ವೃದ್ಧ ಜೋಡಿಯ ಕೊಲೆ ಮಾಡಿದ್ದು 12 ವರ್ಷದ ಚಿಂದಿ ಆಯುವ ಬಾಲಕ
ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನವೆಂಬರ್ 22 ರಂದು ನಡೆದ ವೃದ್ಧ ದಂಪತಿಯ ಕೊಲೆ ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಆಘಾತ ಕಾದಿದೆ. ಅದಕ್ಕೆ ಕಾರಣವಾಗಿದ್ದು, ಕೊಲೆ ಕೃತ್ಯವೆಸಗಿದ ಆರೋಪಿ ಇನ್ನೂ ಬಾಲಕ. ಅದೂ ಆತನಿಗಿನ್ನು ಕೇವಲ 12 ವರ್ಷ ಎಂಬುದು.
ಗಾಜಿಯಾಬಾದ್: ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನವೆಂಬರ್ 22 ರಂದು ನಡೆದ ವೃದ್ಧ ದಂಪತಿಯ ಕೊಲೆ ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಆಘಾತ ಕಾದಿದೆ. ಅದಕ್ಕೆ ಕಾರಣವಾಗಿದ್ದು, ಕೊಲೆ ಕೃತ್ಯವೆಸಗಿದ ಆರೋಪಿ ಇನ್ನೂ ಬಾಲಕ. ಅದೂ ಆತನಿಗಿನ್ನು ಕೇವಲ 12 ವರ್ಷ ಎಂಬುದು. ಈತನ ಜೊತೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗಾಜಿಯಾಬಾದ್‌ನ ಟ್ರೋನಿಕಾ ನಗರದಲ್ಲಿ 22 ರಂದು 60 ವರ್ಷದ ವೃದ್ಧ ಇಬ್ರಾಹಿಂ ಹಾಗೂ ಅವರ ಪತ್ನಿ 55 ವರ್ಷದ ಹಜ್ರಾ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಇಬ್ಬರ ಕುತ್ತಿಗೆಯನ್ನು ಬಟ್ಟೆಯಲ್ಲಿ ಹಿಸುಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಗಿಳಿದ ಪೊಲೀಸರು ವೃದ್ಧರಿಗೆ ಪರಿಚಯವಿರುವ ವ್ಯಕ್ತಿಗಳು ಮನೆಗೆ ಬಂದು ಹೋಗುವವರ ವಿಚಾರಣೆ ನಡೆಸಿದ್ದರು. ಈ ವೇಳೆ ಇವರನ್ನು ಹತ್ಯೆ ಮಾಡಿದ್ದು 12 ವರ್ಷದ ಬಾಲಕ ಎಂಬುದು ಬೆಳಕಿಗೆ ಬಂದಿದ್ದು, ಆತನೊಂದಿಗೆ ಆತನ ಈ ಕೃತ್ಯಕ್ಕೆ ಸಹಕರಿಸಿದ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ ಆಗಾಗ ಮನೆಗೆ ಬರುತ್ತಿದ್ದ ಆರೋಪಿ ಬಾಲಕ (Boy) ಕೊಲೆಯ (Murder) ಬಳಿಕ ತಲೆಮರೆಸಿಕೊಂಡಿದ್ದ, ಈ ಹಿನ್ನೆಲೆಯಲ್ಲಿ ಅನುಮಾನದಿಂದ ಆತನ ಹಿಂದೆ ಬಿದ್ದ ಪೊಲೀಸರು ಆತನೊಂದಿಗೆ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಈತ ಈ ವೃದ್ಧ ದಂಪತಿ (Elderly couple) ಬಳಿ ಬೇಕಾದಷ್ಟು ಹಣವಿದೆ ಎಂದು ಭಾವಿಸಿದ್ದು, ತನ್ನ ಇಬ್ಬರು ಗೆಳೆಯರ ಜೊತೆ ಈ ವಿಚಾರ ಚರ್ಚಿಸಿ ಈ ವೃದ್ಧ ದಂಪತಿಯ ಮನೆ ದರೋಡೆಗೆ ಸಂಚು ರೂಪಿಸಿದ್ದ. ನಂತರ ನವೆಂಬರ್ 22ರಂದು ಬೆಳಗಿನ ಜಾವ 2 ಗಂಟೆಗೆ ತನ್ನ ಸಹಚರರ ಜೊತೆ ವೃದ್ಧರು ವಾಸವಿದ್ದ ಮನೆಯ ಬಾಗಿಲು ಬಡಿದಿದ್ದಾನೆ. ಈ ವೇಳೆ ವೃದ್ಧೆ ಬಾಗಿಲು ತೆರೆದಿದ್ದು, ಆಕೆಯನ್ನು ಅಲ್ಲೇ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ನಂತರ ಮನೆಯೊಳಗೆ ನುಗ್ಗಿ ವೃದ್ಧನ ಉಸಿರುಕಟ್ಟಿಸಿ ಸಾಯಿಸಿದ್ದಾರೆ.
ದೇಗುಲ ನಿವೇಶನ ವಿಚಾರಕ್ಕೆ ಜೋಡಿ ಕೊಲೆ: ದೇವಸ್ಥಾನಕ್ಕಾಗಿ ಹೋರಾಡಿದವರಿಗೆ ಸಾವಿನ ಉಡುಗೊರೆ!
ಬಳಿಕ ಮನೆಯಲ್ಲಿದ್ದ 54 ಸಾವಿರ ರೂ. ಹಣ, ಬೆಳ್ಳಿ ಸರ (Cilver chain), ಮೊಬೈಲ್ (Mobile) ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದರು. ಈ ವೃದ್ಧ ದಂಪತಿತಮ್ಮ ಮಗಳು ಹಾಗೂ ಆಕೆಯ ಏಳು ಜನ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಹೀಗಾಗಿ ಮಾರನೇ ದಿನ ಬೆಳಗ್ಗೆ ವೃದ್ಧ ದಂಪತಿಯ ಮಗಳು ರಿಹಾನಾ (Rihana) ನಿದ್ರೆಯಿಂದ ಎಚ್ಚರಗೊಂಡು ನೋಡಿದಾಗ ತಮ್ಮ ತಂದೆ ತಾಯಿ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು, ಬಾಲಕ ಇಬ್ರಾಹಿಂ (Ibrahim) ಹಾಗೂ ಆತನ ಜೊತೆಗಾರರಾದ ಶಿವಂ (Shivam), ಮುಕೇಶ್ (Mukhesh) ಎಂಬುವವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಮೊದಲ ಆರೋಪಿ 12 ವರ್ಷದ ಈ ಬಾಲಕ ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ವೃದ್ಧ ದಂಪತಿಯ ಮನೆಗೆ ಆಗಾಗ ಬರುತ್ತಿದ್ದ ಈತನಿಗೆ ಇವರ ಬಳಿ ಬಹಳಷ್ಟು ಹಣವಿರುವ ಬಗ್ಗೆ ತಿಳಿದಿತ್ತು ಕೊಲೆಯ ಬಳಿಕ ಈ ಮೂವರು ಆರೋಪಿಗಳು ತಮ್ಮೂರಿಗೆ ಪರಾರಿಯಾಗಿದ್ದ ಈ ಆರೋಪಿಗಳು ಶಸ್ತ್ರಾಸ್ತ್ರ ಖರೀದಿಗೆ ಯೋಜನೆ ರೂಪಿಸಿ ಪಾತಕಲೋಕಕ್ಕೆ ಕಾಲಿಡುವ ಸಂಚು ರೂಪಿಸಿದ್ದರು ಎಂದು ತನಿಖೆ ನಡೆಸಿದ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Double Murder In Bengaluru : ಹೆಂಡತಿ ಹಾಗೂ ಅತ್ತೆಯನ್ನು ಎಳನೀರಿನಂತೆ ಕತ್ತರಿಸಿದ ಆರೋಪಿ!