ಪಟ್ನಾ(ಸೆ. 27)  ಇದೊಂದು ದಾರುನ ಘಟನೆ, ನಾಲ್ಕನೇ ಸಾರಿ ಮದುವೆಯಾಗಬೇಕು ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ನಾಲ್ಕು ವರ್ಷದ ಕಂದನನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ .

ನಾಲ್ಕನೇ ಬಾರಿಗೆ ಮದುವೆಯಾಗಲು ಬಯಸಿದ್ದರಿಂದ 23 ವರ್ಷದ ಮಹಿಳೆ ತನ್ನ 4 ವರ್ಷದ ಮಗನನ್ನು ಮುಳುಗಿ ಸಾವನ್ನಪ್ಪಿದ್ದಾಳೆ. ಪಾಟ್ನಾದ ಹಸನ್ಪುರ್ ಖಂಡಾ ಪ್ರದೇಶದಿಂದ ಈ ಘಟನೆ ಬೆಳಕಿಗೆ ಬಂದ ನಂತರ ವಿಧವೆಯನ್ನು ಜೈಲಿಗೆ ಕಳುಹಿಸಲಾಗಿದೆ. ಶಹಜಹಾನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ  ಧರ್ಮಶೀಲಾ ದೇವಿಯನ್ನು ಬಂಧಿಸಲಾಗಿದೆ.  ಸಜನ್ ಕುಮಾರ್ ಎಂಬ ಬಾಲಕನನ್ನು ತಾಯಿಯೆ ಹತ್ಯೆ ಮಾಡಿದ್ದಾಳೆ.  ಬಾಲಕನಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ ಮತ್ತು ಕಿವುಡನಾಗಿದ್ದ.  ಮೊದಲ ಪತಿ ಅರುಣ್ ಚೌಧರಿಗೆ ಜನಸಿದ್ದ ಮಗುವಾಗಿತ್ತು.

ಮದುವೆಯಾಗಿ ಒಂದು ವರ್ಷಕ್ಕೆ ಧರ್ಮಶೀಲಾ ದೇವಿ ಗಂಡನನ್ನು ತೊರೆದಿದ್ದಳು.  ಈ ವೇಳೆಗಾಗಲೇ ಜನಸಿದ್ದ ಮಗುವನ್ನು ತನ್ನ ಜತೆಗೆ ಕರೆದುಕೊಂಡು ಬಂದಿದ್ದಳು. ಎರಡನೇ ಗಂಡ ನಿಧನವಾದ ಮೇಲೆ ಮಹೇಶ್ ಚೌಧರಿ ಎಂಬಾತನ ಮದುವೆಯಾಗಿದ್ದಳು.

ಎರಡು ತಿಂಗಳ ನಂತರ ಮಹೇಶ್ ಸಹ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ. ಮಹಿಳೆ ಮತ್ತೆ ಮದುವೆಯಾಗಲು ಬಯಸಿದ್ದು ಜತೆಗಿದ್ದ ಪುತ್ರ ಆಕೆಗೆ ಒಂದು ತಾಪತ್ರಯದಂತೆ ಕಾಣಲು ಆರಂಭಿಸಿದ್ದಾನೆ. ಇದೇ ಕಾರಣಕ್ಕೆ ಪುತ್ರನನ್ನೇ ಹತ್ಯೆ ಮಾಡಿದ್ದಾಳೆ.