Double Murder In Bengaluru : ಹೆಂಡತಿ ಹಾಗೂ ಅತ್ತೆಯನ್ನು ಎಳನೀರಿನಂತೆ ಕತ್ತರಿಸಿದ ಆರೋಪಿ!
ಬೆಂಗಳೂರಿನ ಮೂಡಲಪಾಳ್ಯದಲ್ಲಿ ನಡದ ಘಟನೆ
ಹೆಂಡತಿ ಹಾಗೂ ಅತ್ತೆಯನ್ನು ಎಳನೀರಿನಂತೆ ಕತ್ತರಿಸಿದ ಆರೋಪಿ
ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು (ಫೆ.22): ರಾಜ್ಯ ರಾಜಧಾನಿ ಬೆಂಗಳೂರು (Bengaluru) ಭೀಕರ ಜೋಡಿ ಕೊಲೆಗೆ (Double Murder) ಸಾಕ್ಷಿಯಾಗಿದೆ. ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಪತ್ನಿಯನ್ನು ಕೊಲೆ ಮಾಡಿದ ಆರೋಪಿ ಈ ವೇಳೆ ಅಡ್ಡ ಬಂದ ಅತ್ತೆಯ ಕಥೆಯನ್ನೂ ಮುಗಿಸಿದ್ದಾನೆ. ಮಂಗಳವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮೂಡಲಪಾಳ್ಯದಲ್ಲಿ(Moodalapalya) ಘಟನೆ ನಡೆಸಿದ್ದು, ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ (Govindaraja Nagar Police Station) ಪ್ರಕರಣ ದಾಖಲಾಗಿದೆ.
37 ವರ್ಷದ ಸಾವಿತ್ರಿ (Savithri) ಹಾಗೂ 60 ವರ್ಷ ವಯಸ್ಸಿನ ಸರೋಜಮ್ಮ(Sarojamma) ಮೃತರಾದವರು. ಸಾವಿತ್ರಿಯ ಪತಿ 47 ವರ್ಷದ ರವಿಕುಮಾರ್ (Ravikumar) ಅವರನ್ನು ಈಗಾಗಲೇ ಬಂಧನ ಮಾಡಲಾಗಿದೆ ಎಂದು ಗೋವಿಂದರಾಜನಗರ ಪೊಲೀಸರು ತಿಳಿಸಿದ್ದಾರೆ. ತೀರ್ಥಹಳ್ಳಿ ಮೂಲದ ದಂಪತಿಗಳು ಕಳೆದ 18 ವರ್ಷದ ಹಿಂದೆ ವಿವಾಹವಾಗಿದ್ದರು. ಆರು ತಿಂಗಳ ಹಿಂದೆಯಷ್ಟೇ ಮೂಡಲಪಾಳ್ಯಕ್ಕೆ ಬಂದು ಇಲ್ಲಿ ವಾಸವಾಗಿದ್ದರು. ಈ ಹಿಂದೆ ಎಳನೀರು ವ್ಯಾಪಾರ ಮಾಡುತ್ತದ್ದ ಆರೋಪಿ ರವಿಕುಮಾರ್, ಮೂಡಲಪಾಳ್ಯಕ್ಕೆ ಬಂದ ಬಳಿಕ ಬೇಕರಿಯೊಂದನ್ನು ಆರಂಭಿಸಿ ಅದರ ವ್ಯವಹಾರದಲ್ಲಿ ನಿರತರಾಗಿದ್ದರು.
ಹೆಂಡತಿಯ ಅನೈತಿಕ ಸಂಬಂಧ ಪ್ರಶ್ನಿಸಿ ಪ್ರತಿ ಬಾರಿ ರವಿಕುಮಾರ್ ಗಲಾಟೆ ಮಾಡುತ್ತಿದ್ದರು. ಇಷ್ಟಾದ್ರೂ ಕೂಡ ಹಳೆ ಚಾಳಿಯನ್ನ ಬಿಡಲು ಪತ್ನಿ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ರವಿಕುಮಾರ್ ಕೊಲೆ ಮಾಡಲು ಮುಂದಾಗಿದ್ದರು. ಮಕ್ಕಳನ್ನ ಕಾಲೇಜಿಗೆ ಬಿಟ್ಟು ವಾಪಸ್ ಮನೆಗೆ ಬಂದಿದ್ದ ರವಿ, ಬರುತ್ತಿದ್ದಂತೆ ಎಳನೀರು ಕತ್ತರಿಸುವ ಮಚ್ಚಿನಿಂದ ಸಾವಿತ್ರಿಯನ್ನು ಕೊಲೆ ಮಾಡಿದ್ದಾರೆ. ಈ ವೇಳೆ ಅಡ್ಡ ಬಂದಿದ್ದ ಅತ್ತೆ ಸರೋಜಮ್ಮನನ್ನು ಕೊಲೆ ಮಾಡಿದ್ದಾರೆ. ಗೋವಿಂದರಾಜನಗರ ಪೊಲೀಸರ ವಿಚಾರಣೆ ವೇಳೆ ರವಿಕುಮಾರ್ ಇದೆಲ್ಲವನ್ನು ಬಾಯ್ಬಿಟ್ಟಿದ್ದಾನೆ. ಸಾವಿತ್ರಿಗೆ ಸರೋಜಮ್ಮ ಕೂಡ ಸಹಾಯ ಮಾಡುತ್ತಿದ್ದರು. ಈ ಕಾರಣದಿಂದ ಅತ್ತೆಯನ್ನೂ ಕೊಲೆ ಮಾಡಿದ್ದಾಗಿ ಆರೋಪಿ ರವಿಕುಮಾರ್ ಹೇಳಿದ್ದಾರೆ.
Murder Cases: ಸುತ್ತಿಗೆಯಿಂದ ಹೊಡೆದು ಅತ್ತೆಯನ್ನೇ ಕೊಂದ ಸೊಸೆ..!
ಗಂಡನಿಂದ ನಿಂದನೆ, ಮಹಿಳೆಯ ಆತ್ಮಹತ್ಯೆ: ನೀನು ಕುರೂಪಿ,ಸುಂದರವಾಗಿಲ್ಲ ಎಂದು ಗಂಡನಿಂದ ಪದೇ ಪದೇ ನಿಂದನೆ ಕೇಳಿದ್ದ ಮಹಿಳೆಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದು,ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿಜೆ ಹಳ್ಳಿಯ (DJ Halli) ಈದ್ಗಾ ಮೊಹಲ್ಲಾದಲ್ಲಿ (Idgah Mohalla) ನಡೆದಿದೆ. 33 ವರ್ಷದ ಅನಿಶಾ (Aneesha) ಆತ್ಮಹತ್ಯೆ (Sucide) ಮಾಡಿಕೊಂಡ ಮಹಿಳೆ. ಫೆ. 18 ರಂದು ಈ ಘಟನೆ ನಡೆದಿದೆ. ಮೂರು ವರ್ಷದ ಹಿಂದೆ ನಿಜಾಮುದ್ದೀನ್ (Nijamudeen) ಜೊತೆಗೆ ಎರಡನೇ ಮದುವೆಯಾಗಿದ್ದ ಮಹಿಳಿಗೆ ದಂಪತಿಗೆ ಎರಡು ವರ್ಷ ಹಾಗೂ 6 ತಿಂಗಳ ಇಬ್ಬರು ಮಕ್ಕಳಿದ್ದಾರೆ
Shivamogga: ಹರ್ಷನ ಹತ್ಯೆಗೆ ಕಾರಣವೇನು..? ಸಹೋದರಿ ಹೀಗೆ ಹೇಳುತ್ತಾರೆ
ಮದುವೆಯಾದಾಗಿನಿಂದ ಗಂಡ ಹಾಗೂ ಅತ್ತೆಯಿಂದ ಕಿರುಕುಳ ಎದುರಿಸುತ್ತಿದ್ದಳು. ನೀನು ಕುರೂಪಿ,ಸುಂದರವಾಗಿಲ್ಲ ಬೇಗ ಸಾಯಿ ಬೇರೆ ಮದುವೆ ಆಗ್ತಿನಿ ಎಂದು ಗಂಡ ಪದೇ ಪದೇ ಹೇಳುತ್ತಿದ್ದ. ಗಂಡನ ಮಾತಿಗೆ ಆತನ ತಾಯಿ ಖಲೀಂಉನ್ನಿಸಾ ಕೂಡ ಸಾಥ್ ನೀಡುತ್ತಿದ್ದಳು. ಫೆ.17 ರಂದು ಗಂಡ ಹಾಗೂ ಅತ್ತೆ, ನೀನಿನ್ನೂ ಸತ್ತಿಲ್ವಲ್ಲ ಎಂದು ಬೈದಿದ್ದ. ಇದರಿಂದ ಬೇಸರಗೊಂಡಿದ್ದ ಆಕೆ. ಫೆ. 18ರ ಮುಂಜಾನೆ 12.30ರ ವೇಳೆಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಕಿ ನಂದಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಅನಿಶಾ ಸಾವಿಗೀಡಾಗಿದ್ದಾಳೆ. ಘಟನೆ ಸಂಬಂಧ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.