ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಪತ್ನಿಯ ಶೀಲದ ಮೇಲೆ ಶಂಕೆ!: ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪತಿ
ತನ್ನ ಹೆಂಡತಿಯ ಶೀಲ ಸರಿಯಾಗಿಲ್ಲವೆಂದು ಅನುಮಾನ ವ್ಯಕ್ತಪಡಿಸಿದ ಪತಿ, ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಪತ್ನಿಯ ತಲೆಯ ಮೇಲೆ ಕಲ್ಲು ಹಾಕಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ (ಫೆ.16): ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು. ಕಳೆದ 13 ವರ್ಷಗಳ ಹಿಂದೆ ಮದುವೆಯಾಗಿದ್ದ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಈಗ ನಲವತ್ತು ವರ್ಷದ ಆಸುಪಾಸಿನಲ್ಲಿ ತನ್ನ ಹೆಂಡತಿಯ ಶೀಲ ಸರಿಯಾಗಿಲ್ಲವೆಂದು ಅನುಮಾನ ವ್ಯಕ್ತಪಡಿಸಿದ ಪತಿ, ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಪತ್ನಿಯ ತಲೆಯ ಮೇಲೆ ಕಲ್ಲು ಹಾಕಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಯೌವನಾವಸ್ಥೆಯಲ್ಲಿ ಮದುವೆಯಾಗಿ ಸಂಸಾರ ಮಾಡುವ ಹಂತವೇ ಮುಗಿದು ಮಕ್ಕಳಿಗೆ ಶಿಕ್ಷಣ ಮತ್ತು ಮದುವೆ ಮಾಡುವ ವಯಸ್ಸಿನಲ್ಲಿ ಪತ್ನಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತ್ನಿಯ ಬರ್ಬರ ಹತ್ಯೆ ಮಾಡಲಾಗಿದೆ. ಈ ಘಟನೆ ನಡೆದಿರುವುದು ಕಲಬುರಗಿ ನಗರದ ಅಂಬಿಕಾ ನಗರದಲ್ಲಿ. ಇನ್ನು ಫರೀದಾ ಬೇಗಂ (39) ಕೋಲೆಯಾದ ದುರ್ದೈವಿ ಪತ್ನಿಯಾಗಿದ್ದಾಲೆ. ಈಕೆಯನ್ನು ಪತಿ ಎಜಾಜ್ ಅಹ್ಮದ್ ಕೊಲೆ ಮಾಡಿದ್ದಾನೆ.
ರಾಯಚೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ತನ್ನ ಮಕ್ಕಳನ್ನೇ ಕತ್ತು ಹಿಸುಕಿ ಕೊಂದ ಪಾಪಿ ತಂದೆ!
ಸಾಮಾನ್ಯ ದಿನದಂತೆ ರಾತ್ರಿ ವೇಳೆ ಮನೆಯಲ್ಲಿ ಪತ್ನಿ ಮಲಗಿದ್ದಾಗ ಪಕ್ಕದಲ್ಲಿದ್ದ ಗಂಡ ಮನೆಯ ಹೊರಗೆ ಹೋಗಿ ದೊಡ್ಡ ಕಲ್ಲು ಎತ್ತಿಕೊಂಡು ಬಂದಿದ್ದಾನೆ. ನಂತರ ಅದೇ ಕಲ್ಲನ್ನು ಮಲಗಿದ್ದ ಪತ್ನಿಯ ತಲೆಯ ಮೇಲೆ ಎತ್ತಿಹಾಕಿದ್ದಾನೆ. ತಲೆಯ ಅರ್ಧ ಭಾಗವೇ ಅಪ್ಪಚ್ಚಿಯಾಗಿದ್ದು, ಮೆದುಳು ಸೇರಿದಂತೆ ಇತರೆ ಭಾಗಗಳು ಚಪ್ಪಟೆಯಾಗಿ ಗೋಡೆಗೆ ಸಿಡಿದುಹೋಗಿದೆ. ರಕ್ತದ ಮಡುವಿನಲ್ಲಿಯೇ ಒದ್ದಾಡಿದ ಪತ್ನಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ರಾತ್ರಿ ಪೂರ್ತಿ ಶವ ಮನೆಯಲ್ಲಿದ್ದು, ಬೆಳಗ್ಗೆ ಘಟನೆ ನೋಡಿದ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಶವವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಶಾಲೆಗೆ ಹೋಗದಂತೆ ಕಿರುಕುಳ: ಕಳೆದ 13 ವರ್ಷದ ಹಿಂದೆ ಮದುವೆಯಾಗಿದ್ದ ಎಜಾಜ್ ಹಾಗೂ ಫರೀದಾ ಬೇಗಂ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಪತಿಗೆ ಪತ್ನಿಯ ಮೇಲೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಬಂದಿದೆ. ಈ ಹಿನ್ನೆಲೆಯಲ್ಇ ನೀನು ಶಾಲೆಗೆ ಹೋಗಲೇಬೇಡ ಎಂದು ಹಲವು ಬಾರಿ ಪೀಡಿಸಿದ್ದಾನೆ. ಆದರೆ, ಪರೀಕ್ಷೆಯ ಸಂದರ್ಭ ಇರುವಾಗ ಮಕ್ಕಳಿಗೆ ಪಾಠ ಮಾಡುವುದನ್ನು ನಿಲ್ಲಿಸಿದರೆ ಸಮಸ್ಯೆ ಆಗುತ್ತದೆ ಎಂದು ಶಾಲೆಗೆ ಹೋಗುವುದನ್ನು ಮುಂದುವರೆಸಿದ್ದಾಳೆ. ಇದಕ್ಕೆ ತೀವ್ರ ಕೋಪಗೊಂಡ ಎಜಾಜ್ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಈ ಘಟನೆ ಕುರಿತು ನಗರದ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಬೆಂಗಳೂರಿನಲ್ಲಿ ಪತ್ನಿ ಅನೈತಿಕ ಸಂಬಂಧ ಅನುಮಾನ: ಡಂಬಲ್ಸ್‌ನಿಂದ ಹೊಡೆದು ಕೊಲೆ
ಭವಿಷ್ಯದ ಚಿಂತನೆಯಲ್ಲಿ ಅನಾಥವಾದ ಮಕ್ಕಳು: ಮನೆಯಲ್ಲಿ ಅಮ್ಮ - ಅಪ್ಪ ಇನ್ನರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಹಣಕಾಸಿನ ಸಮಸ್ಯೆ ಏನೂ ಇರಲಿಲ್ಲ. ಹೀಗಾಗಿ, ದಂಪತಿಗೆ ಇದ್ದ ಇಬ್ಬರು ಮಕ್ಕಳ ಶಿಕ್ಷಣವೂ ಉತ್ತಮವಾಗಿಯೇ ಸಾಗುತ್ತಿತ್ತು. ಆದರೆ, ಮನೆಯಲ್ಲಿ ಆಗಿಂದಾಗ್ಗೆ ಅಪ್ಪ- ಅಮ್ಮ ಜಗಳ ಮಾಡುವುದನ್ನು ನೋಡಿ ತಮಗೆ ಏನೂ ಅರಿವಿಲ್ಲದಂತೆ ಮಕ್ಕಳು ಸುಮ್ಮನಿದ್ದರು. ಮನೆಯ ಹಿರಿಯರು ಕೂಡ ಮುಂದಿನ ದಿನಗಳಲ್ಲಿ ಸರಿ ಹೋಗಬಹುದು ಎಂದು ಭಾವಿಸಿ ಸುಮ್ಮನಿದ್ದರು. ಆದರೆ, ಜಗಳ ಮತ್ತು ಶೀಲದ ಬಗ್ಗೆ ಮೂಡಿದ ಅನುಮಾನ ಅತಿರೇಕಕ್ಕೆ ತಿರುಗಿ ತಂದೆಯಿಂದಲೇ ತಾಯಿ ಕೊಲೆಯಾಗಿ ಹೋಗಿದ್ದಾರೆ. ಇನ್ನು ತಂದೆ ಕೊಲೆ ಮಾಡಿದ ಆರೋಪದಿಂದ ಜೈಲು ಪಾಲಾಗಲಿದ್ದಾರೆ. ಇನ್ನು ಅವರ ಸರ್ಕಾರಿ ನೌಕರಿಯೂ ಹೋಗಲಿದೆ. ನೆಮ್ಮದಿಯಾಗಿ ಜೀವನ ಮಾಡಿಕೊಂಡಿದ್ದ ಹಾಗೂ ಉತ್ತಮ ಭವಿಷ್ಯದ ಕನಸು ಕಂಡಿದ್ದ ಮಕ್ಕಳು ಈಗ ಅನಾಥವಾಗಿದ್ದಾರೆ.