11 ವರ್ಷದ ಸ್ನೇಹಿತೆಯನ್ನು ಅತ್ಯಾಚಾರ ಮಾಡಲು ಮೂವರನ್ನು ಹೈರ್‌ ಮಾಡಿದ ಗೆಳತಿ

Mumbai POCSO case: ಅಪ್ರಾಪ್ತ ಬಾಲಕಿಯ ಮೇಲೆ ಸ್ನೇಹಿತರಿಂದಲೇ ಗೆಳತಿ ಅತ್ಯಾಚಾರ ಮಾಡಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೂವರು ಸ್ನೇಹಿತರನ್ನು ಕರೆಸಿ ಕಣ್ಣ ಮುಂದೆಯೇ ಅತ್ಯಾಚಾರ ಮಾಡಿಸಿ ವಿಕೃತಿ ಮೆರೆದ ಸ್ನೇಹಿತೆ ಮತ್ತುಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

girl hires three men to rape own friend who is minor in mumbai

ಮುಂಬೈ: ಇದೊಂದು ವಿಚಿತ್ರ ಪ್ರಕರಣ. 21 ವರ್ಷದ ಯುವತಿ ತನ್ನ 11 ವರ್ಷದ ಅಪ್ರಾಪ್ತ ಗೆಳತಿಯ ಮೇಲೆ ಸ್ನೇಹಿತರನ್ನು ಕರೆಸಿ ಅತ್ಯಾಚಾರ ಮಾಡಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೂರು ಯುವಕರು ಗೆಳತಿ ಹೇಳಿದ ಕಾರಣಕ್ಕೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ವೇಳೆ ಅಪ್ರಾಪ್ತೆಯ ಮೇಲೆ ಅತ್ಯಾಚಾರವಾಗುವುದನ್ನು ಗೆಳತಿ ನೋಡುತ್ತ ಖುಷಿ ಪಟ್ಟಿದ್ದಾಳೆ. ಘಟನೆ ನಡೆದ ಆರು ಗಂಟೆಗಳೊಳಗಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬುಧವಾರ ಮಧ್ಯ ರಾತ್ರಿ ಮುಂಬೈನ ವಿರಾರ್‌ ಏರಿಯಾದಲ್ಲಿ ಈ ಘಟನೆ ನಡೆದಿದೆ. 

ಬಾಲಕಿ ತನ್ನ ಫೋನ್‌ ರಿಪೇರಿಗೆಂದು ಮಂಗಳವಾರ ಸಂಜೆ ಮನೆ ಹತ್ತಿರವಿರುವ ಮೊಬೈಲ್ ಅಂಗಡಿಗೆ ಭೇಟಿ ಕೊಟ್ಟಿದ್ದಾಳೆ. ಈ ವೇಳೆ ಗೆಳತಿ ಅಲ್ಲಿ ಸಿಕ್ಕಿದ್ದಾಳೆ. ಅದಾದ ನಂತರ ಹಾಗೇ ಒಂದು ರೌಂಡ್‌ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾಳೆ. ನಂತರ ಆಕೆಯನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿದ್ದಾಳೆ. ಮುಂದಾಗುವ ದುರಂತದ ಅರಿವೇ ಇಲ್ಲದ ಅಪ್ರಾಪ್ತೆ ಸುಮ್ಮನೆ ಮಾತನಾಡುತ್ತಾ ಹೆಜ್ಜೆ ಹಾಕಿದ್ದಾಳೆ. ಅದಾದ ಬಳಿಕ ಯುವತಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾಳೆ. ಬಾಲಕಿಯನ್ನು ಗಣೇಶ ಹಬ್ಬಕ್ಕೆಂದು ಮಾಡಲಾಗಿರುವ ಪೆಂಡಾಲ್‌ ಬಳಿ ಕರೆದೊಯ್ದಿದ್ದಾರೆ. ಮಧ್ಯ ರಾತ್ರಿಯವರೆಗೂ ಆಕೆಯನ್ನು ಬಂಧಿಸಿಟ್ಟ ನಂತರ ಅಪ್ರಾಪ್ತೆಯನ್ನು ಸ್ನೇಹಿತನೊಬ್ಬನ ಜೊತೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವಂತೆ ಹೇಳಿದ್ಧಾಳೆ. 

ಇದನ್ನೂ ಓದಿ: ಮಗಳನ್ನು ರೇಪ್‌ ಮಾಡಲು ಯತ್ನಿಸಿದ ಲಿವ್ ಇನ್‌ ಪಾರ್ಟ್ನರ್‌ ಮರ್ಮಾಂಗವನ್ನೇ ಕತ್ತರಿಸಿದ ತಾಯಿ!

ಅಪ್ರಾಪ್ತೆ ಒಪ್ಪದಿದ್ದಾಗ, ಬಲವಂತದಿಂದ ಇಬ್ಬರು ಯುವಕರು ಒಬ್ಬರಾದ ಮೇಲೊಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇನ್ನೊಬ್ಬ ಯುವಕ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಎಲ್ಲಾ ಘಟನೆಯನ್ನೂ ಗೆಳತಿ ನೋಡುತ್ತಾ ನಕ್ಕಿದ್ದಾಳೆ. ಇದರಿಂದ ವಿಕೃತ ಸಂತೋಶ ಪಡೆದುಕೊಂಡಿದ್ದಾಳೆ. ಬುಧವಾರ ಬೆಳಗ್ಗೆ ಮುಂಚೆ ಬಾಲಕಿಯನ್ನು ಅವಳ ಮನೆ ಮುಂದೆ ಡ್ರಾಪ್‌ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. 

ಮನೆ ತಲುಪಿದ ಹುಡುಗಿ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಪೋಷಕರು ಬಾಲಕಿಯೊಂದಿಗೆ ಪೊಲೀಸ್‌ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಘಟನೆ ನಡೆದ ಆರು ಗಂಟೆಯೊಳಗೆ ಬಂಧಿಸಿದ್ದಾರೆ. ವಿರಾರ್‌ ಪೊಲೀಸ್‌ ಮೂಲಗಳ ಮಾಹಿತಿ ಪ್ರಕಾರ ಆರೋಪಿಗಳೆಲ್ಲರೂ ವಿರಾರ್‌ ಪ್ರದೇಶದಲ್ಲೇ ವಾಸವಾಗಿದ್ದಾರೆ. ಮೊದಲು ಸಂತ್ರಸ್ಥೆಯ ಗೆಳತಿಯನ್ನು ಬಂಧಿಸಿದ ಪೊಲೀಸರು ನಂತರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅದರಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿಯಾಗಿದ್ದು ಇನ್ನೊಬ್ಬ ತರಕಾರಿ ಮಾರುವವನಾಗಿದ್ದಾನೆ. ಇನ್ನೊಬ್ಬ ಆರೋಪಿ ಡ್ರಗ್ಸ್‌ ಜಾಲದಲ್ಲಿ ಸಕ್ರಿಯನಾಗಿದ್ದು ಆತನ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದು ಹುಡುಕಾಟ ಮಾಡಲಾಗುತ್ತಿದೆ. 

ಇದನ್ನೂ ಓದಿ: ವಿದ್ಯಾರ್ಥಿನಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ: ವಾಟ್ಸಾಪ್‌ ಮೂಲಕ ಅಶ್ಲೀಲ ಮೆಸೇಜ್‌ ಕಳಿಸಿದ ಕಾಮುಕ

ಆರೋಪಿಗಳ ಮೇಲೆ ಸಾಮೂಹಿಕ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಈಗಾಗಲೇ ಕೋರ್ಟ್‌ಗೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಈ ಕೃತ್ಯ ಯಾವ ಕಾರಣಕ್ಕಾಗಿ ಮಾಡಲಾಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

Latest Videos
Follow Us:
Download App:
  • android
  • ios