Asianet Suvarna News Asianet Suvarna News

ಬಾಯ್‌ಫ್ರೆಂಡ್ ಜೊತೆ ಸೇರಿ ತಂದೆ, ತಮ್ಮನನ್ನು ಕೊಚ್ಚಿ ಹಾಕಿ ಫ್ರೀಜರ್‌ನಲ್ಲಿಟ್ಟ ಬಾಲಕಿ!

ಹದಿನೈದು ವರ್ಷದ ಬಾಲಕಿ ತನ್ನ ಬಾಯ್‌ಫ್ರೆಂಡ್ ಸಹಾಯದಿಂದ ತಂದೆ ಹಾಗೂ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಾಲಕಿ ಇಬ್ಬರನ್ನೂ ಕೊಚ್ಚಿ ಕೊಂದು ಮೃತದೇಹವನ್ನು ಫ್ರೀಜರ್‌ನಲ್ಲಿಟ್ಟಿದ್ದಾಳೆ.

Girl arrested for killing her father and brother with boyfriends help, stuffed bodies in the freezer Vin
Author
First Published May 30, 2024, 2:45 PM IST

ಹದಿನೈದು ವರ್ಷದ ಬಾಲಕಿ ತನ್ನ ಬಾಯ್‌ಫ್ರೆಂಡ್ ಸಹಾಯದಿಂದ ತಂದೆ ಹಾಗೂ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶ ಜಬಲ್‌ಪುರದಲ್ಲಿ ನಡೆದಿದೆ. ಮೇ 29ರಂದು, ಮಾರ್ಚ್ 2024 ರಲ್ಲಿ ಜಬಲ್ಪುರದ ಸಿವಿಲ್ ಲೈನ್ಸ್ ಪ್ರದೇಶದ ಮಿಲೇನಿಯಮ್ ಸೊಸೈಟಿಯಲ್ಲಿ ತನ್ನ ತಂದೆ ಮತ್ತು 8 ವರ್ಷದ ಸಹೋದರನನ್ನು ಕೊಂದ 15 ವರ್ಷದ ಬಾಲಕಿಯನ್ನು ಬಂಧಿಸಲಾಯಿತು. ಉತ್ತರಾಖಂಡದ ಹರಿದ್ವಾರದಿಂದ ಪೊಲೀಸರು ಅಪ್ರಾಪ್ತ ಬಾಲಕಿಯನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಗೆಳೆಯ 19 ವರ್ಷದ ಮುಕುಲ್ ಸಿಂಗ್ ಅವಳಿ ಹತ್ಯೆಯಲ್ಲಿ ಬಾಲಕಿಗೆ ಸಹಾಯ ಮಾಡಿದ್ದಾನೆ.

ವರದಿಯ ಪ್ರಕಾರ, ಹುಡುಗಿಯ ಕುಟುಂಬವು ಇಬ್ಬರ ಸಂಬಂಧವನ್ನು ಒಪ್ಪಿಕೊಳ್ಳಲು ನಿರಾಕರಿಸಿತ್ತು. ಹೀಗಾಗಿ ಬಾಲಕಿ ಹಾಗೂ ಬಾಯ್‌ಫ್ರೆಂಡ್‌ ಸೆಪ್ಟೆಂಬರ್ 2023ರಲ್ಲಿ ಓಡಿಹೋಗಿದ್ದರು. ಮುಕುಲ್ ವಿರುದ್ಧ ದೂರು ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಸಂದರ್ಭದಲ್ಲಿ ಬಾಲಕಿಯ ತಂದೆಯನ್ನು ಕೊಲ್ಲಲು ಇವರಿಬ್ಬರೂ ಸಂಚು ರೂಪಿಸಿದ್ದರು. ತಂದೆಯನ್ನು ಕೊಲ್ಲುತ್ತಿರುವಾಗ,  ಸಹೋದರ ಎಚ್ಚರಗೊಂಡು ಕಿರುಚಿದ್ದ. ಈ ಸಂದರ್ಭದಲ್ಲಿ ಸಾಕ್ಷಿ ನಾಶಕ್ಕಾಗಿ ಆತನನ್ನು ಸಹ ಕೊಲೆ ಮಾಡಿದ್ದಾರೆ.

ಅನ್ಯಕೋಮಿನ ವ್ಯಕ್ತಿ ಮದುವೆಯಾಗಿದ್ದ ಮಹಿಳೆ ಸೇರಿ, ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆ!
 
ಪ್ರಕರಣದ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿ ಪ್ರಮೀಂದ್ರ ಡೋಬಲ್, 'ಬಾಲಕಿಯು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಸ್ಥಳೀಯರು ಕಂಡು ಆರಂಭದಲ್ಲಿ ನಗರದಲ್ಲಿ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಅವಳು ಅಪರಾಧವನ್ನು ಒಪ್ಪಿಕೊಂಡಳು ಮತ್ತು ತನ್ನ ಸಹಚರನ ಗುರುತನ್ನು ಬಹಿರಂಗಪಡಿಸಿದಳು. ನಾವು ಮುಕುಲ್‌ನನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಮುಂದುವರೆಸಿದ್ದೇವೆ' ಎಂದು ತಿಳಿಸಿದ್ದಾರೆ.

ವಿಚಾರಣೆ ವೇಳೆ, ಕೊಲೆ ಪ್ರಕರಣದಲ್ಲಿ ಬಂಧಿತ 15 ವರ್ಷದ ಬಾಲಕಿ ಮುಕುಲ್ ತನ್ನ ತಂದೆ ರಾಜ್‌ಕುಮಾರ್ ವಿಶ್ವಕರ್ಮನನ್ನು ಕೊಲ್ಲಲು ಯೋಜಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಕಿರಿಯ ಸಹೋದರನನ್ನು ಕೊಲ್ಲುವ ಯಾವುದೇ ಯೋಜನೆ ಇರಲಿಲ್ಲ ಆದರೆ ಘಟನೆಯ ಸಮಯದಲ್ಲಿ ಅವನು ಎಚ್ಚರಗೊಂಡ ಕಾರಣ ಅವನನ್ನೂ ಕೊಲೆ ಮಾಡಿದ್ದಾಗಿ ತಿಳಿಸಿದ್ದಾಳೆ. ತಂದೆಯನ್ನು ಕೊಂದ ಬಳಿಕ ಬಾಲಕಿ ಶವವನ್ನು ಕೊಚ್ಚಿ ಹಾಕಿದ್ದಾಳೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ತಂದೆಯ ದೇಹವನ್ನು ಅಡುಗೆಮನೆಯಲ್ಲಿ ಎಸೆದು ಸಹೋದರನ ಮೃತ ದೇಹವನ್ನು ಫ್ರೀಜರ್‌ನಲ್ಲಿ ಇಟ್ಟಿದಾಗಿ ಒಪ್ಪಿಕೊಂಡರು.

ಇವನೆಂಥಾ ಕಟುಕ, ಹೆಂಡತಿ ಕತ್ತು ತುಂಡರಿಸಿ ಕೋಳಿಯಂತೆ ಚರ್ಮ ಸುಲಿದ ಪತಿ!

ಮುಕುಲ್ ಮತ್ತು ಅಪ್ರಾಪ್ತ ಬಾಲಕಿ ನೆರೆಹೊರೆಯವರು. ಅವಳಿ ಹತ್ಯೆಯ ನಂತರ ಪರಾರಿಯಾಗಿದ್ದ ಮುಕುಲ್‌ ಗೋವಾ, ಬೆಂಗಳೂರು, ಮುಂಬೈ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಹಲವು ಸ್ಥಳಗಳಿಗೆ ಹೋಗಿ ಕೊನೆಗೆ ಹರಿದ್ವಾರ ತಲುಪಿ ಅಲ್ಲಿ ಅಪ್ರಾಪ್ತ ಬಾಲಕಿಯನ್ನು ಒಂಟಿಯಾಗಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

Latest Videos
Follow Us:
Download App:
  • android
  • ios