ತನ್ನ ಅಪ್ರಾಪ್ತ ಮಗಳನ್ನು ರೇಪ್‌ ಮಾಡಲು ಯತ್ನಿಸಿದ ಲಿವ್ ಇನ್‌ ಪಾರ್ಟ್ನರ್‌ನ ಮರ್ಮಾಂಗವನ್ನೇ ತಾಯಿ ಕತ್ತರಿಸಿದ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಳೆದ ಎರಡು ವರ್ಷಗಳಿಂದ 36 ವರ್ಷದ ಮಹಿಳೆ 32 ವರ್ಷದ ವ್ಯಕ್ತಿಯೊಂದಿಗೆ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದರು.

ಲಕ್ನೋ(ಆ. 18): ತನ್ನ 14 ವರ್ಷದ ಮಗಳ ಮೇಲೆ ಕಾಮದ ಕಣ್ಣು ಬೀರಿದ್ದಲ್ಲದೆ, ಆಕೆಯನ್ನು ರೇಪ್‌ ಮಾಡಲು ಯತ್ನಿಸಿದ ಲಿವ್‌ ಇನ್‌ ಪಾರ್ಟ್ನರ್‌ನ ಮರ್ಮಾಂಗವನ್ನೇ ತಾಯಿಯೊಬ್ಬಳು ಕತ್ತರಿಸಿದ ಪ್ರಕರಣ ಉತ್ತರ ಪ್ರದೇಶದ ಲಕೀಂಪುರ ಖೇರಿ ಜಿಲ್ಲೆಯ ಮಹದೇವ್‌ಗಂಜ್‌ನಲ್ಲಿ ನಡೆದಿದೆ. ಮದ್ಯವ್ಯಸನಿಯಾಗಿದ್ದ ಗಂಡನಿಂದ ದೂರವಾದ ಬಳಿಕ, ಕಳೆದ ಎರಡು ವರ್ಷಗಳಿಮದ 36 ವರ್ಷದ ಮಹಿಳೆ, 32 ವರ್ಷದ ಪುರುಷನೊಂದಿಗೆ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದರು. “ಘಟನೆಯ ಸಮಯದಲ್ಲಿ ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೆ. ಅದೃಷ್ಟವಶಾತ್ ಸಕಾಲದಲ್ಲಿ ಮನೆಗೆ ಹಿಂತಿರುಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ನನ್ನ ಮಗಳನ್ನು ಉಳಿಸಲು ಯತ್ನಿಸುತ್ತಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಅಡುಗೆ ಮನೆಯಿಂದ ಚಾಕು ತಂದು ಆತನ ಮರ್ಮಾಂಗವನ್ನು ಕತ್ತರಿಸಿದ್ದೇನೆ. ನಾನು ಮಾಡಿರುವ ಕೆಲಸದ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ' ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ. 32 ವರ್ಷದ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಲಖಿಂಪುರ ಠಾಣೆಯ ಎಸ್‌ಎಚ್‌ಒ ಚಂದ್ರಶೇಖರ್ ಸಿಂಗ್ ಸೈಡ್ ತಿಳಿಸಿದ್ದಾರೆ. ಆರೋಪಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ಮೇ ತಿಂಗಳಿನಲ್ಲಿ ಆಂಧ್ರಪ್ರದೇಶದಲ್ಲೂ (Andra Pradesh) ಇಂಥದ್ದೇ ಪ್ರಕರಣ ವರದಿಯಾಗಿತ್ತು. 22 ವರ್ಷದ ಹುಡುಗಿಯೊಬ್ಬಳು ತನ್ನ ತಾಯಿಯ ಪ್ರೇಮಿಯ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿದ್ದಳು. ಆಂಧ್ರಪ್ರದೇಶದ ತೆನಾಲಿ ಏರಿಯಾದಲ್ಲಿ ಈ ಘಟನೆ ನಡೆದಿತ್ತು. ಗಾಯಗೊಂಡ ವ್ಯಕ್ತಿಯನ್ನು 30 ವರ್ಷದ ರಾಮಚಂದ್ರ ರೆಡ್ಡಿ ಎಂದು ಗುರುತಿಸಲಾಗಿತ್ತು. ಈತ ಬಾಪಟ್ಲಾ ಜಿಲ್ಲೆಯ ಚೆರುಕುಪಲ್ಲಿ ಮಂಡಲದ ತುಮ್ಮಲಪಾಲಂ ಗ್ರಾಮದ ನಿವಾಸಿ ಆಗಿದ್ದ. ಇನ್ನು ತಮಿಳುನಾಡಿನಲ್ಲಿ ನಡೆದ ಘಟನೆಯೊಂದರಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪತಿಯ ಮರ್ಮಾಂಗಕ್ಕೆ ಪತ್ನಿಯು ಬಿಸಿ ಕುದಿ ನೀರನ್ನು ಸುರಿದ ಘಟನೆಯೂ ನಡೆದಿದೆ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಪತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪತಿಯನ್ನು ತಂಗರಾಜ್‌ ಎಂದು ಗುರುತಿಸಲಾಗಿದ್ದು, ಏಳು ವರ್ಷಗಳ ಹಿಂದೆ ಪ್ರಿಯಾ ಎನ್ನುವವಳು ವಿವಾಹವಾಗಿದ್ದ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ಪೊಲೀಸ್‌ ಅಲ್ಲ, 8 ತಿಂಗಳಿಂದ ಕೆಲಸ ಮಾಡ್ತಿದ್ದ ಇಡೀ ಪೊಲೀಸ್‌ ಸ್ಟೇಷನ್ನೇ ನಕಲಿ!

2016ರಲ್ಲಿ ನಡೆದಿತ್ತು ಇದೇ ರೀತಿಯ ಪ್ರಕರಣ: 2016ರಲ್ಲಿ ಇದೇ ರೀತಿಯ ಘಟನೆ ಕಾನ್ಪುರದ ಗೋವಿಂದ್‌ ನಗರದಲ್ಲಿ ನಡೆದಿತ್ತು. ಸತತ ನಾಲ್ಕು ವರ್ಷಗಳಿಂದ ತಂದೆಯಿಂದಲೇ ಅತ್ಯಚಾರಕ್ಕೆ ಒಳಗಾಗುತ್ತಿದ್ದ ಅಪ್ರಾಪ್ತ ಬಾಲಕಿ, ತಂದೆಯ ಮರ್ಮಾಂಗವನ್ನೇ ಕತ್ತರಿಸಲು ಪ್ರಯಯತ್ನಿಸಿದ್ದಳು. 

ಇದನ್ನೂ ಓದಿ: ಅನೈತಿಕ ಸಂಬಂಧದ ಶಂಕೆ; ಗಂಡನ ಮರ್ಮಾಂಗದ ಮೇಲೆ ಬಿಸಿ ನೀರು ಸುರಿದ ಹೆಂಡತಿ

ಅತ್ಯಾಚಾರಕ್ಕೆ ಒಳಗಾದ ಬಾಲಕಿಯು ನಾಲ್ಕು ಒಡಹುಟ್ಟಿದವರಲ್ಲಿ ಹಿರಿಯವಳಾಗಿದ್ದಳು. ತಾಯಿಗೆ ಪದೇ ಪದೇ ಆರೋಗ್ಯ ಕಾಡುತ್ತಿದ್ದ ಕಾರಣಕ್ಕೆ, ಹಿರಿಯ ಮಗಳ ಮೇಲೆ ತಂದೆ ಕಣ್ಣು ಹಾಕಿದ್ದಲ್ಲದೆ, ಸತತ ನಾಲ್ಕು ವರ್ಷಗಳ ಕಾಲ ಆಕೆಯನ್ನು ಅತ್ಯಾಚಾರ ಮಾಡಿದ್ದ. ತಾಯಿ ಕೆಲವು ಸಂಬಂಧಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂತ್ರಸ್ತೆಯ ಮದುವೆಯನ್ನು ನಿಶ್ಚಯಿಸಿದರು ಮತ್ತು ಇದು ತಂದೆಯನ್ನು ಕೆರಳಿಸಿತ್ತು. ಕೊನೆಗೆ ತಂಗಿ ಹಾಗೂ ತಮ್ಮಂದಿರು ಶಾಲೆಗೆ ಹೋಗಿದ್ದಾಗ ಹಾಗೂ ತಾಯಿ ವೈದ್ಯರನ್ನು ಭೇಟಿ ಮಾಡಲು ಹೋಗಿದ್ದಾಗ, ತಂದೆ ಮತ್ತೆ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ, ಬಾಲಕಿ ಅಡುಗೆ ಮನೆ ಹೊಕ್ಕು ಚಾಕವನ್ನು ತಂದಿದ್ದಲ್ಲದೆ, ತಂದೆಯ ಮರ್ಮಾಂಗವನ್ನೇ ಕತ್ತರಿಸುವ ಪ್ರಯತ್ನ ಮಾಡಿದ್ದಳು. ಪಶ್ಚಾತ್ತಾಪ ಪಡದ ತಂದೆ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಜನ್ಮದಿಂದಲೂ ನಾವಿಬ್ಬರೂ ಪ್ರೇಮಿಗಳು ಹಾಗಾಗಿ ಮಗಳನ್ನು ಪ್ರೀತಿಸುತ್ತಿದ್ದೆ ಎಂದಿದ್ದ ನಂತರ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿ ತಂದೆಯನ್ನು ಬಂಧನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಳು.