ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್‌ ಕಳ್ಳರ ಪತ್ತೆಹಚ್ಚಿದ ಗೂಗಲ್‌ ಪೇ

ರಸ್ತೆಬದಿಯಲ್ಲಿ ರಾಜಾರೋಷವಾಗಿ ಕಳ್ಳತನ ಮಾಡುತ್ತಾ ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್‌ ಕಳ್ಳರನ್ನು ಗೂಗಲ್‌ಪೇ ಸೆರೆಹಿಡಿದುಕೊಟ್ಟಿದೆ.

Google Pay detect Bengaluru coconut thieves in jayanagar police station Limit sat

ಬೆಂಗಳೂರು (ಆ.17): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಲವು ಏರಿಯಾಗಳಲ್ಲಿ ಗಾಡಿಗಳ ನಂಬರ್‌ ಪ್ಲೇಟ್‌ಗೆ ಮಸಿ ಬಳಿದುಕೊಂಡು ಹಾಗೂ ಮುಖಕ್ಕೆ ಮಂಕಿ ಕ್ಯಾಪ್‌ ಧರಿಸಿಕೊಂಡು ಬಂದು ಕಳ್ಳತನ ಮಾಡುತ್ತಿದ್ದರು. ಆದರೆ, ಈ ಖತರ್ನಾಕ್‌ ಕಳ್ಳರ ಬಗ್ಗೆ ಹಲವು ಸಿಸಿಟಿವಿ ಕ್ಯಾಮರಾಗಳ ಸುಳಿವು ಸಿಕ್ಕಿದ್ದರೂ ಬಂಧಿಸಲು ಸಾಧ್ಯವಾಗಿರಲಿಲ್ಲ. ಆದರೆ, ಮೊಬೈಲ್‌ನಲ್ಲಿ ಬಳಸುವ ಗೂಗಲ್‌ಪೇ ಕಳ್ಳರನ್ನು ಪೊಲೀಸರಿಗೆ ಹಿಡಿದು ಕೊಟ್ಟಿದೆ.

ಹೌದು ಕಳ್ಳರ ಕೈಚಳಕವೇ ಅಂತಹದ್ದು, ಕ್ಷಣಮಾತ್ರದಲ್ಲಿ, ಕಣ್ಣು ಮಿಟುಕೊಸೋ ಸಮಯದಲ್ಲಿ ಕದ್ದು ಪರಾರಿ ಆಗುವ ಅದೆಷ್ಟೋ ಪುಂಡರಿದ್ದಾರೆ. ಇನ್ನು ಕೆಲವರು ಎಲ್ಲರ ಎದುರಿಗೆ ಕಳ್ಳತನ ಮಾಡುತ್ತಿದ್ದರೂ ಇವರು ಸಾಮಾನ್ಯರೇನೋ ಎನ್ನುವಂತೆ ನಡೆದುಕೊಂಡು ಜನರನ್ನು ಯಾಮಾರಿಸುತ್ತಾರೆ. ಹೀಗೆಯೇ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ರಾಜಾರೋಷವಾಗಿ ಕಳ್ಳತನ ಮಾಡಿದರೂ ಅವರನ್ನು ಹಿಡಿಯಲು ಆಗಿರಲಿಲ್ಲ. ಇನ್ನು ಪೊಲೀಸರು, ಪೊಲೀಸ್‌ ಡಾಗ್‌ಗಳು ಹಾಗೂ ಸಿಸಿಟಿವಿಗಳ ಸುಳಿವು ಸಿಕ್ಕಿದ್ದರೂ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.

Phone pay, Google pay ಮೂಲಕ ಮನೆಯಲ್ಲಿ ಕುಳಿತು ಹಣ ಗಳಿಸಿ; ಇಲ್ಲಿದೆ ಉತ್ತಮ ಮಾರ್ಗ..!

ಎಂತಹ ಖತರ್ನಾಕ್‌ ಕಳ್ಳನಿದ್ದರೂ ಒಂದೆರೆಡು ಬಾರಿ ಯಾವುದೇ ಸುಳಿವು ಸಿಗದಂತೆ ಕಳ್ಳತನ ಮಾಡಬಹುದು. ಆದರೆ, ಮೂರನೇ ಬಾರಿಗಾದರೂ ಕಳ್ಳ ಯಾವುದಾದರೂ ಒಂದು ಸುಳಿವು ಬಿಟ್ಟು ಹೋಗುತ್ತಾನೆಂಬುದಕ್ಕೆ ಗೂಗಲ್‌ ಪೇ ಸಾಕ್ಷಿಯಾಗಿದೆ. ಇನ್ನು ಬೆಂಗಳೂರಿನಲ್ಲಿಯೂ ರಸ್ತೆ ಬದಿಯಲ್ಲಿಯೇ ಎಲ್ಲರ ಎದುರಿಗೆ ಕಳ್ಳತನ ಮಾಡಿ ಪರಾರಿ ಆಗುತ್ತಿದ್ದವರು ಒಂದು ದಿನ, ಬೆಳಗ್ಗಿನ ಜಾವ ಟೀ ಅಂಗಡಿಯ ಮುಂದೆ ತಮ್ಮಮ ವಾಹನವನ್ನು ನಿಲ್ಲಿಸಿ ಟೀ ಕುಡಿದಿದ್ದಾರೆ. ಈ ವೇಳೆ ತಮ್ಮ ಬಳಿ ಹಣವಿಲ್ಲದೇ ಗೂಗಲ್‌ಪೇಗೆ ಸ್ಕ್ಯಾನ್‌ ಮಾಡಿದ್ದಾರೆ.

ಪೊಲೀಸರಿಗೆ ಕಳ್ಳನ ಸುಳಿವು ಕೊಟ್ಟ ಗೂಗಲ್‌ ಪೇ: ಪೊಲೀಸರಿಗೆ ಇಷ್ಟೇ ಸುಳಿವು ಸಾಕಿತ್ತು. ಸಿಸಿಟಿವಿ ಆಧರಿಸಿ ಟೀ ಅಂಗಡಿ ಬಳಿ ಹೋದ ಪೊಲೀಸರು ಗೂಗಲ್‌ಪೇ ಮಾಡಿದ ಅಂಗಡಿ ಮಾಲೀಕನ ಟ್ರ್ಯಾನ್ಸಾಕ್ಷನ್‌ ಮಾಹಿತಿ ಪಡೆದಿದ್ದಾರೆ. ಆದರೆ, ಅಲ್ಲಿ ಮೊಬೈಲ್‌ ನಂಬರ್‌ ಪತ್ತೆಯಾಗದಿದ್ದಾಗ ಹೆಸರನ್ನು ಹುಡುಕಿ ಯಾವ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದಾರೆ ಎಂಬ ಮಾಹಿತಿ ತಿಳಿದು, ಆತನ ಮೊಬೈಲ್‌ ನಂಬರ್‌ ಮತ್ತು ವಿಳಾಸ ಆಧರಿಸಿಕೊಂಡು ಹೋಗು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ನಂತರ, ಆತನ ಜೊತೆಗಿದ್ದ ಇತರ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಅಷ್ಟಕ್ಕೂ ಇವರು ಕಳ್ಳತನ ಮಾಡುತ್ತಿದ್ದುದು ಏನು ಗೊತ್ತಾ? 
ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್‌ ಕಳ್ಳರು ತಾವು ಕಳ್ಳತನ ಮಾಡುತ್ತಿದ್ದುದು ಏನು ಗೊತ್ತಾ? ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಬಿಟ್ಟು ಹೋಗುತ್ತಿದ್ದ ಎಳನೀರನ್ನು. ರಸ್ತೆ ಬದಿಯಲ್ಲಿ ಎಳನೀರನ್ನು ಮಾರಾಟ ಮಾಡಿ, ಉಳಿದವುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಈ ಬಗ್ಗೆ ಒಂದು ದಿನ ಸುತ್ತಾಡಿ, ಎಳನೀರು ಮಾರುವವರ ಬಳಿಯೇ ಆಪ್ತರಂತೆ ವಿಚಾರಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದ ಕಳ್ಳರು, ರಾತ್ರಿ ಟಾಟಾ ಏಸ್‌ ವಾಹನದಲ್ಲಿ ಬಂದು ಎಲ್ಲ ಎಳನೀರು ತುಂಬಿಕೊಂಡು ಹೋಗಿ ಬೇರೆಡೆ ಮಾರಾಟ ಮಾಡುತ್ತಿದ್ದರು. ನಗರದ ವಿವಿಧ ಬಡಾವಣೆಗಳಲ್ಲಿ ಎಳನೀರು ಕಳ್ಳತನ ಆಗುತ್ತಿರುವ ದೂರುಗಳು ದಾಖಲಾಗುತ್ತಿದ್ದಂತೆ ಪೊಲೀಸರಿಗೆ ತಲೆನೋವಾಗಿತ್ತು. ಈಗ ಗೂಗಲ್‌ಪೇ ಸುಳಿವು ಆಧರಿಸಿ ಕಳ್ಳರನ್ನು ಬಂಧಿಸಿದ್ದು, ಎಳನೀರು ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 

Bengaluru crime: ವಾಟ್ಸಪ್‌ನಲ್ಲಿತ್ತು ಪತಿಯ ಸಲಿಂಗಕಾಮ ಪುರಾಣ: ಪತ್ನಿಯಿಂದ ಠಾಣೆಗೆ ದೂರು

ಬಂಧಿತ ಕಳ್ಳರು ಗೌತಮ್ , ರಘು ಹಾಗೂ ಮಣಿಕಂಠ ಎನ್ನುವವರಾಗಿದ್ದಾರೆ. ಇವರು ತಮ್ಮ ವಾಹನದ ನಂಬರ್‌ಪ್ಲೇಟ್‌ಗೆ ಮಸಿ ಬಳಿದುಕೊಂಡು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದರು. ಈ ಘಟನೆ ಸಂಬಂಧ ಎಳನೀರು ಮಾರಾಟ ಮಾಡುವ ಮಾಲೀಕ ಸಲೀಂ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುಮಾರು 20ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿ ಕಳ್ಳರನ್ನು ಪತ್ತೆಹಚ್ಚವಲ್ಲಿ ಜಯನಗರ ಪೊಲೀಸರು ಯಶಸ್ವಿ ಆಗಿದ್ದಾರೆ. ಈ ಕಳ್ಳರು ಹಿಂದೆಯೂ ಹಲವು ಕಳ್ಳತನ ಕೇಸುಗಳಲ್ಲಿ ಭಾಗಿಯಾಗಿದ್ದರು ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ.

Latest Videos
Follow Us:
Download App:
  • android
  • ios