ಎಂಸಿಎ ಪದವಿ ಪ್ರಥಮ ವರ್ಷ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿದ್ದಳು ಮತ್ತು ಅಣ್ಣಾವರಂನಿಂದ ದುವ್ವಾಡ ತಲುಪಿದ್ದಳು. ಪ್ಲಾಟ್‌ಫಾರ್ಮ್‌ನಲ್ಲಿ ಇಳಿಯುವಾಗ ಕಾಲು ತಿರುಚಿ ಹಳಿಯಲ್ಲಿ ಸಿಕ್ಕಿಹಾಕಿಕೊಂಡು ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಆಕೆ ಸಿಕ್ಕಿಹಾಕಿಕೊಂಡಳು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. 

ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿ (Visakhapatnam) ಪ್ಲಾಟ್‌ಫಾರ್ಮ್ (Platform) ಹಾಗೂ ರೈಲಿನ (Train) ನಡುವೆ ನಿನ್ನೆ ಯುವತಿ ಸಿಲುಕಿಕೊಂಡಿದ್ದಳು. ಈ ಘಟನೆಯ ವಿಡಿಯೋ ಸಹ ವೈರಲ್‌ (Viral Video) ಆಗಿತ್ತು. ರೈಲು ಹಾಗೂ ಪ್ಲಾಟ್‌ಫಾರ್ಮ್‌ ನಡುವೆ ಸಿಲುಕಿದ್ದ 20 ವರ್ಷದ ವಿದ್ಯಾರ್ಥಿನಿಯನ್ನು (Student) ರಕ್ಷಿಸಿದ್ದರೂ, ದುರದೃಷ್ಟಕರ ಘಟನೆಯೊಂದರಲ್ಲಿ ಆಕೆ ಮೃತಪಟ್ಟಿದ್ದಾಳೆ. ದುವ್ವಾಡ ರೈಲು ನಿಲ್ದಾಣದಲ್ಲಿ (Duvvada Railway station) ರೈಲಿನಿಂದ ಇಳಿಯುವಾಗ ಟ್ರೈನ್‌ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ ವಿದ್ಯಾರ್ಥಿನಿ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೆ ಶರಣಾಗಿದ್ದಾಳೆ. 

ಕಾಲೇಜೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶಶಿಕಲಾ ಅವರು ಗುಂಟೂರು ರಾಯಘಡ ಪ್ಯಾಸೆಂಜರ್‌ನಿಂದ ಕೆಳಗೆ ಇಳಿಯುತ್ತಿದ್ದಾಗ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಕಾಲು ಜಾರಿ ಬಿದ್ದಿದ್ದಳು. ಕೂಡಲೇ ರೈಲನ್ನು ನಿಲ್ಲಿಸಿ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲದೆ, ರೈಲ್ವೆ ಸಿಬ್ಬಂದಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ನಿನ್ನೆಯಿಂದ ಐಸಿಯುನಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಡಿಸೆಂಬರ್ 8 ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಇದನ್ನು ಓದಿ: ರೈಲು-ಫ್ಲಾಟ್‌ಫಾರ್ಮ್‌ ನಡುವೆ ಸಿಲುಕಿಕೊಂಡ ಯುವತಿ, ಫ್ಲಾಟ್‌ಫಾರ್ಮ್‌ ಒಡೆದು ರಕ್ಷಣೆ ಮಾಡಿದ ಸಿಬ್ಬಂದಿ!

Scroll to load tweet…

ಘಟನೆಯ ವಿವರ..
ಎಂಸಿಎ ಪದವಿ ಪ್ರಥಮ ವರ್ಷ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿದ್ದಳು ಮತ್ತು ಅಣ್ಣಾವರಂನಿಂದ ದುವ್ವಾಡ ತಲುಪಿದ್ದಳು. ಪ್ಲಾಟ್‌ಫಾರ್ಮ್‌ನಲ್ಲಿ ಇಳಿಯುವಾಗ ಕಾಲು ತಿರುಚಿ ಹಳಿಯಲ್ಲಿ ಸಿಕ್ಕಿಹಾಕಿಕೊಂಡು ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಆಕೆ ಸಿಕ್ಕಿಹಾಕಿಕೊಂಡಳು. ನಂತರ, ಒಂದೂವರೆ ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ರೈಲ್ವೆ ಅಧಿಕಾರಿಗಳು ಆಕೆಯನ್ನು ಹೊರತೆಗೆಯಲು ಪ್ಲಾಟ್‌ಫಾರ್ಮ್‌ನ ಒಂದು ಭಾಗವನ್ನು ಒಡೆಯಬೇಕಾಯಿತು. ಕೂಡಲೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ರಕ್ಷಣೆಯ ಕಾರ್ಯಕ್ಕಾಗಿ ಜಿಆರ್‌ಪಿ, ಆರ್‌ಪಿಎಫ್ ಮತ್ತು ರೈಲ್ವೆ ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ರೈಲಿಗೆ ಸಿಕ್ಕಿ ಹಾಕಿಕೊಂಡಿದ್ದ ಬ್ಯಾಗನ್ನು ಹೊರತೆಗೆದು ಯುವತಿಗೆ ಕೊಂಚ ಸಮಾಧಾನ ನೀಡಿದರು. ಆ ಬಳಿಕ ಫ್ಲಾಟ್‌ಫಾರ್ಮ್‌ನ ಅಂಚನ್ನು ಒಡೆದು ಆಕೆಯನ್ನು ಹೊರತೆಗೆದಿದ್ದಾರೆ. ಈ ಘಟನೆಯಲ್ಲಿ ಯುವರಿಗೆ ಸ್ವಲ್ಪ ಗಾಯವಾಗಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ, ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ವಂದೇ ಭಾರತ್ ರೈಲಿನ ಕಂಟಕ ನಿವಾರಿಸಲು 264 ಕೋಟಿ ರೂಪಾಯಿ ಖರ್ಚು!

ಹಾಗಂತ ಇಂಥ ಪ್ರಕರಣಗಳು ಮೊದಲ ಬಾರಿ ಏನೂ ನಡೆದಿಲ್ಲ. ಇತ್ತೀಚೆಗೆ ಭೋಪಾಲ್‌ನ ರಾಣಿ ಕಮಲಾಪತಿ ನಿಲ್ದಾಣದಲ್ಲಿ ಇದೇ ರೀತಿಯ ಘಟನೆಯನ್ನು ತಪ್ಪಿಸಲಾಗಿತ್ತು. ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನಿಂದ ಹೊರಗೆ ಬಿದ್ದಿದ್ದಲ್ಲದೆ, ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡಿದ್ದಳು. ಈ ವೇಳೆ, ಆರ್‌ಪಿಎಫ್ ಮತ್ತು ಜಿಆರ್‌ಪಿಎಫ್ ಯೋಧರು ಜನರ ಸಹಾಯದಿಂದ ರಕ್ಷಿಸಿದ್ದರು. ರೈಲಿನಿಂದ ಕೆಳಕ್ಕೆ ಬಿದ್ದ ಮಹಿಳೆಯನ್ನು ಯೋಧರು ರಕ್ಷಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಅಲ್ಲದೆ, ಫತೇಪುರ್‌ನ ಖಾಗಾ ರೈಲು ನಿಲ್ದಾಣದಲ್ಲಿ, ಪ್ರಯಾಣಿಕರ ಜಾಣ್ಮೆಯಿಂದ ದೊಡ್ಡ ಅವಘಡವೊಂದನ್ನು ತಪ್ಪಿಸಲಾಗಿತ್ತು. ಚಲಿಸುತ್ತಿದ್ದ ರೈಲು ಹತ್ತುವಾಗ ಕಾಲು ಜಾರಿ ರೈಲಿನಡಿಗೆ ಬಂದ ಯುವಕನನ್ನು ರೈಲು ಅಂದಾಜು 20 ಮೀಟರ್ ಎಳೆದೊಯ್ದು ಗಂಭೀರವಾಗಿ ಗಾಯಗೊಳಿಸಿತ್ತು. ಈ ವೇಳೆ, ಪ್ರಯಾಣಿಕರು ವ್ಯಕ್ತಿಯೊಬ್ಬ ಕೆಳಗೆ ಬೀಳುವುದನ್ನು ನೋಡಿ ಸರಪಳಿ ಎಳೆದು ಆತನ ಪ್ರಾಣ ಬಚಾವ್‌ ಮಾಡಿದ್ದರು. 

ಇದನ್ನೂ ಓದಿ: Viral Video: ಪೊಲೀಸರು ಎಸೆದ ತರಕಾರಿ ಎತ್ತಿಕೊಳ್ಳಲು ಹೋಗಿ ರೈಲು ಅಪಘಾತದಲ್ಲಿ 2 ಕಾಲು ಕಳೆದುಕೊಂಡ ವ್ಯಾಪಾರಿ..!