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆಯ ಹಿಂದೆ ಸಾಕಷ್ಟು ಅನುಮಾನಗಳಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸರಿಯಾದ ಆರೋಪಿಗಳನ್ನು ಬಂಧಿಸಿದ ಬಳಿಕವಷ್ಟೇ ಕೊಲೆಯ ಹಿಂದಿನ ವಿಚಾರ ಹೊರ ಬೀಳಲಿದೆ. 

Grama Panchayat Member Killed at Maluru in Kolar grg
Author
First Published Oct 22, 2023, 12:30 AM IST

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ(ಅ.22): ಆತ ಗ್ರಾಮ ಪಂಚಾಯ್ತಿ ಸದಸ್ಯ. ವಯಸ್ಸು ಚಿಕ್ಕದಿದ್ರು ಊರಿನಲ್ಲಿ ಒಳ್ಳೆಯ ಹೆಸರು ಗಳಿಸಿದ್ದ. ಗ್ರಾಮದ ಸಮಸ್ಯೆ ಏನೇ ಇದ್ರು ಪರಿಹರಿಸುತ್ತಾ ರಾಜಕೀಯದಲ್ಲಿ ವೇಗವಾಗಿ ಬೆಳೆಯುತ್ತಿದ್ದ ಆತನ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಡು ರಸ್ತೆಯಲ್ಲಿ ಬರ್ಬರವಾಗಿ ಹಾಡಹಗಲೇ ಕೊಲೆಯಾಗಿ ಹೋಗಿದ್ದಾನೆ. ಈ ಕುರಿತ ಸ್ಟೋರಿ ಇಲ್ಲಿದೆ. 

ರಸ್ತೆಯಲ್ಲೇ ಬರ್ಬರವಾಗಿ ಕೊಲೆಯಾಗಿ ಬಿದ್ದಿರುವ ಗ್ರಾಮ ಪಂಚಾಯ್ತಿ ಸದಸ್ಯ. ಹೆಣದ ಮುಂದೆ ಗೋಳಾಡುತ್ತಿರುವ ಕುಟುಂಬಸ್ಥರ. ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿರುವ ಎಸ್ಪಿ ಆಂಡ್ ಟೀಂ. ಹಾಡಹಗಲೇ ಈ ರೀತಿ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿರುವುದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ನ ಬಳಿ. 

ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ‌ ಮಾಡಿದ ಗಂಡ

ನಡು ರಸ್ತೆಯಲ್ಲಿ ಹೆಣವಾಗಿ ಬಿದ್ದಿರುವ ಈತನ ಹೆಸರು ಅನಿಲ್ ಕುಮಾರ್ ಅಂತ, ಜಸ್ಟ್ 38 ವರ್ಷ. ಮಾಲೂರು ತಾಲೂಕಿನ ಮೀಣಸಂದ್ರ ಗ್ರಾಮದವನಾಗಿರುವ ಅನಿಲ್ ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ. ವಯಸ್ಸಿನ್ನು ಚಿಕ್ಕದಾದ್ರು ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ. ಮಾಲೂರು ಶಾಸಕ ಕೆ.ವೈ ನಂಜೇಗೌಡ ಆಪ್ತನಾಗಿದ್ದ ಅನಿಲ್ ಗ್ರಾಮದ ಯಾವುದೇ ಸಮಸ್ಯೆ ಇದ್ರು ಪರಿಹಾರ ಮಾಡುವ ಮೂಲಕ ಗ್ರಾಮದಲ್ಲಿದ ಕೆಲ ರಾಜಕೀಯ ವಿರೋಧಿಗಳ ಕೋಪಕ್ಕೆ ಕಾರಣವಾಗಿದ್ದ. ಆದ್ರೆ ಅದೇನಾಯ್ತೋ ಗೊತ್ತಿಲ್ಲ ಇಂದು ಎಂದಿನಂತೆ ತನ್ನ ದ್ವಿಚಕ್ರ ವಾಹನದಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಾಲೂರು ಪಟ್ಟಣದ ಕಡೆಗೆ ಅನಿಲ್ ಬರುವಾಗ ಹಿಂಬಾಲಿಸಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳು ಮಚ್ಚಿನಿಂದ ಅನಿಲ್ ನ ತಲೆಗೆ ಕೊಚ್ಚಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಕೋಲಾರ-ಹೊಸೂರು ಹೈವೇ ಆಗಿರೋದ್ರಿಂದ ಎಲ್ಲಿ ಜನ ಸೆರ್ತಾರೋ ಅಂತ ಗಾಬರಿಗೊಂಡ ದುಷ್ಕರ್ಮಿಗಳು ಕೊಲೆಗೆ ಬಳಸಿದ್ದ ಮಚ್ಚು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ವಿಷಯ ತಿಳಿದ ಕೂಡಲೇ ಕೊಲೆ ನಡೆದ ಸ್ಥಳಕ್ಕೆ ಬಂದ ಕೋಲಾರ ಎಸ್ಪಿ ನಾರಾಯಣ್ ಹಾಗೂ ಮಾಲೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅನುಮಾನಾಸ್ಪದ ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ಅನೈತಿಕ ಸಂಬಂಧ ಮುಂದುವರಿಕೆಗೆ ಕಾಟ ಕೊಟ್ಟಿದ್ದಕ್ಕೆ ಕಾರ್ಮಿಕನ ಕೊಲೆ

ಇನ್ನು ಅನಿಲ್ ನ ಕೊಲೆಯ ಹಿಂದೆ ನಾನಾ ಕಾರಣಗಳು ಕೇಳಿ ಬರ್ತಿದೆ. ಇಡೀ ಸಂಸಾರದ ಹೊಣೆಯನ್ನು ಹೊತ್ತಿದ್ದ ಅನಿಲ್ ಕುಟುಂಬಕ್ಕೂ ಗ್ರಾಮದ ಒಂದು ಕುಟುಂಬಕ್ಕೂ ಆಗಾಗ್ಗೆ ಜಗಳ ಆಗ್ತಿತ್ತಂತೆ. ಮೊನ್ನೆ ನಡೆದ ಗಣೇಶ ಹಬ್ಬದ ದಿನ ಗ್ರಾಮದಲ್ಲಿ ಅದ್ದೂರಿಯಾಗಿ ಆರ್ಕೆಸ್ಟ್ರ ಆಯೋಜನೆ ಮಾಡಿದ್ದ ವೇಳೆ ಅನಿಲ್ ಹಾಗೂ ಗ್ರಾಮದ ಕೆಲವರ ನಡುವೆ ಗಲಾಟೆ ಆಗಿತ್ತಂತೆ.ಮತ್ತೊಂದು ವಿಚಾರ ಏನಂದ್ರೆ ಅನಿಲ್ ಕೊಲೆ ಆಗುವ ಕೆಲ ಹೊತ್ತಿನ ಹಿಂದೆಯಷ್ಟೇ ಸಾಕಷ್ಟು ವರ್ಷಗಳಿಂದ ಮಾತನಾಡದೆ ಇದ್ದ ಓರ್ವ ವ್ಯಕ್ತಿ ಅನಿಲ್ ಜೊತೆ ಆತ್ಮೀಯವಾಗಿ ಮಾತನಾಡಿದಾರೆ. ಈ ವೇಳೆ ಬೈಕ್ ನಲ್ಲಿ ಬಂದಿದ್ದ ಕೆಲ ವ್ಯಕ್ತಿಗಳು ಅನಿಲ್ ನ ಗುರಾಯಿಸಿಕೊಂಡು ಅನುಮಾನಾಸ್ಪದವಾಗಿ ಗ್ರಾಮದಲ್ಲಿ ಸುತ್ತಾಡಿದ್ದಾರೆ.ಇದಾದ ಬಳಿಕ ತನ್ನ ಬೈಕ್ ನಲ್ಲಿ ಮಾಲೂರು ಕಡೆಗೆ ಹೊರಟ ಅನಿಲ್ ರಸ್ತೆ ಮಧ್ಯದಲ್ಲಿ ಈ ರೀತಿ ಬರ್ಬರವಾಗಿ ಕೊಲೆಯಾಗಿದ್ದಾನೆ. ಇತ್ತ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದ ಅನಿಲ್ ತನ್ನದೇ ಆದ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ, ರಾಜಕೀಯದ ಜೊತೆ ಆರ್ಥಿಕವಾಗಿಯೂ ಬೆಳೆಯುತ್ತಿದ್ದ. ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿ 12 ವರ್ಷಗಳ ಹಿಂದೆ ಮದುವೆಯಾಗಿದ್ದ ಅನಿಲ್ ಗೆ ಒಬ್ಬಳು ಹೆಣ್ಣು ಮಗಳು ಸಹ ಇದ್ದಾಳೆ. ತನ್ನ ಕುಟುಂಬಕ್ಕೆ ಆಧಾರವಾಗಿದ್ದವನ್ನು ಈ ರೀತಿ ರಸ್ತೆಯ ಮಧ್ಯದಲ್ಲಿ ಕೊಲೆಯಾಗಿ ಬಿದ್ದಿದನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಒಟ್ಟಾರೆ ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆಯ ಹಿಂದೆ ಸಾಕಷ್ಟು ಅನುಮಾನಗಳಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸರಿಯಾದ ಆರೋಪಿಗಳನ್ನು ಬಂಧಿಸಿದ ಬಳಿಕವಷ್ಟೇ ಕೊಲೆಯ ಹಿಂದಿನ ವಿಚಾರ ಹೊರ ಬೀಳಲಿದೆ. 

Follow Us:
Download App:
  • android
  • ios