Asianet Suvarna News Asianet Suvarna News

Dharwad KIADB: ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ

ಧಾರವಾಡ ಕೆಐಎಡಿಬಿ ಅಧಿಕಾರಿಗಳು ಬರೊಬ್ಬರಿ 10 ಜನ ರೈತರ ಹೆಸರಲ್ಲಿ ಖೊಟ್ಟಿ ದಾಖಲೆ‌ ಸೃಷ್ಟಿಸಿ 21 ಕೋಟಿ ರೂ. ಹಣವನ್ನ ಎರಡನೇಯ ಬಾರಿಗೆ ಐಡಿಬಿಐ ಬ್ಯಾಂಕ್ ಮೂಲಕ  ಕಬಳಿಕೆ ಮಾಡಿದ್ದು ಸದ್ಯ ಮಾಹಿತಿ ಹಕ್ಕಿನ ಅಡಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

Dharwad KIADB Officer fraud  Creation of fake documents name of farmers rav
Author
First Published Dec 2, 2022, 1:09 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

 ಧಾರವಾಡ (ಡಿ.2) : ಧಾರವಾಡ ಕೆಐಎಡಿಬಿ ಅಧಿಕಾರಿಗಳು ಬರೊಬ್ಬರಿ 10 ಜನ ರೈತರ ಹೆಸರಲ್ಲಿ ಖೊಟ್ಟಿ ದಾಖಲೆ‌ ಸೃಷ್ಟಿಸಿ 21 ಕೋಟಿ ರೂ. ಹಣವನ್ನ ಎರಡನೇಯ ಬಾರಿಗೆ ಐಡಿಬಿಐ ಬ್ಯಾಂಕ್ ಮೂಲಕ ಹಣ ಕಬಳಿಕೆ ಮಾಡಿದ್ದು ಸದ್ಯ ಮಾಹಿತಿ ಹಕ್ಕಿನ ಅಡಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು ಈ ಕುರಿತು ಸಾಮಾಜಿಕ ಹೋರಾಟಗಾರ ಬಸವರಾಜ್ ಕೊರವರ ನೇರವಾಗಿ ಇಲಾಖೆಯ ಅಧಿಕಾರಿಗಳ ಮೆಲೆ ಗಂಭೀರ ಆರೋಪವನ್ನ ಮಾಡಿದ್ದಾರೆ. ಈ ಕುರಿತು ರೈತರರನ್ನ ಕೇಳಿದರೆ ನಾವು ಒಂದು ಸಲ ಮಾತ್ರ ನಮ್ಮ‌ ಜಮೀನಿಗೆ ಹಣವನ್ನ ಪರಿಹಾರ ರೂಪದಲ್ಲಿ ಪಡೆದುಕೊಂಡಿದ್ದೇವೆ. ಆದರೆ ಎರಡನೇಯ ಬಾರಿಗೆ ಹಣ ಪಡೆದುಕೊಂಡಿದ್ದು ನಮಗೆ ಗೊತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಧಾರವಾಡದಲ್ಲಿ ಯಾವ ಯಾವ ಗ್ರಾಮದ ರೈತರು ಕೆಐಎಡಿಬಿಗೆ ಜಮೀನು ಕೊಟ್ಟಿದ್ದಾರೆ ಎಷ್ಟು ಎಕರೆಗೆ ಯಾವ ವರ್ಷದಲ್ಲಿ ಪರಿಹಾರ ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಎಲ್ಲ ಮಾಹಿತಿಗಳು ಈ ಕೆಳಗಿನಂತಿವೆ.

ಜಮೀನೇ ಇಲ್ಲದ ರೈತರ ಹೆಸರಲ್ಲಿ ಕೋಟ್ಯಂತರ ರು. ಪಂಗನಾಮ..!

ಧಾರವಾಡ ಕೆಐಎಡಿಬಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ:

ರೈತ 1: ಮರಳಿಧರ್, ತಂದೆ ಶ್ರಿನಿವಾಸ್ ರಾವ್ ಜಾಹಗೀರದಾರ್ 

ಧಾರವಾಡ ತಾಲೂಕಿನ ಕೆಲಗೇರಿ ಗ್ರಾಮದ ಮುರಳಿಧರ ತಂದೆ ಶ್ರಿನಿವಾಸರಾವ್ ಜಾಹಗೀರದಾರ್ 06.09.2012 ರಂದು ಸರ್ವೇ ನಂಬರ 713/2 ರಲ್ಲಿ 15 ಎಕರೆ 33 ಗುಂಟೆ ಜಮೀನಿಗೆ ಚೆಕ್ ನಂ.572482  ರಲ್ಲಿ 4 ಕೋಟಿ 11 ಲಕ್ಷ 45 ಸಾವಿರ ಪರಿಹಾರ ಪಡೆದುಕೊಂಡಿದ್ದರು. ಮತ್ತೆ ಅವರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ದಿನಾಂಕ 31.01.2022 ರಂದು RTGS No. 332 ಮೂಲಕ ಐಡಿಬಿಐ ಬ್ಯಾಂಕ್ ಹುಬ್ಬಳ್ಳಿ ಮತ್ತೆ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ

 ರೈತ 2: ಮಿತ್ರಗೌಡ ಪಾಟೀಲ 

ಧಾರವಾಡ ತಾಲೂಕಿನ ಮಿತ್ರಗೌಡ ಪಾಟೀಲ, ಸರ್ವೇ ನಂ. 707 ರಲ್ಲಿ 9 ಎಕರೆ 27 ಗುಂಟೆ ಜಮಿನಿಗೆ  2 ಕೋಟಿ 51 ಲಕ್ಷ 55 ಸಾವಿರದ ಮೊತ್ತವನ್ನ 2012 ರಲ್ಲಿ ಪರಿಹಾರವನ್ನ‌ ಪಡೆದುಕೊಂಡಿದ್ದಾರೆ.  ಆದರೆ ಮತ್ತೆ ಅದೇ ರೈತನ ಹೆಸರಿನಲ್ಲಿ 01.04.2022 ರಲ್ಲಿ ಮತ್ತೆ‌ 2 ಕೋಟಿ, 51 ಲಕ್ಷ 55 ಸಾವಿರ ಹಣವನ್ನ RTGS No.5 ರ ಮೂಲಕ ಎರಡನೇ ಬಾರಿಗೆ ಹಣ ಬಿಡುಗಡೆ ಮಾಡಿದ್ದಾರೆ.

 ರೈತ 3 : ಬಸಪ್ಪ ನಾಗಪ್ಪ ಶಿರೂರ

ದಾರವಾಡ ತಾಲೂಕಿನ ಕೆಲಗೇರಿ ಗ್ರಾಮದ ರೈತ ಬಸಪ್ಪ ನಾಗಪ್ಪ ಶಿರೂರು ಅವರ ಸರ್ವೇ ನಂ 709 ರ 3 ಎಕರೆ ಜಮಿನಿಗೆ 22.05.2012 ರಲ್ಲಿ ಚೆಕ್ ನಂ 599409 ರ ಮುಖಾಂತರ 78 ಲಕ್ಷ ಪರಿಹಾರ ಬಿಡುಗಡೆಯಾಗಿದೆ,ಆದರೆ ಮತ್ತೆ ಅದೇ ರೈತನ ಹೆಸರಲ್ಲಿ 19.04.2022 ರಲ್ಲಿ RTGS No. 12 ರ ಮುಖಾಂತರ ಮತ್ತೆ ಮುಮ್ಮಿಗಟ್ಟಿಯ ಕೆವಿಜಿ ಬ್ಯಾಂಕ್ ನಲ್ಲಿ ಹಣ ಬಿಡುಗಡೆ ಯಾಗಿದೆ!

 ರೈತ 4: ಸಂಜಯ ಬಾಬಾಸಾಹೇಬ್ ದೇಸಾಯಿ, 

ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಸಂಜಯ್ ಬಾಬಾಸಾಹೇಬ್ ದೇಸಾಯಿ ಅವರ ಸರ್ವೇ.ನಂ.150 ರಲ್ಲಿ ಬರುವ 12 ಎಕರೆ 9 ಗುಂಟೆ, ಜಮೀನಿಗೆ , 25.07.2012 ರಲ್ಲಿ ಚೆಕ್ ನಂ 572241 ಮುಖಾಂತರ 3 ಕೋಟಿ, 32 ಲಕ್ಷ, 43 ಸಾವಿರ 438 ರೂಪಾಯಿ ಬಿಡುಗಡೆಯಾಗಿರುತ್ತದೆ. ಮತ್ತೆ 28.02.2022 ರಲ್ಲಿ RTGS No. 392 ರ ಮುಖಾಂತರ ಐಡಿಬಿಐ ಬ್ಯಾಂಕ್ ಹುಬ್ಬಳ್ಳಿಯ ಬ್ಯಾಂಕ್ ನಲ್ಲಿ ಪಡೆದುಕ್ಕೊಂಡಿದ್ದಾರೆ.

 ರೈತ 5 : ವರುಣಕುಮಾರ ಬಾಬಾಸಾಹೇಬ್ ದೇಸಾಯಿ.. 

ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ವರಣಕುಮಾರ ಬಾಬಾಸಾಹೇಬ್ ದೇಸಾಯಿ ಅವರ ಹೆಸರಿನ ಸರ್ವೇ ನಂ.40/1 ರಲ್ಲಿಯ 10 ಎಕರೆ 28 ಗುಂಟೆ ಜಮೀನಿಗೆ 04.01.2017 ರಲ್ಲಿ 1 ಕೋಟಿ 39 ಲಕ್ಷದ 10,000 ಹಣ ಬಿಡುಗಡೆ ಯಾಗಿರುತ್ತದೆ. ಮತ್ತೆ ಇದೇ ಸರ್ವೇ ನಂಬರ್‌ಗೆ ಹೆಸರು ಬದಲಾಯಿಸಿ ಶಾಂತಾಬಾಯಿ ಖಾನಾಪೂರ ಎಂದು ನಕಲಿ ಸೃಷ್ಟಿಸಿ ದಿನಾಂಕ 10.02.2022 ರಲ್ಲಿ RTGS No.357 ರ ಮುಖಾಂತರ ಮತ್ತೆ 57,61,734 ರೂಪಾಯಿನ್ನ ಬಿಡುಗಡೆ ಮಾಡಿಕೊಂಡಿದ್ದಾರೆ.

 ರೈತ 6: ಇಮಾಮಸಾಬ್ ನಬೀಸಾಬ್ ಶಿರೂರು 

ಧಾರವಾಡ ತಾಲೂಕಿನ ಕೋಟುರು ಗ್ರಾಮದ ಇಮಾಮ್ ಸಾಬ್ , ನಬೀಸಾಬ್ ಕೋಟುರು ಇವರ ಹೆಸರಿನ ಸರ್ವೆ ನಂ.635 ರ 2 ಎಕರೆ 06 ಗುಂಟೆ ಜಮೀನಿಗೆ  13.11.2018 ರಲ್ಲಿ ಪರಿಹಾರ RTGS No.42 ರ ಮುಖಾಂತರ 64,50,000 ಹಣ ಬಿಡುಗಡೆಯಾಗಿರುತ್ತದೆ. ಆದರೆ ಮತ್ತೆ ಇದೆ ಮಾಲೀಕಿ ಹೆಸರಿನಲ್ಲಿ ಮೆಹಬೂಬ್ ಸುಭಾನಿ ಶಿರೂರು ಎಂಬುವರ ಹೆಸರು ಸೃಷ್ಟಿಸಿ ಮತ್ತೆ RTGS No.42 ರ ಮೂಲಕ ಮತ್ತೆ 30.04.2022 ರಲ್ಲಿ 64,50,000 ಹಣವನ್ನ ಮತ್ತೆ‌ ಬಿಡುಗಡೆ ಮಾಡಿಕೊಂಡು ಹಣ ನುಂಗಿ ಹಾಕಿದ್ದಾರೆ. ಹೀಗೆ ಒಟ್ಡು 10 ಜನರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ರೂ.21 ಕೋಟಿ, 14 ಲಕ್ಷ 78 ಸಾವಿರದ 468 ಗಳಷ್ಟು ಹಣ ದುರುಪಯೋಗ ಪಡಿಸಿಕೊಂಡಿರುವ ಭ್ರಷ್ಟರು.

ಚಿಕ್ಕಬಳ್ಳಾಪುರ: ಅಮೆಜಾನ್‌ ಹೆಸರಿನಲ್ಲಿ ವ್ಯಕ್ತಿಗೆ 11 ಲಕ್ಷ ಪಂಗನಾಮ..!

ಈ ಪ್ರಕರಣದಲ್ಲಿ ಸುಮಾರು ಒಂದುನೂರು ಕೋಟಿಗೂ ಅಧಿಕ ಅಕ್ರಮ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ ಎಂದು ಗಂಬೀರ ಆರೋಪವನ್ನ ಮಾಡಿದ್ದಾರೆ. ಈಗಾಗಲೇ ನಮಗೆ ಲಭಿಸಿರುವ ಮಾಹಿತಿಗಳ ಪ್ರಕಾರ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ್  ಎಪ್ರಿಲ್ 2021 ರಿಂದ ಎಪ್ರಿಲ್ 2022 ರ ವರೆಗೆ  ಅಂದಾಜು 140 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ ಹೀಗಾಗಿ ಇದರಲ್ಲಿ ಹಿರಿಯ ಅಧಿಕಾರಿಗಳಾದ ಸಿಇಒ ಎನ್. ಶಿವಶಂಕರ್ ಐಎಎಸ್ ದಯಾನಂದ ಭಂಡಾರಿ ಕೆಎಎಸ್ ಹಾಗೂ ಕೈಗಾರಿಕೆ ಸಚಿವರ ಆಪ್ತ, ಎಸಿ ಗ್ರೇಡ್ ಅಧಿಕಾರಿ ದೊರೆಸ್ವಾಮಿ ವಿಶೇಷ ಭೂ ಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ, ವ್ಯವಸ್ಥಾಪಕರಾದ ಶಂಕರ ತಳವಾರ, ಶಿಂಪಿ, ದ್ವಿತೀಯ ದರ್ಜೆ ಸಹಾಯಕ ಅಮಿತ ಮುದ್ದಿ, ಜವಾನ ರಾಜು ಹೆಬ್ಬಳ್ಳಿ ಅವರು ಶಾಮೀಲು ಆಗಿದ್ದಾರೆ ಎಂಬುದು ತಿಳಿದು ಬಂದಿದೆ.

Follow Us:
Download App:
  • android
  • ios