ಕಳ್ಳರಿಗೆ ಉಚಿತ ಊಟ, ವಸತಿ ಜೊತೆ ಫಿಕ್ಸ್‌ ಸ್ಯಾಲರಿ, ಉದ್ಯೋಗ ಗಿಟ್ಟಿಸಿಕೊಳ್ಳೋದು ಸುಲಭವಲ್ಲ!

ಈಗ ಎಲ್ಲವೂ ಕಾರ್ಪೋರೇಟ್ ಆಗಿದೆ. ಕಳ್ಳತನ ಮಾಡೋರನ್ನು ಕೂಡ ಉದ್ಯೋಗಿಗಳು ಅಂತ ಪರಿಗಣಿಸುವ ಕಾಲ ಬಂದಿದೆ. ನಾವು ಸುಳ್ಳು ಹೇಳ್ತಿಲ್ಲ. ತಿಂಗಳ ಸಂಬಳ ನೀಡಿ, ಕಳ್ಳರನ್ನು ಕೆಲಸಕ್ಕೆ ನೇಮಿಸಿಕೊಳ್ತಿದ್ದ ಲೀಡರ್ ಒಬ್ಬ ಸಿಕ್ಕಿ ಬಿದ್ದಿದ್ದಾನೆ.
 

gang of thieves get fixed salary and travelling allowances roo

ಕೆಲಸಕ್ಕೆ ತಕ್ಕ ಸಂಬಳ (Salary) ಬೇಕು, ತಿಂಗಳಿಗೆ ಇಂತಿಷ್ಟು ಅಂತ ಸ್ಯಾಲರಿ ಫಿಕ್ಸ್ ಆದ್ರೆ ತಲೆ ಬಿಸಿ ಇಲ್ಲ ಎನ್ನುವವರ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಸಂಬಳದ ಜೊತೆ ಪ್ರಯಾಣ ಭತ್ಯೆ (travel allowance), ಅದು ಇದು ಅಂತ ಹೆಚ್ಚುವರಿ ಹಣ ನೀಡಿದ್ರೆ ಉದ್ಯೋಗಿಗಳು ಮತ್ತಷ್ಟು ಖುಷಿಯಾಗ್ತಾರೆ. ಹೆಚ್ಚುವರಿ ಸಂಬಳಕ್ಕೆ ತಡರಾತ್ರಿಯವರೆಗೆ ಓವರ್ ಟೈಂ ವರ್ಕ್ ಮಾಡುವವರಿದ್ದಾರೆ. ಈ ಎಲ್ಲ ಸೌಲಭ್ಯ ಸರ್ಕಾರಿ ನೌಕರಿ (Government Job), ಐಟಿಯಲ್ಲಿ ಮಾತ್ರವಲ್ಲ ಕಳ್ಳತನ ಮಾಡಿದ್ರೂ ಸಿಗುತ್ತೆ. ಶಾಕ್ ಆಗ್ಬೇಡಿ, ನಾವು ಹೇಳ್ತಿರೋದು ಸತ್ಯ. ಉತ್ತರ ಪ್ರದೇಶದಲ್ಲಿ ಕಳ್ಳರ ಗ್ಯಾಂಗ್ ಒಂದು ಸಿಕ್ಕಿ ಬಿದ್ದಿದೆ. ಗ್ಯಾಂಗ್ ಸದಸ್ಯರಿಗೆ ಲೀಡರ್ ನೀಡ್ತಿದ್ದ ಸೌಲಭ್ಯಗಳು ಅಚ್ಚರಿ ಹುಟ್ಟಿಸುವಂತಿವೆ.

ಕಳ್ಳರಿಗೆ  ತಿಂಗಳಿಗೆ ಸಿಗ್ತಿತ್ತು ಇಷ್ಟು ಸಂಬಳ ? : ಕಳ್ಳರ ಗ್ಯಾಂಗ್ (thieves gang ) ಲೀಡರ್, ಜಾರ್ಖಂಡ್ ಮೂಲದ 35 ವರ್ಷದ ಮನೋಜ್ ಮಂಡಲ್. ಈತನ ಜೊತೆ ಇನ್ನಿಬ್ಬರು ಕೆಲಸ ಮಾಡ್ತಿದ್ದಾರೆ. ಕರಣ್ ಕುಮಾರ್ ಗೆ 19 ವರ್ಷವಾದ್ರೆ ಇನ್ನೊಬ್ಬ ಅಪ್ರಾಪ್ತ. ಮನೋಜ್ ಮಂಡಲ್ ಇವರಿಬ್ಬರಿಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿ ಸಂಬಳ ನೀಡ್ತಿದ್ದ. ಅಷ್ಟೇ ಅಲ್ಲ ಕಳ್ಳತನ ಸಕ್ಸಸ್ ಆದ್ರೆ ಅದ್ರ ಲಾಭದಲ್ಲೂ ಹಣ ಸಿಗ್ತಿತ್ತು. ಪ್ರವಾಸ ಭತ್ಯೆಯನ್ನು ಮನೋಜ್ ನೀಡ್ತಿದ್ದ. ಉಚಿತ ವಸತಿ ಹಾಗೂ ಆಹಾರ ಸೌಲಭ್ಯಗಳನ್ನು ಕೂಡ ನೀಡಲಾಗಿತ್ತು.

ಸುಮ್ನೇ ಹೋಗ್ತಿದ್ದ ಬಸವನ ಹೊಡೆದ ಆಸಾಮಿ: ಮುಂದಾದದ್ದು ಮಾತ್ರ ಘೋರ ದುರಂತ- ವಿಡಿಯೋ ವೈರಲ್​

 ಜನನಿಬಿಡ ಮಾರುಕಟ್ಟೆ (Market) ಮತ್ತು ರೈಲು ನಿಲ್ದಾಣಗಳಲ್ಲಿ ಜನರ ಫೋನ್ ಕದಿಯುವುದರಲ್ಲಿ ಇವರು ನಿಪುಣರಾಗಿದ್ದರು. ಕದ್ದ ಫೋನ್‌ಗಳನ್ನು ಗ್ಯಾಂಗ್‌ಗೆ ಹಸ್ತಾಂತರಿಸುತ್ತಿದ್ದರು. ಅದನ್ನು ಗ್ಯಾಂಗ್ ಲೀಡರ್.  ಬಾಂಗ್ಲಾದೇಶ ಮತ್ತು ನೇಪಾಳದ ಗಡಿಯಲ್ಲಿ ಮಾರಾಟ ಮಾಡ್ತಿದ್ದ. 

ಕಳ್ಳರಿಗೆ ತರಬೇತಿ : ಮನೋಜ್ ತನ್ನ ಹಳ್ಳಿ ಸಾಹೇಬ್‌ಗಂಜ್‌ನಲ್ಲಿ ಕಳ್ಳತನ ಮಾಡಲು ಯೋಗ್ಯವಾದ ಹುಡುಗರನ್ನು ಪತ್ತೆ ಮಾಡುತ್ತಿದ್ದ. ಅವರನ್ನು ಸಿಟಿಗೆ ಕರೆತಂದು ತರಬೇತಿ ನೀಡುತ್ತಿದ್ದ. ಗ್ಯಾಂಗ್ ಸದಸ್ಯರು ಉತ್ತಮ ಬಟ್ಟೆಗಳನ್ನು ಧರಿಸುತ್ತಿದ್ದರು. ನಿರರ್ಗಳವಾಗಿ ಹಿಂದಿ ಮಾತನಾಡುತ್ತಿದ್ದರು. ಇದರಿಂದ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ ಪ್ರಯಾಣಿಸುವಾಗ ಯಾರಿಗೂ ಅನುಮಾನ ಬರ್ತಿರಲಿಲ್ಲ. ಕಳ್ಳತನದ ವೇಳೆ ಗಲಾಟೆಯಾದ್ರೆ ಶಸ್ತ್ರಾಸ್ತ್ರ ಬಳಸುವ ಬಗ್ಗೆ ಅವರಿಗೆ ತರಬೇತಿ ನೀಡಲಾಗ್ತಿತ್ತು. ಕೆಲವು ಬಾರಿ ಹುಡುಗ್ರು ಶಸ್ತ್ರಾಸ್ತ್ರ ಪ್ರಯೋಗ ಕೂಡ ಮಾಡಿದ್ದಾರೆ. ಶಸ್ತ್ರಾಸ್ತ್ರ ತರಬೇತಿ ವೇಳೆ ಪರೀಕ್ಷೆ ಕೂಡ ನಡೆಯುತ್ತಿತ್ತು. ಈ ಪರೀಕ್ಷೆಯಲ್ಲಿ ಪಾಸ್ ಆದ ವ್ಯಕ್ತಿಗೆ ಕೆಲಸ ಸಿಗ್ತಿತ್ತು.

ಬೆಳಗಾವಿ: ಠಾಣೆಯಲ್ಲಿ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ ಪೊಲೀಸ್ ಪೇದೆ

ಕಳ್ಳರ ಕೈಚಳಕ : ಕಳ್ಳರು ಉತ್ತರ ಪ್ರದೇಶದ ಗೋರಖ್‌ಪುರ, ಸಂತ ಕಬೀರ್ ನಗರ, ಮಹಾರಾಜ್‌ಗಂಜ್ ಸೇರಿದಂತೆ ಅನೇಕ ಕಡೆ ಕಳ್ಳತನ ಮಾಡ್ತಿದ್ದರು. ಕಳ್ಳತನಕ್ಕೂ ಮುನ್ನ ಗುರಿಯಾಗಿಸಿಕೊಂಡ ಫೋನ್ ಮಾದರಿಯ ಬೆಲೆಯನ್ನು ಆನ್ ಲೈನ್ ನಲ್ಲಿ  ಚೆಕ್ ಮಾಡ್ತಿದ್ದರು. ನಂತ್ರ ಕದ್ದ ಮೊಬೈಲನ್ನು ದರಕ್ಕಿಂತ ಶೇಕಡಾ 30 ರಿಂದ 40 ರಷ್ಟು ಹೆಚ್ಚಳ ಮಾಡಿ ಮಾರಾಟ ಮಾಡ್ತಿದ್ದರು. ಕದ್ದ ಫೋನ್‌ಗಳನ್ನು ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶಕ್ಕೆ ಮತ್ತು  ನೇಪಾಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು.  ಕಳ್ಳರ ಗ್ಯಾಂಗ್ ಪತ್ತೆ ಮಾಡೋದು ಪೊಲೀಸರಿಗೆ ಸುಲಭವಾಗಿರಲಿಲ್ಲ. ಒಂದು ವಾರಗಳ ಸತತ ಪ್ರಯತ್ನದ ನಂತ್ರ ಕಳ್ಳರು ಪೊಲೀಸ್ ಬಲೆಗೆ ಬಿದ್ದಿದ್ದಾರೆ. 10 ಲಕ್ಷ ಮೌಲ್ಯದ 44 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios