ವಿಜಯಪುರ: 3 ತಿಂಗಳಲ್ಲಿ 21 ಆನ್‌ಲೈನ್ ವಂಚನೆ ಪ್ರಕರಣ ದಾಖಲು
ವಿಜಯಪುರ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯಗಳ ಅಪರಾಧ ಪೊಲೀಸ್ ಠಾಣೆಯಲ್ಲಿ ಕಳೆದ 3 ತಿಂಗಳಲ್ಲಿ ಒಟ್ಟು 21 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.
ವಿಜಯಪುರ(ಡಿ.02): ಜಿಲ್ಲೆಯ ವಿವಿಧೆಡೆ ಕಳೆದ ಮೂರು ತಿಂಗಳಲ್ಲಿ ಒಟ್ಟು 21 ಆನಲೈನ್ ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 27 ನೊಂದ ದೂರುದಾರರಿಗೆ 40,91,794 ವಂಚನೆಯಾಗಿದೆ. ಈ ಪೈಕಿ 32,32,959 ಮೊತ್ತವನ್ನು ದೂರುದಾರರಿಗೆ ಮರಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜಯಪುರ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯಗಳ ಅಪರಾಧ ಪೊಲೀಸ್ ಠಾಣೆಯಲ್ಲಿ ಕಳೆದ 3 ತಿಂಗಳಲ್ಲಿ ಒಟ್ಟು 21 ಸೈಬರ್ ಅಪರಾಧ ಪ್ರಕರಣಗಳು (ಆನ್‌ಲೈನ್ ವಂಚನೆ) ದಾಖಲಾಗಿವೆ. ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 6 ಪ್ರಕರಣಗಳಲ್ಲಿ ಒಟ್ಟು . 8,66,303 ವಂಚನೆಯಾಗಿದ್ದು, ಪ್ರಕರಣದ ತನಿಖೆಯನ್ನು ಕೈಕೊಂಡು ನ್ಯಾಯಾಲಯದ ಆದೇಶದ ಪ್ರಕಾರ ನೊಂದ ದೂರುದಾರರ ಬ್ಯಾಂಕ್ ಖಾತೆಗಳಿಗೆ ಒಟ್ಟು . 6,22,383 ರೂ.ಗಳನ್ನು ಮರಳಿ ಜಮಾ ಮಾಡಲಾಗಿದೆ ಎಂದರು.
Vijayapura ಬೆತ್ತಲೆ ವಿಡಿಯೋ ಮಾಡಿ ಹಾಸನ 'ಪ್ರಿಯತಮೆ'ಯಿಂದ ದೋಖಾ: ₹ 40 ಲಕ್ಷ ಕಳೆದುಕೊಂಡ 'ಹೀರೋ'
ಇದಲ್ಲದೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 15 ಪ್ರಕರಣಗಳಲ್ಲಿ ಒಟ್ಟು . 24,94,493 ವಂಚನೆಯಾಗಿದ್ದು, ಪ್ರಕರಣದ ತನಿಖೆಯನ್ನು ಕೈಕೊಂಡು ಆರೋಪಿತರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು . 20,60,077 ಡೇಬಿಟ್ ಪ್ರೀಜ್ ಮಾಡಿಸಿದ್ದು, ಈ ಹಣವನ್ನು ಸಹ ನ್ಯಾಯಾಲಯದ ಆದೇಶ ಪಡೆದುಕೊಂಡು ದೂರುದಾರರಿಗೆ ಮರಳಿ ಕೊಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸೈಬರ್ ಆನ್‌ಲೈನ್ ವಂಚನೆಯಾದ ನೊಂದ ದೂರುದಾರರು ಗೋಲ್ಡ್‌ನ್ ಅವರ್ (1 ಗಂಟೆ ಒಳಗಾಗಿ) ನೇರವಾಗಿ ಪೊಲೀಸ್ ಠಾಣೆಗೆ ಬಂದು ವರದಿ ಮಾಡಿದ ಹಾಗೂ ಪೋರ್ಚ್‌ಲ್‌ನಲ್ಲಿ ದಾಖಲಿಸಿದ ದೂರುಗಳನ್ನು ಸಹ ತನಿಖೆ ಕೈಕೊಂಡು ನೊಂದ ದೂರುದಾರರಿಗೆ ಹಣ ಮರಳಿ ಜಮಾ ಮಾಡಿಸಲಾಗಿದೆ ಎಂದರು.
ಆನ್ ಲೈನ್ ವಂಚಕರು ಇಪಿಎಫ್ ಖಾತೆನೂ ಬಿಡ್ತಿಲ್ಲ; ಒಟಿಪಿ ಶೇರ್ ಮಾಡ್ಬೇಡಿ, ಖಾತೆದಾರರಿಗೆ ಇಪಿಎಫ್ಒ ಮನವಿ
ಕಳೆದ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ನೊಂದ 06 ಜನ ದೂರುದಾರರು ಫೋನ್‌ಮಾಡಿ ವರದಿ ನೀಡಿದ್ದರಲ್ಲಿ ಒಟ್ಟು . 7,30,998 ವಂಚನೆಯಾಗಿದ್ದು, ಅದರಲ್ಲಿ 06 ಜನ ದೂರುದಾರರಿಗೆ ಒಟ್ಟು . 5,50,499 ಗÜಳನ್ನು ಮರಳಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಅದೇ ತೆರನಾಗಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಒಟ್ಟು 27 ಜನ ದೂರುದಾರರಿಗೆ ಒಟ್ಟು . 40,91,794 ಗಳು ವಂಚನೆಯಾಗಿದ್ದು, ಈ ಮೊತ್ತದಲ್ಲಿ ಒಟ್ಟು . 32,32,959 ಗಳನ್ನು ನೊಂದ ದೂರುದಾರರಿಗೆ ಮರಳಿ ಕೊಡಿಸಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣಗಳ ತನಿಖೆ ಕುರಿತು ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಪೊಲೀಸ್ ಅಧಿಕಾರಿಗಳಾದ ಜೆ.ಎಸ್.ನ್ಯಾಮಗೌಡರ, ರಮೇಶ ಅವಜಿ, ಆರ್.ಎನ್. ಬಿರಾದಾರ, ಪಿಎಸ್‌ಐ ಪಿ.ವೈ. ಅಂಬಿಗೇರ, ಎ.ಎನ್.ಗುಡ್ಡೋಡಗಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಿದ್ದು, ಈ ತನಿಖಾ ತಂಡವು ಯಶಸ್ವಿ ಕಾರ್ಯಾಚರಣೆ ಮಾಡಿದೆ ಎಂದರು.