ಲಕ್ನೋ(ಸೆ. 28)  ಕುಖ್ಯಾತ ಗ್ಯಾಂಗ್ ಸ್ಟರ್ ನೊಬ್ಬನನ್ನು ಬಂಧಿಸಿ ಮುಂಬೈನಿಂದ ಲಕ್ನೋಗೆ ಕರೆದುಕೊಂಡು ಬರುತ್ತಿದ್ದಾಗ ಮಧ್ಯಪ್ರದೇಶದಲ್ಲಿ  ಕಾರು  ಪಲ್ಟಿಯಾಗಿ  ಗ್ಯಾಂಗ್ ಸ್ಟರ್ ಮೃತನಾಗಿದ್ದು ನಾಲ್ವರು ಪೊಲೀಸ್ ಸಿಬ್ಬಂದಿಗೆ  ಗಂಭೀರ ಗಾಯಗಳಾಗಿವೆ.

ಭಾನುವಾರ ಮುಂಜಾನೆ 6.30 ರ ಸುಮಾರಿಗೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಎನ್‌ಎಚ್ 26 ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.  ಗ್ಯಾಂಗ್ ಸ್ಟರ್  ಫಿರೋಜ್ ಅಲಿ ಅಲಿಯಾಸ್ ಶಮ್ಮಿಯನ್ನು ಬಂಧಿಸಿ  ಕರೆತರಲಾಗುತ್ತಿತ್ತು. ವಾಹನವನ್ನು ಪೊಲೀಸ್ ಸಿಬ್ಬಂದಿ  ಸುಲಭ್ ಮಿಶ್ರಾ ಚಾಲನೆ ಮಾಡುತ್ತಿದ್ದರು.

ನಾಲ್ಕನೇ ಮದುವೆಯಾಗಲು ಹೆತ್ತ ಕಂದನನ್ನೇ ಹತ್ಯೆ ಮಾಡಿದಳು

ಲಖನೌದ ಠಾಕೂರ್‌ಗಂಜ್ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಪಾಂಡೆ ಮತ್ತು ಕಾನ್‌ಸ್ಟೆಬಲ್ ಸಂಜೀವ್ ಸಿಂಗ್  ಆರೋಪಿಯ ಜಾಲ ಹುಡುಕಿಕೊಂಡು ಖಾಸಗಿ ವಾಹನದಲ್ಲಿ ಮುಂಬೈಗೆ ತೆರಳಿದ್ದರು  ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈನ ನಲಾ ಸೊಪಾರಾದಲ್ಲಿನ ಕೊಳೆಗೇರಿಯಲ್ಲಿ ಫಿರೋಜ್ ಅಲಿ ಬಲೆಗೆ ಬಿದ್ದಿದ್ದಾನೆ. ಅಲ್ಲಿಂದ ಲಕ್ನೋಗೆ ಕರೆದುಕೊಂಡು ಬರಲಾಗುತ್ತಿತ್ತು.  ಅಪಘಾತ ಸಂಭವಿಸಿದಾಗ ಫಿರೋಜ್ ಸೋದರ ಮಾವ ಅಫ್ಜಲ್ ಕೂಡ ಪೊಲೀಸರೊಂದಿಗೆ ಇದ್ದರು. ದರೋಡೆಕೋರನನ್ನು ಗುರುತಿಸಲು ಮತ್ತು ಅವನು ಇರುವ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಅಫ್ಜಲ್‌ನನ್ನು ಲಕ್ನೋಗೆ ಕರೆತರಲಾಗುತ್ತಿತ್ತು.

ಆಕಸ್ಮಿಕವಾಗಿ ಕಾರಿನ ಬಾಗಿಲೊಂದು ತೆರೆದುಕೊಂಡಿದೆ.  ಫಿರೋಜ್ ಅಲಿ, ಅಫ್ಜಲ್ ಮತ್ತು ಸಂಜೀವ್ ಅವರನ್ನು ಕಾರಿನಿಂದ ಹೊರಗೆ ಬಿದ್ದಿದ್ದಾರೆ.  ಆರೋಪಿ ಫಿರೋಜ್ ಅಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಜಗದೀಶ್, ಸಂಜೀವ್ ಮತ್ತು ಚಾಲಕ ಸುಲಭ್ ಎಂಬ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.  ಅಪಘಾತದಲ್ಲಿ ಅಫ್ಜಲ್ ಕೈ ಕೂಡ ಮುರಿದಿದೆ.

 ವೇಗವಾಗಿ ಚಲಿಸುತ್ತಿದ್ದ ವಾಹನದ ಎದುರು ಹಸು ಒಂದು ಕಾಣಿಸಿಕೊಂಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಆರಂಭಿಕ ಮಾಹಿತಿ ಹೇಳಿದೆ.