ಪೂಜೆಯು ಉದ್ದೇಶಿಸಿದ ಪರಿಣಾಮ ಬೀರಲು ಇವುಗಳನ್ನು ಪೂಜಾ ಕೋಣೆಯಲ್ಲಿ ಭದ್ರವಾಗಿ ಇಡಬೇಕು ಎಂದು ಹೇಳಿ ಚಿನ್ನ ಮತ್ತು ಹಣವನ್ನು ಸ್ವಾಧೀನಪಡಿಸಿಕೊಂಡರು. ಬೆಲೆಬಾಳುವ ವಸ್ತುಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿದಾಗ ಆರೋಪಿಗಳು ಕುಟುಂಬದ ಎಲ್ಲ ಸದಸ್ಯರನ್ನು ಬಲಿ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾಟಮಂತ್ರ ಮಾಡುವ ನೆಪದಲ್ಲಿ ಕೇರಳದಲ್ಲಿ (Kerala) ಲಕ್ಷಾಂತರ ರೂ. ಚಿನ್ನ (Gold) ಹಾಗೂ ನಗದನ್ನು (Cash) ಕಳ್ಳತನ ಮಾಡಿರುವ ಪ್ರಕರಣ ಕೇರಳ ರಾಜಧಾನಿ ತಿರುವನಂತಪುರಂ (Thiruvananthapuram) ಬಳಿಯ ವೆಲ್ಲಾಯಣಿಯಿಂದ (Vellayani) ವರದಿಯಾಗಿದೆ. 55 ತೊಲ ಚಿನ್ನಾಭರಣ ಮತ್ತು 1.5 ಲಕ್ಷ ರೂ. ಹಣವನ್ನು ಕಯಿಕ್ಕವಿಲದ ಸ್ವಯಂಘೋಷಿತ ದೇವಮಾತೆ ಮತ್ತು ಆಕೆಯ ಸಹಚರರು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಪವೊಂದರ (Curse) ವಿಮೋಚನೆ ಮಾಡಲು ಪೂಜೆ ನಡೆಸಲು ಮನೆಗೆ ಬಂದಿದ್ದ ದೇವಮಾತೆ ಮತ್ತು ಸಹಚರರು ಲೂಟಿ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಪೂಜೆಯು ಉದ್ದೇಶಿಸಿದ ಪರಿಣಾಮ ಬೀರಲು ಇವುಗಳನ್ನು ಪೂಜಾ ಕೋಣೆಯಲ್ಲಿ ಭದ್ರವಾಗಿ ಇಡಬೇಕು ಎಂದು ಹೇಳಿ ಚಿನ್ನ ಮತ್ತು ಹಣವನ್ನು ಸ್ವಾಧೀನಪಡಿಸಿಕೊಂಡರು. ಬೆಲೆಬಾಳುವ ವಸ್ತುಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿದಾಗ ಆರೋಪಿಗಳು ಕುಟುಂಬದ ಎಲ್ಲ ಸದಸ್ಯರನ್ನು ಬಲಿ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಮಾಯಾಂಗನೆಯ ಮೋಹ: 40 ಲಕ್ಷ ರೂ. ಕಳೆದುಕೊಂಡ ಪ್ರಿಯತಮ
ಕುಟುಂಬದಲ್ಲಿನ ಸಾವಿನಿಂದ ಖಿನ್ನತೆಗೆ ಒಳಗಾದ ವೆಲಯಾಣಿಯ ಕೊಡಿಯಿಲ್ ಮನೆಯ ವಿಶ್ವಂಭರನ್ ಮತ್ತು ಅವರ ಮಕ್ಕಳು ತೆಟ್ಟಿಯೋಡೆ ದೇವಿ ಎಂದು ಹೇಳಿಕೊಳ್ಳುವ ಕಯಿಕ್ಕಾವಿಲಾದ ದೇವಮಾನವರ ಸಹಾಯವನ್ನು ಕೋರಿದ್ದರು. 2021 ರ ಆರಂಭದಲ್ಲಿ ಸ್ವಯಂಘೋಷಿತ ದೇವ ಮಾತೆ ವಿದ್ಯಾ ಮತ್ತು ನಾಲ್ವರು ಸದಸ್ಯರ ಗುಂಪು ವೆಲ್ಲಯಾನಿಯಲ್ಲಿರುವ ಅವರ ಮನೆಗೆ ತಲುಪಿತು. ಶೀಘ್ರದಲ್ಲೇ ಕುಟುಂಬದಲ್ಲಿ ಅಸಹಜ ಸಾವು ಸಂಭವಿಸಲಿದೆ ಎಂದು ಎಚ್ಚರಿಸುವ ಮೂಲಕ ವಿದ್ಯಾ ಕುಟುಂಬವನ್ನು ಹೆದರಿಸಿದರು. ಈ ಹಿನ್ನೆಲೆ ಅಣ್ಣನ ಹಠಾತ್ ನಿಧನದಿಂದ ನೊಂದಿದ್ದ ಗೃಹಿಣಿ ಇದನ್ನೇ ನಂಬಿದ್ದಾರೆ.
ಇದರ ಬೆನ್ನಲ್ಲೇ ಮನೆಯಲ್ಲಿದ್ದ ಕೋಣೆಯನ್ನು ಪೂಜಾ ಸ್ಥಳವನ್ನಾಗಿ ಮಾಡಲಾಗಿದೆ. ನಂತರ ಆ ಗುಂಪಿನ ಮುಂದಿನ ನಡೆ ದರೋಡೆಗೆ ಸೂಕ್ತವಾದ ಕೊಠಡಿ ಮತ್ತು ಬೀರುವನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿತ್ತು. ಈ ಹಿನ್ನೆಲೆ ಕತ್ತಲಲ್ಲಿಯೇ ಪೂಜೆಗಳು ನಡೆದವು. ದೇವಿಯನ್ನು ಒಲಿಸಿಕೊಳ್ಳಲು ಚಿನ್ನಾಭರಣ ಹಾಗೂ ಹಣವನ್ನು ಕಪಾಟಿನಲ್ಲಿ ಹಾಕಿದ ಬಳಿಕ ಪೂಜೆ ನಡೆಸುವಂತೆ ವಿದ್ಯಾ ನಿರ್ದೇಶನ ನೀಡಿದ್ದರು. ಹಾಗೂ, ಕೋಣೆಯಲ್ಲಿ ದೇವತೆ ಮತ್ತು ಅದೃಶ್ಯ ಅವಳಿ ತಲೆಯ ಸರ್ಪ ಇರುತ್ತದೆ ಎಂದು ಕುಟುಂಬದ ಸದಸ್ಯರಿಗೆ ತಿಳಿಸಲಾಯಿತು. ಈ ಹಿನ್ನೆಲೆ 15 ದಿನಗಳ ಕಾಲ ಬೀರು ತೆರೆಯದಂತೆ ತಿಳಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ವಿಜಯಪುರ: 3 ತಿಂಗಳಲ್ಲಿ 21 ಆನ್‌ಲೈನ್ ವಂಚನೆ ಪ್ರಕರಣ ದಾಖಲು
ಆದರೆ, 16ನೇ ದಿನವೂ ಬೀರು ತೆರೆಯಲು ದೇವಮಾತೆ ವಾಪಸ್ ಬರಲಿಲ್ಲ. ಈ ಬಗ್ಗೆ ಅವರನ್ನು ಕೇಳಿದಾಗ, ಶಾಪ ವಿಮೋಚನೆಗೊಯಾಗಲು ಇನ್ನೂ 3 ತಿಂಗಳು ಬೇಕು ಎಂದು ದೇವಮಾತೆ ಹೇಳಿದರು. ನಂತರ, ಆ ಸಮಯವನ್ನು ಒಂದು ವರ್ಷಕ್ಕೆ ವಿಸ್ತರಿಸಲಾಯಿತು. ಕೊನೆಗೆ ಹತಾಶೆಯಿಂದ ಕುಟುಂಬಸ್ಥರು ಬೀರು ತೆರೆದಾಗ ಅದರೊಳಗೆ ಚಿನ್ನ, ನಗದು ಇರಲಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ವಿದ್ಯಾ ಅವರನ್ನು ಸಂಪರ್ಕಿಸಿದಾಗ ಇಡೀ ಕುಟುಂಬವನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ, ಕಳೆದು ಹೋದ ಬೆಲೆಬಾಳುವ ವಸ್ತುಗಳನ್ನು ವಾಪಸ್ ಪಡೆಯಲು ಕುಟುಂಬಸ್ಥರು ಒಂದರ ಹಿಂದೆ ಒಂದರಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಮಧ್ಯೆ, ಸ್ವಯಂಘೋಷಿತ ದೇವಮಾತೆಯ ಜೊತೆಗೆ, ವಂಚಕರ ಗುಂಪು ಇದೇ ರೀತಿ ಇತರೆ ಮುಗ್ಧರನ್ನು ಹುಡುಕಾಟದ ನಡೆಸುತ್ತಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: Dharwad KIADB: ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ
