ಶಿವಮೊಗ್ಗ(ಜು.25): ಗಾಂಜಾ ಮಾರಾಟ ಮಾಡುತ್ತಿದ್ದ 3 ಆರೋಪಿಗಳನ್ನು ಬಂಧಿಸಿ ಪ್ರತ್ಯೇಕ 2 ಪ್ರಕರಣ ದಾಖಲಿಸಿ ರು. 22,400 ಮೌಲ್ಯದ 560 ಗ್ರಾಂ ತೂಕದ ಮಾದಕ ದ್ರವ್ಯ ಗಾಂಜಾ ವಶಕ್ಕೆ ಪಡೆಯಲಾಗಿದೆ. 

ನಗರದ ತುಂಗಾನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಟಿಪ್ಪು ನಗರ ಚಾನಲ್‌ ಹತ್ತಿರ ಮತ್ತು ಭದ್ರಾವತಿ ನಗರದ ನ್ಯೂ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಬೈಪಾಸ್‌ ವೀರಾಪುರ ರಸ್ತೆಯ ಬಳಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಂಬಂಧಪಟ್ಟ ಪಿಎಸ್‌ಐ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಮೂವರು ಆರೋಪಿಗಳನ್ನು ಬಂಧಿಸಿ, ರು. 22,400 ಮೌಲ್ಯದ 560 ಗ್ರಾಂ ತೂಕದ ಗಾಂಜಾ ಹಾಗೂ 1,800 ರುಪಾಯಿ ಮತ್ತು  6,000 ರುಪಾಯಿ ಮೌಲ್ಯದ 1 ಮೊಬೈಲ್‌ ಫೋನ್‌ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಶೊಹೇಬ್‌ (31) ಮತ್ತು ಸಯ್ಯದ್‌ ಹುಸೇನ್‌ (19) ಟಿಪ್ಪುನಗರ ಚಾನಲ್‌ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದು ಆರೋಪಿಗಳಿಂದ ರು. 2,400 ಮೌಲ್ಯದ 100 ಗ್ರಾಂ ತೂಕದ ಗಾಂಜಾ ಹಾಗೂ ರು. 1,800/- ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಧಾರವಾಡ: ಆಸ್ತಿಗಾಗಿ ಕೊಡಲಿಯಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

ಮೋಹನ(22) ಬೈಪಾಸ್‌ ವೀರಾಪುರ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದು, ಆರೋಪಿಗಳಿಂದ ರು. 20,000 ಮೌಲ್ಯದ 460 ಗ್ರಾಂ ತೂಕದ ಗಾಂಜಾ ಹಾಗೂ ರು. 6,000 ಮೌಲ್ಯದ ಮೊಬೈಲ್‌ ಫೋನ್‌ ವಶಕ್ಕೆ ಪಡೆಯಲಾಗಿದೆ. ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಗಾಂಜಾ ಮಾರಾಟ : ಒಬ್ಬ ಬಂಧನ

ಶಿವಮೊಗ್ಗ: ಸಾಗರ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ರೈಲ್ವೇ ಸ್ಟೇಷನ್‌ ಹತ್ತಿರ, ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಾಗರ ಟೌನ್‌ ಪೊಲೀಸ್‌ ಠಾಣೆಯ ಅಶೋಕ್‌ ಕುಮಾರ್‌ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಕಾರ್ಯಾಚರಣೆ ನಡೆಸಿ, ಆರೋಪಿ ಶಾಹಿದ್‌(24)ನನ್ನು ಬಂಧಿಸಲಾಗಿದೆ. 

ಆರೋಪಿಯಿಂದ ರು. 5,000 ಮೌಲ್ಯದ 215 ಗ್ರಾಂ ತೂಕದ ಗಾಂಜಾ ವಶ ಪಡಿಸಿಕೊಂಡು ಶಾಹಿದ್‌ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.