ಕಚೇರಿಯಲ್ಲಿ ಸಿಕ್‌ ಲೀವ್‌, ಕ್ಲಬ್‌ನಲ್ಲಿ ಪಾರ್ಟಿ..ಎಣ್ಣೆ ಏಟಿನಲ್ಲಿ ಯುವತಿಗೆ ಕಿರುಕುಳ ನೀಡಿದ ಗೋವಾ ಡಿಐಜಿ!

ಗೋವಾದಲ್ಲಿ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರೇ ಎಣ್ಣೆ ಏಟಿನಲ್ಲಿ ಯುವತಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಇದರ ಬೆನ್ನಲ್ಲಿಯೇ ಗೋವಾ ಪೊಲೀಸ್‌ ಈ ಕುರಿತಾಗಿ ತನಿಖೆ ನಡೆಸುವಂತೆ ಆದೇಶ ನೀಡಿದೆ.

Goa Deputy Inspector General On sick leave drunk at pub molests woman probe ordered san

ಪಣಜಿ (ಆ.10):  ರಾಜ್ಯದ ಬಾಗಾ ಪಟ್ಟಣದ ಪಬ್‌ನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಗೋವಾ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ವಿರುದ್ಧ ತನಿಖೆ ಆರಂಭಿಸಲಾಗಿದೆ. ಎ ಕೋನ್ ಎಂದು ಗುರುತಿಸಲ್ಪಟ್ಟ ಡಿಐಜಿ ಈ ಹಿಂದೆ ದೆಹಲಿ ಪೊಲೀಸ್‌ನಲ್ಲಿ ವಿವಿಧ ಉನ್ನತ ಸ್ಥಾನಗಳನ್ನು ನಿಭಾಯಿಸಿದ್ದರು. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. 
ಮೂಲಗಳ ಪ್ರಕಾರ, ಘಟನೆಯ ಸಮಯದಲ್ಲಿ ಕೋನ್ ಮದ್ಯದ ಅಮಲಿನಲ್ಲಿದ್ದರು. ಗೋವಾ ರಾಜ್ಯದ ಪ್ರಮುಖ ರಾಜಕಾರಣಿಯ ಮಾಲೀಕತ್ವದ ಕ್ಲಬ್‌ನಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದ ಅವರು, ಮಹಿಳೆಯೊಂದಿಗೆ ಜಗಳವಾಡಿದ್ದಲ್ಲದೆ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡಿಐಜಿ ಮತ್ತು ಮಹಿಳೆ ಮಾತಿನ ಚಕಮಕಿಯಲ್ಲಿ ತೊಡಗಿದ್ದು ಕಂಡಿದೆ. ಕಿರುಕುಳ ನೀಡಿದ ಪೊಲೀಸ್‌ಗೆ ಮಹಿಳೆ ಕಪಾಳಮೋಕ್ಷ ಮಾಡಿದ ಬಳಿಕ ಈ ಘಟನೆ ನಡೆದಿದೆ.

ಪ್ರಕರಣದ ಪ್ರಾಥಮಿಕ ತನಿಕೆಯ ಪ್ರಕಾರ, ಡಿಐಜಿ ಕೋನ್‌ ಘಟನೆಯ ಸಮಯದಲ್ಲಿ ವೈದ್ಯಕೀಯ ರಜೆಯಲ್ಲಿದ್ದರು ಎಂದು ತಿಳಿದುಬಂದಿದೆ. ಘಟನೆಯನ್ನು ಗಮನಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಗೋವಾ ವಿಧಾನಸಭೆಯಲ್ಲೂ ಈ ವಿಷಯವನ್ನು ಕೈಗೆತ್ತಿಕೊಂಡಿದ್ದು, ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ವಿಪಕ್ಷಗಳು ಒತ್ತಾಯಿಸಿದೆ.

ಆಪಲ್ ಕಂಪನಿಯಿಂದ ವಾರನ್‌ ಬಫೆಟ್‌ಗೆ 1814 ಕೋಟಿ ರೂಪಾಯಿ ಡಿವಿಡೆಂಡ್‌!

ಈ ನಡುವೆ ಗೋವಾ ಸರ್ಕಾರ ಡಿಐಜಿ ಸ್ಥಾನದಿಂದ ಕೋನ್‌ಅನ್ನು ವಜಾ ಮಾಡಿದೆ. ಕೋನ್‌ 2009ರ ಎಜಿಎಂಯುಟಿ ಕೆಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದರು.

ಮುಳ್ಳುಹಂದಿಯನ್ನು ತಿನ್ನಲು ಯತ್ನಿಸಿದ ಹಾವು, ಮುಂದಾಗಿದ್ದೇನು?

Latest Videos
Follow Us:
Download App:
  • android
  • ios