ಕ್ರೀಡೆಯಲ್ಲಿ ಮಿಂಚಲು ವಿದ್ಯಾರ್ಥಿನಿಯರಿಗೆ ಸಹಾಯ: ಲೈಂಗಿಕ ಸುಖಕ್ಕಾಗಿ ಬೇಡಿಕೆ ಇಟ್ಟ ಕಾಮುಕ ಶಿಕ್ಷಕ

Crime News: ಕ್ರೀಡಾ ಸ್ಪರ್ಧೆಗಳಲ್ಲಿ ಮಿಂಚಲು ಸಹಾಯ ಮಾಡಿದ್ದಕ್ಕಾಗಿ ವಿದ್ಯಾರ್ಥಿಗಳಿಂದ ಲೈಂಗಿಕ ಸುಖಕ್ಕಾಗಿ ಬೇಡಿಕೆಯಿಟ್ಟ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಬಂಧಿಸಲಾಗಿದೆ

Govt school teacher demands sexual favour from girl students for making them shine in sports competitions in Chhattisgarh mnj

ಛತ್ತೀಸಗಡ (ಆ. 12): ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಮಿಂಚಲು ಸಹಾಯ ಮಾಡಿದ್ದಕ್ಕಾಗಿ ವಿದ್ಯಾರ್ಥಿಗಳಿಂದ ಲೈಂಗಿಕ ಸುಖಕ್ಕಾಗಿ ಬೇಡಿಕೆಯಿಟ್ಟ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.   ಛತ್ತೀಸ್‌ಗಢದ ಬಲೋದ್ ಜಿಲ್ಲಯಲ್ಲಿ ಈ ಆಘಾತಕಾರಿ ಘಟನೆ ವರದಿಯಾಗಿದ್ದು, ಇದೀಗ  ಸರ್ಕಾರಿ ಶಾಲಾ ಶಿಕ್ಷಕನನ್ನು ಬಂಧಿಸಲಾಗಿದೆ. ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಶಿಕ್ಷಕ ಅಂತರ್ ಶಾಲಾ ಆಟಗಳಲ್ಲಿ ಖೋ-ಖೋ ಮತ್ತು ಕಬಡ್ಡಿ ಪಂದ್ಯಾವಳಿಗಳಲ್ಲಿ ಹಲವಾರು ಪದಕಗಳನ್ನು ಗೆಲ್ಲುವಲ್ಲಿ ತನ್ನ ಶಾಲೆಗೆ ಮಾರ್ಗದರ್ಶನ ನೀಡಿದ್ದ ಎನ್ನಲಾಗಿದೆ. 

ಆರೋಪಿ ಸಹಾಯಕ ಶಿಕ್ಷಕನನ್ನು 47 ವರ್ಷದ ದೀಪಕ್ ಕುಮಾರ್ ಸೋನಿ ಎಂದು ಗುರುತಿಸಲಾಗಿದೆ. ಶಿಕ್ಷಕ ಬಲೋಡ್ ಜಿಲ್ಲೆಯ ಜುಂಗೇರಾ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ವರದಿಯ ಪ್ರಕಾರ ಆರೋಪಿಯು ಮಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಖೋ-ಖೋ ಮತ್ತು ಕಬಡ್ಡಿ ತರಬೇತಿಯನ್ನೂ ನೀಡಿದ್ದಾನೆ. 

ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯರಿಗೆ ದೀಪಕ್ ಕುಮಾರ್ ಸೋನಿ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ತಮ್ಮ ಶಿಕ್ಷಕರು ಅನುಚಿತವಾಗಿ ತಮ್ಮನ್ನು ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ಐವರು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ದೂರು ದಾಖಲಿಸಿದ್ದಾರೆ. 

ಹುಡುಗಿಯರು  ಶಿಕ್ಷಕನ ವರ್ತನೆಯನ್ನು ವಿರೋಧಿಸಿದಾಗ, ಶಿಕ್ಷಕ ಆಟಗಳಲ್ಲಿ ಪದಕಗಳನ್ನು ಗೆಲ್ಲಲು ಸಹಾಯ ಮಾಡುವುದರಿಂದ ಆತನ ಬೇಡಿಕೆಯನ್ನು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ.

ವರದಕ್ಷಿಣೆಗಾಗಿ ವಿಕೃತಿ, ಪತ್ನಿಯ ತಲೆಮೇಲೆ ಮೂತ್ರ ವಿಸರ್ಜಿಸಿ ಕಿರುಕುಳ!

ಸದ್ಯ ಶಿಕ್ಷಕನನ್ನು ಬಂಧಿಸಲಾಗಿದೆ ಮತ್ತು ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ನವೀನ್ ಬೋರ್ಕರ್ ತಿಳಿಸಿದ್ದಾರೆ. ಆರೋಪಿ ಶಿಕ್ಷಕನು ಮುಖಾಮುಖಿ ಸಂಭಾಷಣೆಯ ಸಮಯದಲ್ಲಿ ಮತ್ತು ಫೋನ್‌ನಲ್ಲಿಯೂ ಸಹ ಅಸಭ್ಯವಾಗಿ ಮಾತನಾಡುತ್ತಿದ್ದನು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಮುಂಬರುವ ಖೋ-ಖೋ ಸ್ಪರ್ಧೆಯ ಬಗ್ಗೆ ಕೇಳಲು 8 ನೇ ತರಗತಿಯ ವಿದ್ಯಾರ್ಥಿನಿ ಫೋನ್‌ನಲ್ಲಿ ಕರೆ ಮಾಡಿದಾಗ ಶಿಕ್ಷಕನ ಅಸಲಿಯತ್ತು ಬಯಲಾಗಿದೆ. ಫೋನಲ್ಲಿ ಮಾತಾಡುವ ವೇಳೆ ಹುಡುಗಿಯ ತಾಯಿ ತನ್ನ ಮಗಳ ಬಳಿ ನಿಂತಿದ್ದು ಫೋನನ್ನು ಸ್ಫೀಕರ್‌ನಲ್ಲಿ ಹಾಕುವಂತೆ ಹೇಳಿದ್ದರು. ಶಿಕ್ಷಕನ ಅಸಭ್ಯ ಮಾತು ಕೇಳಿ ಬಾಲಕಿಯ ತಾಯಿ ಬೆಚ್ಚಿಬಿದ್ದಿದ್ದರು. ಈ ಬಳಿಕ ಶಿಕ್ಷನ ಅಸಲಿ ಮುಖ ಬಹಿರಂಗಗೊಂಡಿದೆ. 

Latest Videos
Follow Us:
Download App:
  • android
  • ios