ಧಾರವಾಡ(ಜು.25): ಆಸ್ತಿ ವಿಚಾರವಾಗಿ ವ್ಯಕ್ತಿಯೊಬ್ಬನನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ಶಿವಪ್ಪ ಕೊಡಬಳಗಿ (38) ಎಂಬುವರೇ ಕೊಲೆಯಾದ ದುರ್ದೈವಿಯಾಗಿದ್ದಾರೆ. 

ಆಸ್ತಿಗಾಗಿ ಬರ್ಬರವಾಗಿ ಕೊಂದ ದುಷ್ಕರ್ಮಿಗಳು

ಜಮೀನು ವಿಚಾರದಲ್ಲಿ ಎರಡೂ ಕುಟುಂಬದ ನಡುವೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವೇಳೆಯಲ್ಲಿ ಕೊಡಲಿಯಿಂದ ಕೊಚ್ಚಿ ಶಿವಪ್ಪ ಕೊಡಬಳಗಿಯನ್ನ ಕೊಲೆ ಮಾಡಲಾಗಿದೆ. 

ವಿಜಯಪುರ: ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದ ಮಹಿಳೆ, ಯುವಕನ ಬರ್ಬರ ಕೊಲೆ..!

ಗಾಯಾಳುಗಳನ್ನ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಆಸ್ತಿ ವಿಷಯಕ್ಕೆ ನಡೆದ ಕೊಲೆ ನಡೆಸಿದ್ದರಿಂದ ಅಮ್ಮಿನಬಾವಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.